ಬಿ ಕಿನಿ‌ ತೊಟ್ಟು ಗಂಡನ ಮೊದಲ ಬರ್ತಡೆ ಆಚರಿಸಿದ ಸೋನಲ್‌, ಕನ್ನಡಿಗರು ಫಿದಾ

 | 
Jd
 ಕನ್ನಡ ಚಿತ್ರರಂಗದಲ್ಲಿ ನಟನಾಗಿ ಹಾಗೂ ನಿರ್ದೇಶಕನಾಗಿ ಗುರುತಿಸಿಕೊಂಡು ಚೌಕ, ಕಾಟೇರ, ರಾಬರ್ಟ್ ನಂತಹ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಖ್ಯಾತ ಖಳನಟ ಸುಧೀರ್ ಪುತ್ರ ತರುಣ್ ಸುಧೀರ್ ಅಕ್ಟೋಬರ್ 9 ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.
ಆಗಸ್ಟ್ ತಿಂಗಳಲ್ಲಿ ನಟಿ ಸೋನಲ್ ಮೊಂಥೆರೋ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ತರುಣ್ ಸುಧೀರ್, ಮದುವೆ ಬಳಿಕ ಮೊದಲ ಬಾರಿ ಪತ್ನಿ ಜೊತೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಈ ಬಾರಿ ವಿಶೇಷವಾಗಿ ಮಾಲ್ಡೀವ್ಸ್ ನಲ್ಲಿ ಈ ಜೋಡಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.
ಕೆಲ ಹಳೆಯ ಸಿನಿಮಾ ಕೆಲಸಗಳ ಮುಗಿಸಿ ಮದುವೆಯಾಗಿ ಎರಡು ತಿಂಗಳ ಬಳಿಕ ತಮ್ಮ ಡ್ರೀಮ್ ಡೆಸ್ಟಿನೇಶನ್ ಮಾಲ್ಡೀವ್ಸ್ ಗೆ ಹನಿಮೂನ್ ಗೆ ತೆರಳಿರುವ ಜೋಡಿ, ಈಗಾಗಲೇ ಅಲ್ಲಿ ಸ್ಪೆಷಲ್ ಆಗಿ ಕೇಕ್ ಕತ್ತರಿಸಿ ಸಂಭ್ರಮಿಸಿದ್ದು, ಫೋಟೊಗಳನ್ನು ತರುಣ್ ತಮ್ಮ ಸೋಶಿಯಲ್ ಮೀಡಿಯಾ ಸ್ಟೋರಿಯಲ್ಲಿ ಶೇರ್ ಮಾಡಿದ್ದರು.  
ಇದೀಗ ಸೋನಲ್ ಪತಿ ಜೊತೆಗಿನ ರೊಮ್ಯಾಂಟಿಕ್ ಫೋಟೊಗಳನ್ನು ಶೇರ್ ಮಾಡೊ ಮೂಲಕ ಅಷ್ಟೇ ರೊಮ್ಯಾಂಟಿಕ್ ಆಗಿ ವಿಶ್ ಮಾಡಿದ್ದಾರೆ. ಇತ್ತೀಚೆಗಷ್ಟೇ ಈ ಜೋಡಿ ದುಬೈಗೆ ತೆರಳಿದ್ದು, ಅಲ್ಲಿ ತೆಗೆದಂತಹ ಫೋಟೊಗಳು ಇವಾಗಿವೆ.  ದುಬೈನ ಮರುಭೂಮಿಯಲ್ಲಿ, ಇಬ್ಬರು ಕೈ ಕೈಹಿಡಿದು, ಕಣ್ಣೋಟ ಬೆರೆಸಿ, ಸೂರ್ಯಾಸ್ತಮಾನದ ಸೊಬಗಿನ ಹಿನ್ನೆಲೆಯಲ್ಲಿ ತೆಗೆಸಿಕೊಂಡಿರುವ ಫೋಟೊಗಳನ್ನು ಶೇರ್ ಮಾಡಿರುವ ಸೋನಲ್ 'ಪ್ರಪಂಚದ ಅತ್ಯಂತ ಪ್ರೀತಿಯ, ಕೇರ್ ಮಾಡುವ, ಮೃದು ಹೃದಯದ ಗಂಡನಿಗೆ ಹ್ಯಾಪಿ ಬರ್ತ್ ಡೇ ಎಂದು ಮುದ್ದಾಗಿ ಬರೆದುಕೊಂಡಿದ್ದಾರೆ.  
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.