ಕಷ್ಟ ಪಟ್ಟು ದುಡಿದ ಕೋಟ್ಯಾಂತರ ರೂಪಾಯಿ ಹಣದಲ್ಲಿ ಸಮಾಜ ಸೇವೆ ಮಾಡುತ್ತಿರುವ ಸೋನು ಗೌಡ

 | 
ಕ್

ಸದಾ ಒಂದಲ್ಲ ಒಂದು ವಿವಾದಗಳಿಂದ ಫೇಮಸ್ ಆಗಿರುವ ಸೋನು ಗೌಡ ಯಾರಿಗೆ ಗೊತ್ತಿಲ್ಲಾ ಹೇಳಿ.ಟಿಕ್‌ ಟಾಕ್‌, ಮ್ಯೂಸಿಕಲಿ ಮತ್ತು ರೀಲ್ಸ್‌ಗಳಿಂದ ಹೆಸರು ಮಾಡಿ ಸಾಕಷ್ಟು ಟ್ರೋಲ್ ಆಗಿರುವ ಸೋನು ಗೌಡ ಬಿಗ್ ಬಾಸ್ ಓಟಿಟಿ ಸೀಸನ್ 1ರಲ್ಲಿ ಕಾಣಿಸಿಕೊಂಡ ನಂತರ ನೇಮ್ ಆಂಡ್ ಫೇಮ್ ಕೊಂಚ ಫೇಮಸ್ ಅಯ್ತು. ಅಲ್ಲಿಂದ ಯುಟ್ಯೂಬ್ ಲೋಕಕ್ಕೆ ಕಾಲಿಟ್ಟ ಸೋನು ದಿನಚರಿ, ಶೂಟಿಂಗ್, ಫ್ಯಾಮಿಲಿ, ದಿನ ವ್ಲಾಗ್ ಸೇರಿದಂತೆ ಹಲವಾರು ವಿಚಾರಗಳನ್ನು ಅಪ್ಡೇಟ್ ಮಾಡುತ್ತಾರೆ. 

ಸೋನು ಎಷ್ಟೇ ಸರಿ ಇದ್ದರೂ ಟ್ರೋಲ್ ಎದುರಿಸುವುದು ತಪ್ಪಿದ್ದಲ್ಲ. ಈ ನಡುವೆ ಒಂದು ಮಹತ್ವದ ನಿರ್ಧಾರ ತೆಗೆದುಕೊಳ್ಳಲು ಮುಂದಾಗಿದ್ದಾಳೆ. ಹೌದು ಸೋನು ಗೌಡ ಮನೆ ಬಳಿ ಅಪರಿಚಿತರು ಮನೆ ಕಟ್ಟುತ್ತಿದ್ದಾರೆ. ಅ ಕಟಡದಲ್ಲಿ ರಾಯಚೂರಿನ ಕುಟುಂಬ ಒಂದು ವಾಸಿಸುತ್ತಿದ್ದಾರೆ. ಆ ಕುಟುಂಬದಲ್ಲಿ ನಾಲ್ಕು ಪುಟ್ಟ ಹೆಣ್ಣು ಮಕ್ಕಳಿದ್ದಾರೆ. ಬಿಡುವಿನ ಸಮಯದಲ್ಲಿ ಆ ಮಕ್ಕಳ ಜೊತೆ ಸೋನು ಆಟವಾಡುತ್ತಾರೆ. ನಾಲ್ಕು ಪುಟ್ಟ ಮಕ್ಕಳಲ್ಲಿ ಸೇವಂತಿ ದೊಡ್ಡವಳು. ಒಂದು ದಿನ ಸೇವಂತಿ ಜೊತೆ ಶಾಪಿಂಗ್ ಮಾಡಿದ್ದಾರೆ. 

ಆಕೆಗೆ ಇಷ್ಟವಾಗುವ ಬಟ್ಟೆ, ಚಪ್ಪಲಿ, ಲಿಪ್‌ಸ್ಟಿಕ್ ಮತ್ತು ತಿಂಡಿಗಳನ್ನು ಸೋನು ಗೌಡ ಕೊಡಿಸಿದ್ದಾರೆ. ಈ ವಿಡಿಯೋ ಅಪ್ಲೋಡ್ ಆದ ಮೇಲೆ ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸಿದ್ದರು. ಮತ್ತೊಂದು ದಿನ ಸೋನು ಆ ಹುಡುಗಿಯನ್ನು ಭೇಟಿ ಮಾಡಿ ಮನೆಗೆ ಕರೆದುಕೊಂಡು ಬಂದಿದ್ದಾರೆ. ಸೋನು ಕೊಡಿಸಿರುವ ಬಟ್ಟೆ ಮೇಕಪ್‌ಗಳನ್ನು ಧರಿಸಿ ಸೇವಂತೆ ಕ್ಯಾಮೆರಾ ಮುಂದೆ ಕಾಣಿಸಿಕೊಂಡಿದ್ದಾಳೆ. ಒಂದೆರಡು ತಿಂಗಳಿನಲ್ಲಿ ಆ ಕುಟುಂಬ ಮತ್ತೆ ರಾಯಚೂರಿನ ಕಡೆ ಹೋಗುತ್ತಿರುವ ಕಾರಣ ಸೋನು ಮಿಸ್ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ. 

ನಾಲ್ಕು ಹೆಣ್ಣು ಮಕ್ಕಳನ್ನು ಸಾಕುವುದು ಕಷ್ಟ ಆಗಬಹುದು ಅಲ್ಲದೆ ಸೇವಂತಿಗೆ ಓದಲು ತುಂಬಾನೇ ಇಷ್ಟ ಅವರ ಅಪ್ಪ ಅಮ್ಮನನ್ನು ಕೇಳಿ ದತ್ತು ತೆಗೆದುಕೊಳ್ಳುವುದಾಗಿ ಸೋನು ಹೇಳಿದ್ದಾರೆ. ಆಕೆಯನ್ನು ದತ್ತು ತೆಗೆದುಕೊಂಡು ಚೆನ್ನಾಗಿ ಓದಿಸಬೇಕು ಆಕೆಗೆ ಇರುವ ಕನಸುಗಳನ್ನು ಈಡೇರಿಸಬೇಕು ಎಂದು ಸೋನು ಹೇಳಿದ್ದಾರೆ. ಒಟ್ಟಿನಲ್ಲಿ ಈ ಬಾರಿ ಜನರ ಮನದಲ್ಲಿ ಸೋನು ಗೌಡ ಒಳ್ಳೆಯವಳು ಎಂಬ ಭಾವನೆ ಮೂಡಿದ್ದಂತು ಸತ್ಯ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.