ದರ್ಶನ್ ಬಗ್ಗೆ ಮೊಟ್ಟಮೊದಲ ಬಾರಿಗೆ ಮಾತನಾಡಿದ ವಿನಯ್ ಗುರೂಜಿ, ಗುರುಗಳು ಹೇ ಳಿದ್ದೇನು ಗೊ.ತ್ತಾ

 | 
T

ಅಭಿಮಾನಿಗಳಿಂದ ಡಿ ಬಾಸ್‌ ಎಂದು ಕರೆಸಿಕೊಳ್ಳುವ ನಟ ದರ್ಶನ್ ಅವರ ಸಿನಿಮಾ ವೃತ್ತಿ ಬದುಕಿಗೆ 25 ವರ್ಷ ತುಂಬಿದೆ. ಕನ್ನಡ ಸಿನಿಮಾಗಳಲ್ಲಿ ಪೋಷಕ ಪಾತ್ರ, ಖಳ ಪಾತ್ರ ಮಾಡುತ್ತ, ಆನಂತರ ಮೆಜೆಸ್ಟಿಕ್‌ ಸಿನಿಮಾದ ಮೂಲಕ ಹೀರೋ ಆಗಿ, ಈಗ ಬಾಕ್ಸ್ ಆಫೀಸ್‌ ಸುಲ್ತಾನ ಎನಿಸಿಕೊಂಡಿದ್ದಾರೆ ದರ್ಶನ್. 

ಅವರ ಸಿನಿ ಜರ್ನಿಗೆ 25 ವರ್ಷ ತುಂಬಿದ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿ ದೇವಸ್ಥಾನ ಮೈದಾನದಲ್ಲಿ ಫೆ.17ರಂದು ಅದ್ದೂರಿ ಸಮಾರಂಭವೊಂದನ್ನು ಏರ್ಪಡಿಸಲಾಗಿತ್ತು. ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಸಂಸದೆ, ನಟಿ ಸುಮಲತಾ ಅಂಬರೀಶ್ ಸೇರಿದಂತೆ ಅನೇಕ ಜನಪ್ರಿಯ ಕಲಾವಿದರು, ರಾಜಕೀಯ ಮುಖಂಡರು ಆಗಮಿಸಿದ್ದರು.

 ಸ್ಯಾಂಡಲ್‌ವುಡ್‌ನ ಮುಂಚೂಣಿ ನಟಿಯರು ಡ್ಯಾನ್ಸ್ ಮಾಡಿ, ಮನರಂಜಿಸಿದರು. ಇನ್ನು ಸಮಾರಂಭಕ್ಕೆ ಆಗಮಿಸಿದ್ದ ವಿನಯ್ ಗುರೂಜಿ ದರ್ಶನ್ ಅವರನ್ನು ಹಾಡಿ ಹೊಗಳಿದ್ದಾರೆ. ಅವರ ಸರಳತೆ ಪ್ರಾಮಾಣಿಕತೆ ಪ್ರಬುದ್ಧತೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತದೆ. ಎಷ್ಟೇ ಎತ್ತರಕ್ಕೆ ಏರಿದರೂ ತನ್ನ ಜೊತೆಗಾರರ ಬಿಟ್ಟು ಕೊಡಲಾರ. ಅಹಂಕಾರ ತೋರದ ಉತ್ತಮ ವ್ಯಕ್ತಿ ಅವರು ಎಂದಿದ್ದಾರೆ.

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳು ನಟ ದರ್ಶನ್‌ ಅವರಿಗೆ ಆಶೀರ್ವದಿಸಿದರು.ಸಂಸದೆ, ನಟಿ ಸುಮಲತಾ ಅಂಬರೀಷ್ ಅವರನ್ನು ನಟ ದರ್ಶನ್ ಸದಾ ಮದರ್ ಇಂಡಿಯಾ ಎಂದೇ ಕರೆಯುತ್ತಾರೆ. ಶ್ರೀರಂಗಪಟ್ಟಣಕ್ಕೆ ಆಗಮಿಸಿದ್ದ ಸುಮಲತಾ ಅವರು ದರ್ಶನ್ ಬಗ್ಗೆ ಮಾತನಾಡಿ ದರ್ಶನ ನನ್ನ ಹಿರಿಯ ಮಗ ಇದ್ದ ಹಾಗೆ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.