ಜೈಲಿನಿಂದ ಬಂದ ಬಳಿಕ ಸೋನು ಲುಕ್ ಸಂಪೂರ್ಣ ಬದಲಾಯಿತು; ರಾಜಕೀಯಕ್ಕೆ ಆದಷ್ಟು ಬೇಗ ಎಂಟ್ರಿ
ಅಕ್ರಮವಾಗಿ ಮಗು ದತ್ತು ಪಡೆದ ಪ್ರಕರಣದಲ್ಲಿ ಜೈಲು ಸೇರಿ ಬದ ಬಳಿಕ ಖ್ಯಾತಿಯ ಸೋನು ಶ್ರೀನಿವಾಸ್ ಗೌಡ ಸೈಲೆಂಟ್ ಆಗಿದ್ದರು. ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಲ್ಲಿನ ಕಹಿ ಅನುಭವಗಳನ್ನು ಬಿಟ್ಟುಕೊಟ್ಟಿದ್ದರು. ಇದಾದ ನಂತರ ಈಗ ತಮ್ಮ ಮದುವೆ ಬಗ್ಗೆ ಮೌನ ಮುರಿದಿದ್ದಾರೆ. ಅಷ್ಟೇ ಅಲ್ಲದೆ ರಾಜಕೀಯಕ್ಕೆ ಬರುವ ಪ್ಲ್ಯಾನ್ ಇದೆ ಎಂದೂ ಹೇಳಿ ಶಾಕ್ ಕೊಟ್ಟಿದ್ದಾರೆ.
ತಮ್ಮ ಫಾಲೋವರ್ಸ್ ಒಬ್ಬರ ಪ್ರಶ್ನೆಗೆ ಉತ್ತರ ನೀಡುವಾಗ ನಟಿ ಸೋನು ಗೌಡ ತಾವು ರಾಜಕೀಯಕ್ಕೆ ಬರುವ ಪ್ಲ್ಯಾನ್ ಮಾಡುತ್ತಿರುವುದಘಾಇ ತಿಳಿಸಿದ್ದಾರೆ. ಬಾಗಲಕೋಟೆಯ ಸಾಧನ ಎಂಬುವವರು ಮೂವತ್ತು ವರ್ಷದೊಳಗೆ ನಿಮ್ಮ ಗುರಿ ಏನು ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಸೋನು ಗೌಡ ಉತ್ತರಿಸಿದ್ದಾರೆ.
ಈ ಮೊದಲ ನನಗೆ ಸಿನಿಮಾದಲ್ಲಿ ಹೀರೋಯಿನ್ ಆಗಬೇಕು ಅನ್ನೋ ಅಸೆಯಿತ್ತು. ಈ ಚಿತ್ರರಂಗದಲ್ಲಿ ಇರಬೇಕು. ಒಳ್ಳೋಳ್ಳೆ ಕೆಲಸ ಮಾಡಬೇಕು ಅಂತ ಆಸೆಯಿತ್ತು. ಆದರೆ, ಯಾಕೋ ಗೊತ್ತಿಲ್ಲ ಎರಡು ವರ್ಷಗಳಿಂದ ಈ ಫಿಲ್ಡ್ ಕೂಡ ಇಷ್ಟ ಆಗ್ತಾಯಿಲ್ಲ. ಅದಕ್ಕೆ ಮುಂದೆ ರಾಜಕೀಯದಲ್ಲಿ ಕಾಣಿಸಿಕೊಳ್ಳಬೇಕು ಅಂದುಕೊಳ್ತಿದ್ದಿನಿ. ಆದರೆ, ಇದು ಪ್ಲ್ಯಾನ್ ಅಷ್ಟೇ ನಮ್ಮದು. ದೇವರ ಆಟದ ಮುಂದೆ ನಮ್ಮದು ಏನು ನಡೆಯಲ್ಲ ಎಂದು ಹೇಳಿದ್ದಾರೆ.
ಮುಂದೆ ಇನ್ನೊಬ್ಬರು ನಿಮ್ಮ ಮದುವೆ ಯಾವಾಗ... ಮದುವೆ ಅದರೆ ಲವ್ ಮ್ಯಾರೆಜ್ ಅಥವಾ ಆರೆಂಜ್ ಮ್ಯಾರೆಜ್ ಯಾವುದು ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿರುವ ಸೋನು, ತುಂಬಾ ಜನ ಇದೇ ಪ್ರಶ್ನೆ ಕೇಳಿದ್ದಾರೆ. ನಂಗೆ ಗೊತ್ತಿಲ್ಲ. ಆದರೆ, ನನಗೆ ಮದುವೆ ಅಂದ್ರೆ ಇಷ್ಟವಿಲ್ಲ. ಮದುವೆ ಬಗ್ಗೆ ಯಾವುದೇ ಪ್ಲ್ಯಾನ್ ಇಲ್ಲ. ಮದುವೆ ಅನ್ನೋ ಆಸೆನೇ ಇಲ್ಲ. ನಾನು ಮದುವೆ ಆಗಬಾರದು ಎಂದುಕೊಂಡಿದ್ದೇನೆ ಎಂದು ಹೇಳಿದ್ದಾರೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.