ಅವಕಾಶವಿಲ್ಲದೆ ಮೂಲೆಗುಂಪಾದ ಶ್ರೀನಿಧಿ ಶೆಟ್ಟಿ, ಕೆಜಿಎಫ್ ಬಳಿಕ ಯಾವುದೇ ಸಿನಿಮಾ ಬಂದಿಲ್ಲ
Apr 30, 2025, 08:56 IST
|

ಕೆಜಿಎಫ್ ಸೀರಿಸ್ನಿಂದ ಕನ್ನಡ ಹಾಗೂ ಪರಭಾಷೆಯ ಸಿನಿಮಾಗಳಿಗೆ ಪರಿಚಯವಾದ ನಟಿ ಶ್ರೀನಿಧಿ ಶೆಟ್ಟಿ. ಕೆಜಿಎಫ್ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಅಷ್ಟು ಜೋರಾಗಿ ಸದ್ದು ಮಾಡಿದರೂ ಕರಾವಳಿ ಮೂಲದ ಶ್ರೀನಿಧಿ ಶೆಟ್ಟಿಗೆ ಬಿಗ್ ಬಜೆಟ್ ಸಿನಿಮಾ ಸಿಗುವುದಕ್ಕೆ ಮೂರು ವರ್ಷ ಕಾಯಬೇಕಾಯ್ತು. ಕೆಜಿಎಫ್ 2 ರಿಲೀಸ್ ಆದ ಮೂರು ವರ್ಷಗಳ ಬಳಿಕ ಅವರ ಸಿನಿಮಾ ರಿಲೀಸ್ ಆಗುತ್ತಿದೆ. ಅದುವೇ ತೆಲುಗು ನಟ ನಾನಿ ಜೊತೆ ನಟಿಸಿದ ಹಿಟ್.
ಶ್ರೀನಿಧಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಹಿಟ್ ಸಿನಿಮಾ ಬಿಡುಗಡೆಗೆ ಇನ್ನೇನು ಕೆಲವೇ ದಿನಗಳು ಉಳಿದಿವೆ. ಮೇ 1ಕ್ಕೆ ರಿಲೀಸ್ ಆಗುತ್ತಿರುವ ಈ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ಬಿಡುಗಡೆಗೆ ಒಂದು ದಿನ ಇರುವಾಗ ಸಿನಿಮಾದ ಹೀರೋ ನಾನಿಯೊಂದಿಗೆ ಬೆಂಗಳೂರಿಗೆ ಬಂದಿದ್ದ ಶ್ರೀನಿಧಿ ಶೆಟ್ಟಿ ಇದೂವರೆಗಿನ ಸಿನಿಮಾ ಜರ್ನಿಯ ಬಗ್ಗೆ ಮನಬಿಚ್ಚಿ ಮಾತಾಡಿದ್ದಾರೆ.
ಕೆಜಿಎಫ್ 2 ಅಂತಹ ಮೆಗಾ ಹಿಟ್ ಸಿನಿಮಾ ಕೊಟ್ಮೇಲೂ ಶ್ರೀನಿಧಿ ಶೆಟ್ಟಿ ಮೂರು ವರ್ಷಗಳ ಕಾಲ ಯಾಕೆ ಸಿನಿಮಾ ಮಾಡಿಲ್ಲವೆಂದರೆ ಏನಿಲ್ಲ ದಿನನಿತ್ಯದ ಕೆಲಸಗಳು, ಎದ್ದೇಳೋದು, ತಿನ್ನೋದು, ಜಿಮ್ಗೆ ಹೋಗೋದು, ಊಟ ಮಾಡುವುದು, ಮನೆಯಲ್ಲಿ ಅಪ್ಪನನ್ನು ನೋಡಿಕೊಳ್ಳುವುದು, ತಂಗಿಯಂದಿರನ್ನು ನೋಡಿಕೊಳ್ಳುವುದು, ಮಕ್ಕಳನ್ನು ನೋಡಿಕೊಳ್ಳುವುದು ಇವೇ ಇದ್ದವು. ಸಿನಿಮಾ ಇಲ್ಲ ಅಂದರೂ ಜೀವನ ಇದೆಯಲ್ಲ. ನಿಮ್ಮನ್ನು ನಿಮಗೆ ಹ್ಯಾಂಡಲ್ ಮಾಡುವುದಕ್ಕೆ ಗೊತ್ತಿಲ್ಲ ಅಂದರೆ, ಏನೂ ಕೆಲಸ ಇಲ್ಲದೆ ಕೂತು ಕೊಳ್ಳುವುದಕ್ಕೆ ಕಷ್ಟ ಆಗುತ್ತೆ. ನಿಮಗೆ ರಿಯಾಲಿಟಿಯ ಅರಿವಿದ್ದರೆ, ಕೆಲಸ ಇಲ್ಲ ಅಂತ ಒಪ್ಪಿಕೊಳ್ಳುವುದರಲ್ಲಿ ಕಷ್ಟ ಆಗಲ್ಲ.
ಹಾಗಾಗಿ ನನಗೆ ಅದರಲ್ಲೇನೂ ತೊಂದರೆ ಆಗಿಲ್ಲ. ಒಳ್ಳೆಯ ಫ್ಯಾಮಿಲಿ ಟೈಮ್ ಸಿಕ್ಕಿತು. ನಾಲ್ಕು ತಿಂಗಳು ನಾನು ಮನೆಯಲ್ಲಿಯೇ ಇರಲಿಲ್ಲ. ಈ ನಾಲ್ಕು ತಿಂಗಳಲ್ಲಿ 10 ದಿನ ಅಷ್ಟೇ ಮನೆಯಲ್ಲಿ ಇದ್ದೆ.ಎಂದು ಹೇಳಿದ್ದಾರೆ. ಸಿನಿಮಾ ಮಾಡದೇ ಇದ್ದರೂ ಪ್ರೀತಿ ಸಿಕ್ಕಿದೆ ನನ್ನ ಸಿನಿಮಾ ಸ್ವಲ್ಪ ಸಮಯ ಆದ್ಮೇಲೆ ಬರುತ್ತಿದೆ. ನನ್ನನ್ನು ನಾನು ತೆರೆಮೇಲೆ ನೋಡಿಕೊಳ್ಳುತ್ತಿರುವುದು ಎರಡೂವರೆ ಮೂರು ವರ್ಷ ಆದ್ಮೇಲೆ. ನನಗೂ ಸಿಕ್ಕಾಪಟ್ಟೆ ಕುತೂಹಲವಿದೆ.
ಕೆಜಿಎಫ್ 1 ಹಾಗೂ ಕೆಜಿಎಫ್ 2ರಿಂದ ನೀವು ಕೊಟ್ಟಿರುವಂತಹ ಪ್ರೀತಿ ಅದರಲ್ಲೂ ಎರಡು ಮೂರು ವರ್ಷ ಸಿನಿಮಾ ಮಾಡಿಲ್ಲ ಅಂದರೂ ಅಷ್ಟೇ ಪ್ರೀತಿ ಸಪೋರ್ಟ್ ಯಾವಾಗಲೂ ಇತ್ತು. ಅದಕ್ಕೆ ನಾನು ಯಾವಾಗಲೂ ಚಿರಋಣಿ. ಎನ್ನುತ್ತಾರೆ ಶ್ರೀನಿಧಿ ಶೆಟ್ಟಿ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.