ಶ್ರೀರಸ್ತು ಶುಭಮಸ್ತು ಸೀರಿಯಲ್ ವೀಕ್ಷಕರಿಗೆ ಕಹಿಸುದ್ದಿ, ನಟಿ ಸುಧಾರಾಣಿ ಬದಲು ಬೇರೆ ನಟಿ ಎಂಟ್ರಿ

 | 
Hs
 ದಿನದಿಂದ ದಿನಕ್ಕೆ ಶ್ರೀರಸ್ತು ಶುಭಮಸ್ತು ಹೊಸ ಟ್ವಿಸ್ಟ್​ ಪಡೆದುಕೊಳ್ಳುತ್ತಿದೆ. ಒಂದು ಕಡೆ ಸಮರ್ಥ್​​ಗೆ ಅಭಿ ಹಾಗೂ ಅವಿನಾಶ್ ಮನೆಯಲ್ಲಿ ತನ್ನ ಅಮ್ಮನನ್ನು ಬಿಡಲು ಇಷ್ಟವಿಲ್ಲ. ಮತ್ತೊಂದು ಕಡೆ ತುಳಸಿ ಮಾಧವ ಅವರ ಕುಟುಂಬಸ್ಥರನ್ನು ಬಿಟ್ಟು ಎಲ್ಲಿಗೂ ಬರಲು ಆಗುತ್ತಿಲ್ಲ. ಆದರೆ ಇದರ ಮಧ್ಯೆ ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಒಂದು ರೋಚಕ ಟ್ವಿಸ್ಟ್ ಎದುರಾಗಿದೆ.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಧಾರಾವಾಹಿಗಳಲ್ಲಿ ಶ್ರೀರಸ್ತು ಶುಭಮಸ್ತು ಸಹ ಒಂದು. ಈ ಸೀರಿಯಲ್ ಹಿರಿಯ ಕಲಾವಿದರ ಬಳಗವೇ ಇದೆ. ವಿಭಿನ್ನ ಕಥಾಹಂದರ ಹೊಂದಿರುವ ಈ ಧಾರಾವಾಹಿ ಪ್ರೇಕ್ಷಕರ ನೆಚ್ಚಿನ ಸೀರಿಯಲ್​ ಎಂದರೇ ತಪ್ಪಾಗುವುದಿಲ್ಲ. ಸೀರಿಯಲ್​ ಶುರುವಾದ ದಿನದಿಂದ ಇಂದಿನವರೆಗೂ ವೀಕ್ಷಕರು ನೋಡಿಕೊಂಡು ಬಂದಿದ್ದಾರೆ. ಅದರಲ್ಲೂ ವಿಭಿನ್ನವಾದ ಲವ್​ ಸ್ಟೋರಿ ಹೇಳುತ್ತಿರುವ ಕಥೆಗೆ ವೀಕ್ಷಕರು ಫಿದಾ ಆಗಿದ್ದಾರೆ.
ಒಂದು ಕಡೆ ಅಪ್ಪ-ಮಗನ ನಡುವೆ ಮುನಿಸು ಸರಿದು ತಂದೆಯನ್ನು ಒಪ್ಪಿಕೊಂಡಿದ್ದಾನೆ ಅವಿನಾಶ್​. ಆದರೆ ಇದರ ಮಧ್ಯೆ ಕಳೆದ ಸಂಚಿಕೆಯಲ್ಲಿ ಶ್ರೀರಸ್ತು ಶುಭಮಸ್ತು ಸೀರಿಯಲ್​ನಲ್ಲಿ​ ಯಾರು ಊಹಿಸಲಾಗದ ಟ್ವಿಸ್ಟ್​ ಪಡೆದುಕೊಂಡಿತ್ತು. ಆ ಟ್ವಿಸ್ಟ್​ಗೆ ವಿಕ್ಷಕರು ಫುಲ್ ಶಾಕ್​ ಆಗಿದ್ದರು. ಈ ಸೀರಿಯಲ್​ನಲ್ಲಿ ನಾವು ಇದನ್ನೂ ನೋಡಲು ಆಗೋದಿಲ್ಲ. ಕಥೆಯನ್ನು ಚೇಂಜ್​ ಮಾಡಿ, ಈ ಸೀರಿಯಲ್​ ಅನ್ನು ನಾವು ನೋಡೋದಿಲ್ಲ ಅಂತೆಲ್ಲಾ ಕಾಮೆಂಟ್ಸ್​ ಹಾಕಿದ್ದರು.
ಇದರಿಂದ ಬೇಸರವಾಗಿ ತುಳಸಿ ಪಾತ್ರಧಾರಿ ನಟಿ ಸುಧಾರಾಣಿ ಅವ್ರು ಪಾತ್ರದಿಂದ ಹೊರ ನಡೆಯುತ್ತಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು. ಅವರ ಬದಲಾಗಿ ಬೇರೆ ನಟಿಯನ್ನು ಅವರ ಪಾತ್ರಕ್ಕೆ ತೆಗೆದುಕೊಳ್ಳಲಾಗುತ್ತಿದೆ ಎಂಬ ನ್ಯೂಸ್ ವೈರಲ್ ಆಗಿತ್ತು. ಆದರೆ ಈದೀಗ ತುಳಸಿ ಪಾತ್ರವನ್ನು ಸುಧಾರಾಣಿ ಅವರೇ ಮುಂದುವರಿಸುತ್ತಾರೆ ಎಂದು ನಿರ್ದೇಶಕರು ಹೇಳಿದ್ದಾರೆ. ಅಲ್ಲಿಗೆ ಪ್ರೇಕ್ಷಕ ಪ್ರಭುಗಳು ಸುಧಾರಾಣಿ ಅವರೇ ಮುಂದುವರಿಯುತ್ತಾರೆ ಎಂಬ ಖುಷಿಯಲ್ಲಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.