ಬಡ ಮಹಿಳೆಯ ಹೋಟೆಲ್ ಗೆ ಭೇಟಿ ಕೊಟ್ಟು ಹೊಟ್ಟೆ ತುಂಬಾ ಊಟ ಮಾಡಿದ ಸೋನು ಸೊದ್
ಒಂದು ಒಳ್ಳೆಯ ಕಾರ್ಯಕ್ಕೆ ಹಲವರ ಕೈಗಳು ಗೊತ್ತಿಲ್ಲದೆಯೇ ಜೊತೆಯಾಗುತ್ತವೆ. ಸೂದ್ ಅವರ ವಿಷಯದಲ್ಲೂ ಅದು ನಿಜವಾಯಿತು. 47 ವರ್ಷದ ಸೋನು ಸೂದ್ ಕೂಡ 20 ವರ್ಷ ಹಿಂದೆ ಇದೇ ರೀತಿ ವಲಸಿಗರಾಗಿಯೇ ಮುಂಬಯಿಗೆ ಬಂದವರು. ಅದಕ್ಕೇ ಇರಬೇಕು, ವಲಸಿಗರ ನೋವು ಎಲ್ಲರಿಗಿಂತ ಮೊದಲು ಅವರಿಗೆ ತಟ್ಟಿದ್ದು.ಪಂಜಾಬ್‌ನ ಮೋಗಾದಲ್ಲಿ 1973ರ ಜುಲೈ 30ರಂದು ಸೋನು ಜನಿಸಿದರು.
ತಂದೆ ಶಕ್ತಿ ಸಾಗರ್ ಸೂದ್, ತಾಯಿ ಸರೋಜಾ ಸೂದ್. ಮೋಗಾದಲ್ಲಿ ಆರಂಭಿಕ ಶಿಕ್ಷ ಣ ಪೂರೈಸಿದ ಸೋನು ನಾಗ್ಪುರದ ಯಶವಂತರಾವ್ ಚಹ್ವಾಣ್ ಇಂಜಿನಿಯರಿಂಗ್ ಕಾಲೇಜ್‌ನಿಂದ ಎಲೆಕ್ಟ್ರಿಕಲ್ ಇಂಜಿನಿಯರ್ ಪದವಿ ಪಡೆದಿದ್ದಾರೆ. ಕಿಕ್ ಬಾಕ್ಸಿಂಗ್ ಮತ್ತು ಗಿಟಾರ್ ನುಡಿಸುವುದು ಅವರ ಹವ್ಯಾಸಗಳು. ಮಾಡೆಲಿಂಗ್ ಮತ್ತು ಸಿನಿಮಾ ಜಗತ್ತಿನೆಡೆಗೆ ಆಕರ್ಷಿತರಾಗಿ ಮುಂಬಯಿಗೆ ಪಯಣ ಬೆಳೆಸಿದರು. ಎಲ್ಲರಂತೆ ಆರಂಭಿಕ ದಿನಗಳಲ್ಲಿ ಸೋನು ಕೂಡ ಅವಕಾಶಕ್ಕಾಗಿ ಚಪ್ಪಲಿ ಸವೆಸಬೇಕಾಯಿತು. 1999ರಲ್ಲಿ ಅವರ ಕನಸು ಕೈಗೂಡಿತು.
ತಮಿಳು ಸಿನಿಮಾ ‘ಕಲ್ಲಳಂಗರ್’ ಚಿತ್ರದ ಮೂಲಕ ಸಿನಿ ಜಗತ್ತಿಗೆ ಪದಾರ್ಪಣೆ ಮಾಡಿದರು. 2000ರಲ್ಲಿ ‘ಹ್ಯಾಂಡ್ಸ್ ಅಪ್’ ಚಿತ್ರದ ಮೂಲಕ ತೆಲುಗು ಸಿನಿಮಾರಂಗಕ್ಕೂ ಪರಿಚಯವಾದರು. ಬಳಿಕ 2002ರಲ್ಲಿ ಹಿಂದಿ ಚಿತ್ರರಂಗದಲ್ಲಿ ಗುರುತಿಸಿಕೊಂಡರು. 2011ರಲ್ಲಿ ತೆರೆಗೆ ಬಂದ ಸುದೀಪ್ ಅಭಿನಯದ ‘ವಿಷ್ಣುವರ್ಧನ್’ ಚಿತ್ರದ ಮೂಲಕ ಕನ್ನಡ ಸಿನಿರಸಿಕರಿಗೂ ಹತ್ತಿರವಾದರು.
ರುಚಿ ರುಚಿ ಅಡುಗೆ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಅದ್ರಲ್ಲೂ ಭಾರತೀಯರು ಒಳ್ಳೆ ಊಟ ಹುಡುಕಿಕೊಂಡು ದೂರದೂರುಗಳಿಗೆ ಬೇಕಾದ್ರೂ ಹೋಗ್ತಾರೆ. ಇದೇ ಕಾರಣಕ್ಕೆ ಸಾಮಾಜಿಕ ಜಾಲತಾಣದಲ್ಲಿ ಆಹಾರ, ರೆಸ್ಟೋರೆಂಟ್ ವಿಡಿಯೋಗಳು ಹೆಚ್ಚು ವೈರಲ್ ಆಗ್ತಿವೆ.ಅದೇ ರೀತಿ ಹೈದರಾಬಾದ್ನ ಕೇಬಲ್ ಬ್ರಿಡ್ಜ್ ಬಳಿ ಬೀದಿ ಬದಿ ಫುಡ್ ಸ್ಟಾಲ್ ನಡೆಸುತ್ತಿರುವ ಕುಮಾರಿ ಆಂಟಿ ಕೂಡಾ ಸಾಮಾಜಿಕ ಜಾಲತಾಣದ ಮೂಲಕವೇ ಹೆಚ್ಚು ಪ್ರಸಿದ್ಧಿ ಪಡೆದವರು.
ಇವರ ಹೋಟೆಲ್ಗೆ ತೆಲುಗು ಚಿತ್ರರಂಗದ ತಾರೆಯರು ಸಹ ಭೇಟಿ ನೀಡಿ ಊಟದ ರುಚಿ ಸವಿದಿದ್ದರು. ಇದೀಗ, ಬಹುಭಾಷಾ ನಟ ಸೋನು ಸೂದ್ ಫುಡ್ ಸ್ಟಾಲ್‌ಗೆ ಭೇಟಿ ನೀಡಿದ್ದು ಕುಟುಂಬ ಸದಸ್ಯರೊಂದಿಗೆ ಕೆಲಹೊತ್ತು ಕಾಲ ಕಳೆದಿದ್ದಾರೆ. ಸಾಮಾನ್ಯ ಕುಟುಂಬದಿಂದ ಬಂದು ಫುಡ್ ಸ್ಟಾಲ್ ನಡೆಸುವ ಮೂಲಕ ಪ್ರಸಿದ್ಧಿ ಪಡೆದಿರುವ ಕುಮಾರಿ ಆಂಟಿಯನ್ನು ಅಭಿನಂದಿಸಿ ಸನ್ಮಾನಿಸಿದರು. ಇದೇ ವೇಳೆ, ಊಟ ಬಡಿಸಿ ಗಮನ ಸೆಳೆದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.