ಸೋನು ಗೌಡಗೆ ದರ್ಶನ್ ‌ಅಭಿಮಾನಿಗಳಿಂದ ಕಿ ರುಕುಳ; ಸಿ ಡಿದೆದ್ದ ಕನ್ನಡಿಗರು

 | 
Hh

ಅದ್ಯಾಕೋ ಗೊತ್ತಿಲ್ಲ ಕಳೆದ ಕೆಲ ದಿನಗಳಿಂದ ಎಲ್ಲೆಲ್ಲೂ ನಟ ದರ್ಶನ್ ದೆ ಸುದ್ದಿ ಹೌದು ದರ್ಶನ್ ಅಭಿಮಾನಿಗಳು ಕೆಟ್ಟದಾಗಿ ಕಮೆಂಟ್ಸ್ ಮಾಡುತ್ತಿದ್ದಾರೆ ಎಂದು ಸೋಷಿಯಲ್ ಮೀಡಿಯಾ ಸೆಲೆಬ್ರಿಟಿ ಸೋನು ಶ್ರೀನಿವಾಸ್ ಗೌಡ ಹೇಳಿದ್ದಾರೆ. ದರ್ಶನ್ ಬಗ್ಗೆ ಮಾತನಾಡಿಲ್ಲವೆಂದು ಕೆಟ್ಟ ಕಮೆಂಟ್ಸ್​ಗಳನ್ನು ಮಾಡುತ್ತಿದ್ದಾರೆ ಎಂದು ಸೋನು ಗೌಡ ಹೇಳಿದ್ದಾರೆ.

ರೇಣುಕಾ ಸ್ವಾಮಿ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳಿಸಿದ್ದ ಎಂಬ ಕಾರಣಕ್ಕೆ ಈಗ ಆತನ ಕೊಲೆಯೇ ಆಗಿದೆ. ಕೊಲೆ ಪ್ರಕರಣದಲ್ಲಿ ದರ್ಶನ್ ಮತ್ತು ಅವರ ಸಹಚರರಲು ಆರೋಪಿಗಳಾಗಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಆದರೆ ಈಗ ಅದೇ ದರ್ಶನ್​ರ ಅಭಿಮಾನಿಗಳು ಕೆಲವು ನಟಿಯರಿಗೆ ಅವಾಚ್ಯವಾಗಿ ಬೈದು ಸಂದೇಶಗಳನ್ನು ಮಾಡುತ್ತಿದ್ದಾರೆ. ಈ ಬಗ್ಗೆ ನಟಿ, ಸೋಷಿಯಲ್ ಮೀಡಿಯಾ ಸೆಲೆಬ್ರಿಟಿ ಸೋನು ಗೌಡ ಮಾತನಾಡಿದ್ದಾರೆ.

ಕೆಲವು ದಿನಗಳ ಹಿಂದಷ್ಟೆ ವಿಡಿಯೋ ಒಂದರಲ್ಲಿ, ರೇಣುಕಾ ಸ್ವಾಮಿಯದ್ದು ಎನ್ನಲಾಗುತ್ತಿರುವ ಖಾತೆಯಿಂದ ನನಗೂ ಕೆಟ್ಟ ಸಂದೇಶ ಬಂದಿದೆ ಎಂದು ಸೋನು ಗೌಡ ಹೇಳಿದ್ದರು. ಇದೀಗ ಹೊಸ ವಿಡಿಯೋ ಒಂದನ್ನು ಹರಿಬಿಟ್ಟಿರುವ ನಟಿ, ತಮಗೆ ದರ್ಶನ್ ಅಭಿಮಾನಿಗಳಿಂದ ಕೆಟ್ಟ ಸಂದೇಶಗಳು, ಅವಾಚ್ಯ ಶಬ್ದಗಳನ್ನು ಬಳಸಿ ನಿಂದಿಸಿರುವ ಸಂದೇಶಗಳು ಬಂದಿವೆ ಎಂದಿದ್ದಾರೆ.

ತುಂಬಾ ಬ್ಯಾಡ್ ಕಮೆಂಟ್ಸ್, ಯೂಟ್ಯೂಬ್, ಇನ್​ಸ್ಟಾಂ, ಫೇಸ್​ಬುಕ್​ನಲ್ಲಿ ಹಾಕುತ್ತಿದ್ದಾರೆ. ನಿಮ್ಮ ಡಿ ಬಾಸ್ ದರ್ಶನ್ ಪರವಾಗಿ ಮಾತನಾಡಿಲ್ಲ ಎಂದು ಒತ್ತಾಯಿಸುತ್ತಲೇ ಇದ್ದಾರೆ. ನಾವು ಇನ್ನೂ ಚಿಕ್ಕೋರು, ಅವರ ಬಗ್ಗೆ ಮಾತನಾಡುವಷ್ಟು ನಾವಿನ್ನೂ ಬೆಳೆದಿಲ್ಲ. ನಾವು ಯಾರಿಗಾದರೂ ಒಮ್ಮೆ ಅಭಿಮಾನಿಯಾದರೆ ಸಾಯುವವರೆಗೆ ಅಭಿಮಾನಿಯಾಗಿಯೇ ಇರುತ್ತೇವೆ. ಯಾರೇ ತಪ್ಪು ಮಾಡಿರಲಿ ಅವರಿಗೆ ಶಿಕ್ಷೆ ಆಗಿಯೇ ಆಗುತ್ತೆ ಎಂದಿದ್ದಾರೆ ಸೋನು ಶ್ರೀನಿವಾಸ್ ಗೌಡ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.