ಇನ್ನೂ ಸ್ವಲ್ಪ ದಿನ ಕತ್ತಲೆ ಕೋಣೆಯಲ್ಲಿ ಇರಲಿ ಸರ್; ಡಾಲಿ ಧನಂಜಯ್

 | 
Ur
ಹಣದ ಅಮಲು .. ಅಳತೆಗೂ ಮೀರಿದ ಜನಪ್ರಿಯತೆ .. ಸುತ್ತಲು ಮೊಳಗುವ ಜೈಕಾರದ ನಶೆ .. ನಾನೇನೂ ಮಾಡಿದರು ಬಚಾವ್ ಆಗ್ಬಿಡ್ತೀನಿ ಎನ್ನುವ ಅಹಂಕಾರ.. ಇವೆಲ್ಲವನ್ನೂ ನೆತ್ತಿಗೇರಿಸಿಕೊಂಡರೆ ಏನಾಗುತ್ತೆ ಅಂತ ಯಾರಾದರೂ ಪ್ರಶ್ನೆ ಕೇಳಿದರೆ ಅದಕ್ಕೆ ಉತ್ತರದಂತೆ ನಿಲ್ಲುವುದು ದರ್ಶನ್ ಎಂಬ ಆರಡಿ ನಾಯಕನ ಬದುಕು.
ಇಂಥ ದರ್ಶನ್ ಈಗ ಜೈಲಿನಲ್ಲಿದ್ದಾರೆ. ನಿಜಾ.. ದರ್ಶನ್ ಕೇವಲ ಆರೋಪಿ ಮಾತ್ರ, ಇನ್ನೂ ಅಪರಾಧಿ ಎಂದು ಸಾಬೀತು ಆಗಿಲ್ಲ. 
ಹಾಗಂಥ ಈ ಪ್ರಕರಣದಲ್ಲಿ ದರ್ಶನ್ ಭಾಗಿಯಾಗಿಯೇ ಇಲ್ಲ ಎಂಬ ವಾದ ಮಾಡುವಂತೆ ಇಲ್ಲ. ಯಾಕೆಂದರೆ, ರೇಣುಕಾ ಸ್ವಾಮಿ ಚಿತ್ರದುರ್ಗದಿಂದ ಬೆಂಗಳೂರಿಗೆ ಬಂದಿದ್ದು ಇದೇ ದರ್ಶನ್ ಫರ್ಮಾನು ಹೊರಡಿಸಿದ ನಂತರವೇ.ಆದರೆ ಈ ಕಹಿ ಸತ್ಯವನ್ನು ಕೂಡ ಒಪ್ಪಲು ಅನೇಕರು ತಯಾರಿಲ್ಲ. ಅಭಿಮಾನಿಗಳ ಕಥೆ ಬಿಡಿ, ಚಿತ್ರರಂಗದಲ್ಲಿಯೇ ದರ್ಶನ್ ಈ ಕೆಲಸವನ್ನೆಲ್ಲ ಮಾಡಲು ಸಾಧ್ಯವೇ ಇಲ್ಲ ಎಂಬ ವಾದ ಮಾಡುವ ಒಂದು ವರ್ಗ ಇದೆ. 
ಇದರ ನಡುವೆ ಕನ್ನಡ ಚಿತ್ರರಂಗದ ನಟ ರಾಕ್ಷಸ ಡಾಲಿ ಧನಂಜಯ್, ದರ್ಶನ್ ಪ್ರಕರಣದ ಬಗ್ಗೆ ಇದೇ ಮೊದಲ ಬಾರಿ ಮಾತನಾಡಿದ್ದಾರೆ. ತಮ್ಮ ನೋವು, ಹತಾಶೆ ಮತ್ತು ಸಂಕಟವನ್ನೂ ಹೊರ ಹಾಕಿದ್ದಾರೆ.ನಮ್ಮ ಪರಿಸ್ಥಿತಿಯನ್ನು ಕೂಡ ಅರ್ಥ ಮಾಡಿಕೊಳ್ಳಬೇಕು. ಕೋಟಿ ಸಿನಿಮಾ ರಿಲೀಸ್‌ ಇತ್ತು ಆ ಸಮಯದಲ್ಲಿ. 
ಅದರ ಮಧ್ಯ ನಡೆದಂತಹ ಘಟನೆ ಇದೆ. ಅದು ಹೋಗಲಿ, ಅದನ್ನು ಬಿಟ್ಟು ಬಿಡೋಣ. ಆದರೆ ಮಾತಾಡೋಣ ಅಂದ್ರೆ ನಾವೇನು ಮಾತನಾಡೋದು ಎಂಬ ಪ್ರಶ್ನೆಯನ್ನೂ ಕೇಳಿರುವ ಡಾಲಿ, ಅಲ್ಲಿ ಒಂದು ದುರಂತ ಆಗಿದೆ, ಒಂದು ಜೀವ ಹೋಗಿದೆ, ಒಂದು ತಪ್ಪಾಗಿದೆ. 
ರೇಣುಕಾ ಸ್ವಾಮಿ ತಂದೆ-ತಾಯಿ ಮುಖ ನೋಡಿದಾಗ, ಆ ಮನುಷ್ಯನ ಪತ್ನಿಯ ಮುಖ ನೋಡಿದಾಗ ಖಂಡಿತಾ ಯಾರಿಗಾದರೂ ಬೇಜಾರು ಆಗಿಯೇ ಆಗುತ್ತದೆ. ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ. ಆ ಜೀವಕ್ಕೆ ಏನ್ ನ್ಯಾಯ ಸಿಗಬೇಕೋ, ಅದು ಸಿಗಲೇಬೇಕು ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.