ಜಿಮ್ ನಲ್ಲಿ ಬಾಡಿ ಮಾಡುತ್ತಿರುವ ಸೋನು ಗೌಡ, ಕನ್ನಡ ಚಿತ್ರರಂಗದಲ್ಲಿ ಟಾಪ್ ನಟಿಯಾಗಲು ಹರಸಾಹಸ

 | 
Jii
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್​ಬಾಸ್​ ಒಟಿಟಿ ಸೀಸನ್​ 1ರ ಮಾಜಿ ಸ್ಪರ್ಧಿ ಸೋನು ಶ್ರೀನಿವಾಸ್​ ಗೌಡ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಾರೆ. ಬಿಗ್​ಬಾಸ್ ಮನೆಗೆ​ ಹೋಗಿದ್ದಾಗಲೂ ಸಖತ್​ ಸುದ್ದಿಯಲ್ಲಿದ್ದರು ಸೋನು ಗೌಡ. ಇದೀಗ ಸೋನು ಶ್ರೀನಿವಾಸ್ ಗೌಡ ತಮ್ಮ ಹೊಸಾ ವಿಡಿಯೋ ಅಲ್ಲಿ ಹಳ್ಳಿ ಮನೆಗೆ ಹೋಗಿ ಟೈಮ್ ಪಾಸ್ ಮಾಡಿದ್ದಾಳೆ.
ಸೋಷಿಯಲ್​ ಮೀಡಿಯಾದಲ್ಲಿ ಹೊಸ ಹೊಸ ರೀಲ್ಸ್​ಗಳ ಮೂಲಕ ಸಖತ್​ ಸದ್ದು ಮಾಡುತ್ತಿದ್ದ ಸೋನು ಶ್ರೀನಿವಾಸ್​ ಗೌಡ ಕೆಲ ದಿನಗಳ ಹಿಂದಷ್ಟೇ ಬಹಳ ಅದ್ಧೂರಿಯಾಗಿ ಗೃಹ ಪ್ರವೇಶ ಮಾಡಿದ್ದಾರೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೆಎಂ ದೊಡ್ಡಯಲ್ಲಿ ತಮ್ಮ ಹೊಸ ಮನೆ ಕಟ್ಟಿಸಿದ್ದಾರೆ. ಇನ್ನೂ ಹೊಸ ಮನೆಗೆ ಪ್ರವೇಶ ಮಾಡಿದ ಫೋಟೋಗಳನ್ನು ಹಾಗೂ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಇನ್ನು ಸೋನು ಗೌಡ, ಸದ್ಯದಲ್ಲೇ ನನ್ನ ಮದುವೆ ಬಗ್ಗೆ ಅನೌನ್ಸ್ ಮಾಡುತ್ತೀನಿ. ಎಲ್ಲರ ಮದುವೆ ನೋಡಿ ನೋಡಿ ನನಗೂ ಮದುವೆ ಆಗಬೇಕು ಅಂತ ಅನೀಸುತ್ತಿದೆ. ಹುಡುಗು ಯಾರು ಅಂತ ತಿಳಿದುಕೊಳ್ಳಬೇಕಾದರೇ ಕಾಮೆಂಟ್ಸ್ ಮಾಡಿ ಅಂತ ಹೇಳಿದ್ದರು. ಆದರೆ ಹುಡುಗ ಯಾರು, ಯಾವಾಗ ಮದುವೆ ಅಂತ ಸೋನು ಗೌಡ ಹೇಳಿಕೊಂಡಿಲ್ಲ. ಆದಷ್ಟು ಬೇಗ ಅದರ ಬಗ್ಗೆ ಕೂಡ ಅಪ್ಡೇಟ್ ಕೊಡುತ್ತೇನೆ ಅಂತ ಅವರೇ ಹೇಳಿಕೊಂಡಿದ್ದಾರೆ.
ಸದ್ಯ ಸೋನು ಶ್ರೀನಿವಾಸ್ ಗೌಡ ಅವರು ಸೋಷಿಯಲ್ ಮೀಡಿಯಾದಲ್ಲಿ ತುಂಬಾನೇ ಌಕ್ಟೀವ್ ಆಗಿದ್ದಾರೆ. ಹೊಸ ಹೊಸ ರೀಲ್ಸ್​ ಶೇರ್ ಮಾಡಿಕೊಳ್ಳುತ್ತಾ ಸುದ್ದಿಯಲ್ಲಿ ಇರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ಸೋನು ಗೌಡ, ಬರೋಬ್ಬರಿ 1.1 ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ. ಸದ್ಯಕ್ಕಂತೂ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಫೋಟೊಗಳ ಮೂಲಕವೇ ಸದ್ದು ಮಾಡ್ತಿರ್ತಾರೆ.