ಮದುವೆ ಖುಷಿಯಲ್ಲಿ ಬಗೆಬಗೆಯ ಬಟ್ಟೆ ಖರೀದಿ ಮಾಡುತ್ತಿರುವ ಸೋನಲ್ ;

 | 
ಗಗ
ಸ್ಯಾಂಡಲ್‌ವುಡ್‌ನ ಸ್ಟಾರ್ ನಿರ್ದೇಶಕ ತರುಣ್ ಸುಧೀರ್‌ ಗೃಹಸ್ಥಾಶ್ರಮಕ್ಕೆ ಕಾಲಿಡುತ್ತಿದ್ದಾರೆ. ಇಷ್ಟು ದಿನ ಸಿಂಗಲ್ ಆಗಿದ್ದ ತರುಣ್ ಸುಧೀರ್‌ ಇದೀಗ ತಮ್ಮ ಬ್ಯಾಚುಲರ್‌ ಲೈಫ್‌ಗೆ ಗುಡ್‌ ಬೈ ಹೇಳಲಿದ್ದಾರೆ. ತಮ್ಮ ಮನದೊಡತಿ ಸೋನಾಲ್ ಮಂಥೆರೊ ಅವರನ್ನ ತರುಣ್ ಸುಧೀರ್ ಮದುವೆಯಾಗುತ್ತಿದ್ದಾರೆ. ಕನ್ನಡದ ಖ್ಯಾತ ನಟಿ ಸೋನಾಲ್ ಮಂಥೆರೊ - ತರುಣ್ ಸುಧೀರ್ ಅವರಿಗೆ ಮದುವೆ ಫಿಕ್ಸ್ ಆಗಿದೆ. ಆಗಸ್ಟ್ 11 ರಂದು ತರುಣ್ ಸುಧೀರ್ - ಸೋನಾಲ್ ಮಂಥೆರೊ ವಿವಾಹ ಮಹೋತ್ಸವ ಜರುಗಲಿದೆ.
ಇನ್ನು ಕಲ್ಯಾಣಕ್ಕೆ ದಿನಗಣನೆ ಆರಂಭವಾಗಿದ್ದು, ಮದುವೆ ಶಾಪಿಂಗ್ ಆರಂಭಿಸಿದ್ದಾರೆ ವಧು ಸೋನಾಲ್ ಮಂಥೆರೊ. ತಾಯಿ ಜೊತೆ ತೆರಳಿ ಸೀರೆಗಳನ್ನ ಖರೀದಿಸಿದ್ದಾರೆ ಸೋನಾಲ್ ಮಂಥೆರೊ. ಸೀರೆ ಖರೀದಿಯಲ್ಲಿ ತೊಡಗಿರುವ ಸೋನಾಲ್ ಮಂಥೆರೊ ಹಾಗೂ ತಾಯಿಯ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ತರುಣ್ ಸುಧೀರ್ - ಸೋನಾಲ್ ಮಂಥೆರೊ ವಿವಾಹ ಆಗಸ್ಟ್ 11 ರಂದು ನಡೆಯಲಿದೆ. ಬೆಂಗಳೂರಿನ ಮೈಸೂರು ರೋಡ್‌ನಲ್ಲಿರುವ ಪೂರ್ಣಿಮಾ ಪ್ಯಾಲೇಸ್‌ನಲ್ಲಿ ಅದ್ಧೂರಿಯಾಗಿ ಮದುವೆಯಾಗಲಿದ್ದಾರೆ ಸೋನಾಲ್ ಮಂಥೆರೊ - ತರುಣ್ ಸುಧೀರ್.ಆಗಸ್ಟ್ 10 ರಂದು ಸಂಜೆ ಆರತಕ್ಷತೆ ನಡೆಯಲಿದ್ದು, ಆಗಸ್ಟ್ 11 ರಂದು ಭಾನುವಾರ ಬೆಳಗ್ಗೆ 10:50 ರಿಂದ 11.30 ರವರೆಗೆ ಇರುವ ಶುಭ ತುಲಾ ಲಗ್ನದಲ್ಲಿ ತರುಣ್ ಸುಧೀರ್ - ಸೋನಾಲ್ ಮಂಥೆರೊ ಮದುವೆ ಜರುಗಲಿದೆ.
ಅಷ್ಟಕ್ಕೂ ಮಂಗಳೂರು ಮೂಲದ ಸೋನಾಲ್ ಮಂಥೆರೊ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದವರು. ತರುಣ್ ಸುಧೀರ್‌ ಹಿಂದೂ. ಆಗಸ್ಟ್ 11 ರಂದು ಜರುಗಲಿರುವ ಮದುವೆ ಹಿಂದೂ ಸಂಪ್ರದಾಯದಂತೆ ನಡೆಯಲಿದೆ. ಅಂದ್ಹಾಗೆ, ತರುಣ್ ಸುಧೀರ್ ಹಾಗೂ ಸೋನಾಲ್ ಮಂಥೆರೊ ಮಧ್ಯೆ 10 ರಿಂದ 13 ವರ್ಷಗಳ ವಯಸ್ಸಿನ ಅಂತರವಿದೆ ಎನ್ನಲಾಗಿದೆ. 
ರಾಬರ್ಟ್ ಚಿತ್ರದ ಚಿತ್ರೀಕರಣದ ವೇಳೆ ತರುಣ್ ಸುಧೀರ್‌ಗೂ ಸೋನಾಲ್ ಮಂಥೆರೊಗೂ ದರ್ಶನ್ ರೇಗಿಸುತ್ತಿದ್ದರಂತೆ. ಈ ವೇಳೆ ಇಬ್ಬರ ಮನದಲ್ಲೂ ಪ್ರೀತಿ ಅರಳಿದೆ. ಇದೀಗ ಕುಟುಂಬಸ್ಥರ ಒಪ್ಪಿಗೆ ಪಡೆದು ತರುಣ್ ಸುಧೀರ್ - ಸೋನಾಲ್ ಮಂಥೆರೊ ಮದುವೆಯಾಗುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.