ಸೀರಿಯಲ್ ನಟಿ ಜೊತೆ ಶ್ರೀಧರ್ ಆಟ, H.I.V ಸೋಂಕು ಇದೆ ಎಂದು ಒಪ್ಪಿಕೊಂಡ ಪತ್ನಿ

 | 
ಕ್
ಅನಾರೋಗ್ಯದಿಂದ ಬಳಲುತ್ತಿದ್ದ ಕನ್ನಡದ ಕಿರುತೆರೆ ನಟ ಶ್ರೀಧರ್‌ ನಾಯಕ್ ಅವರು ಕೆಲ ದಿನಗಳ ಹಿಂದಷ್ಟೇ ನಿಧನರಾಗಿದ್ದಾರೆ. ಸುರದ್ರೂಪಿಯಾಗಿದ್ದ ಅವರು ದಿಢೀರನೆ ಅನಾರೋಗ್ಯ ಸಮಸ್ಯೆಯಿಂದಾಗಿ ಗುರುತೇ ಸಿಗದಂತೆ ಬದಲಾಗಿದ್ದರು. ಹಲವು ತಿಂಗಳಿನಿಂದ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಆರ್ಥಿಕ ಸಮಸ್ಯೆಯಲ್ಲಿ ಸಿಲುಕಿದ್ದ ಅವರು ತಮ್ಮ ಚಿಕಿತ್ಸೆಗಾಗಿ ಸಹಾಯ ಕೋರಿದ್ದರು. ಶ್ರೀಧರ್‌ ತಮ್ಮ ದಾಂಪತ್ಯ ಜೀವನದ ಬಗ್ಗೆಯೂ ಬೇಸರ ತೋಡಿಕೊಂಡಿದ್ದರು. ಪತ್ನಿ ವಿರುದ್ಧವೂ ಆರೋಪಗಳನ್ನು ಮಾಡಿದ್ದರು. 
ಅದಕ್ಕೆ ಅವರ ಪತ್ನಿ ಕೂಡ ಪ್ರತಿಕ್ರಿಯಿಸಿ ಪತಿ ಶ್ರೀಧರ್‌ ಮೇಲೆ ಹಲವು ಗಂಭೀರ ಆರೋಪಗಳನ್ನು ಮಾಡಿದ್ದ ಆಡಿಯೋ ಈಗ ವೈರಲ್‌ ಆಗಿದೆ.ಆಡಿಯೋ ಮೂಲಕ ಕ್ಲಾರಿಟಿ ಕೊಟ್ಟಿದ್ದ ಶ್ರೀಧರ್ ಪತ್ನಿ ಜ್ಯೋತಿ, ನಾನು ಗಾಯಕಿ ಆಗಬೇಕು ಎಂದು ಬಂದವಳು, ಈ ವೇಳೆ ಶ್ರೀಧರ್ ಪರಿಚಯವಾಗಿ ಪ್ರೀತಿ ಮೂಡಿತು. ಶ್ರೀಧರ್ ಪ್ರಪೋಸ್ ಮಾಡಿದ. ನಮ್ಮ ಮನೇಲಿ ಬಂದು ಮಾತನಾಡಿದ್ರೂ ಜಾತಕ ಕೂಡಲಿಲ್ಲ. ಯಾರೂ ಒಪ್ಪದಿದ್ರೂ ನನಗೆ ಇಷ್ಟವಾಗಿದ್ದರಿಂದ ಮದುವೆ ಆದ್ವಿ. ಶ್ರೀಧರ್‌ ನನ್ನ ಮದುವೆಯಾದ ಎರಡೇ ವರ್ಷಕ್ಕೆ ನನ್ನಿಂದ ದೂರವಾಗಿದ್ದರು. ನಾವಿಬ್ಬರೂ ಬಡತನದಲ್ಲೇ ಬೆಳೆದಿದ್ದವರು.
 ಇಬ್ಬರೂ ಒಟ್ಟಿಗೆ ಒಂದು ಫಿಲಂ ಸಂಸ್ಥೆಯಲ್ಲಿ ಪರಿಚಯವಾಗಿ ಬಳಿಕ ಮದುವೆ ಆಗಿದ್ದೆವು. ಆದರೆ ಮದುವೆಯಾದ ಬಳಿಕ ಸಣ್ಣ ಪುಟ್ಟ ವಿಚಾರಕ್ಕೂ ಗಲಾಟೆ ನಡೆಯುತ್ತಿತ್ತು ಎಂದಿದ್ದಾರೆ.ಮದುವೆಯಾದ ಮೇಲೆ ಶ್ರೀಧರ್‌ ತುಂಬಾ ಬದಲಾದ. ತುಂಬಾ ರಿಸ್ಟ್ರಿಕ್ಷನ್ ಹಾಕುತ್ತಿದ್ದ. ಸುಮಾರು 11 ವರ್ಷಗಳ ಹಿಂದಿನ ಮಾತನ್ನು ಈಗ ಹೇಳಲು ಆಗಲ್ಲ, ಅವನು ಸಾಕಷ್ಟು ಬಾರಿ ನನಗೆ ಹೊಡೆದಿದ್ದಾನೆ. ಇದನ್ನು ನಾನು ಎಲ್ಲಿಯೂ ಹೇಳಿಕೊಂಡಿಲ್ಲ. ನಾನು ಅವರ ಕ್ಯಾರೆಕ್ಟರ್ ಮೇಲೆ ಎಂದೂ ಅನುಮಾನ ಪಟ್ಟಿಲ್ಲ. ಅವನಿಗೆ ಎಚ್ಐವಿ, ಕ್ಯಾನ್ಸರ್ ಕೂಡ ಬಂದಿದೆ ಎಂದು ಹೇಳಿದ್ದರು. ಅವನಿಗೆ ತುಂಬಾ ಅಹಂಕಾರ ಇತ್ತು, ದೇವರು ಕೊಟ್ಟ ಎಲ್ಲವನ್ನೂ ಕಳೆದುಕೊಂಡ ಎಂದಿದ್ದಾರೆ.
ಪತಿ ಶ್ರೀಧರ್‌ಗೆ ಹುಡುಗಿಯರ ಸಹವಾಸ ಇತ್ತು ಎಂದು ಪತ್ನಿ ಜ್ಯೋತಿ ಗಂಭೀರ ಆರೋಪ ಮಾಡಿದ್ದಾರೆ. ಶ್ರೀಧರ್ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದರು, ಅವರಿಗೆ ಕ್ಯಾನ್ಸರ್‌ ಕೂಡ ಇತ್ತು. ಆದರೆ ನನಗೆ ಬೇರೊಬ್ಬರ ಜೊತೆ ಸಂಬಂಧ ಎಂದು ಆರೋಪಿಸಿ ಶ್ರೀಧರ್ ನನ್ನಿಂದ ದೂರವಾಗಿದ್ದರು ಎಂದು ಶಾಕಿಂಗ್‌ ವಿಚಾರಗಳನ್ನು ತಿಳಿಸಿದ್ದಾರೆ. ನಾನು ಈಗಲೂ ಒಂಟಿಯಾಗಿಯೇ ನನ್ನ ಜೀವನ ಸಾಗಿಸುತ್ತಿದ್ದೇನೆ. ನನಗೆ ಈಗ ನನ್ನ ಹಾಗೂ ಮಗನ ಜೀವನ ಮುಖ್ಯ. ನಾನು ಯಾರೊಂದಿಗೂ ಓಡಿ ಹೋಗಿಲ್ಲ. ನಾನು ಹಾಗೂ ಮಗ ಇಬ್ಬರೇ ಜೀವನ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.