ಇದ್ದಕ್ಕಿದ್ದಂತೆ ಲೀಲಾವತಿ ಅಮ್ಮನ ಸ.ಮಾಧಿ ಬಳಿ ಬಂದು ಬಿ.ಕ್ಕಿಬಿಕ್ಕಿ ಅಳುತ್ತ ನಿಂತ ದರ್ಶನ್

 | 
ಗೀ

ಚಂದನವನ ಕಂಡ ಹಿರಿಯ ನಟಿ ಲೀಲಾವತಿ, ಒಂದಲ್ಲ ಎರಡಲ್ಲ 600ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ ಮಾತ್ರವಲ್ಲದೆ ಹಲವು ಭಾಷೆಯ ಸಿನಿಮಾಗಳಲ್ಲೂ ತಮ್ಮ ನಟನೆ ಪ್ರದರ್ಶಿಸಿದ್ದಾರೆ. ಕನ್ನಡದಲ್ಲಂತೂ ಬಹುತೇಕ ಎಲ್ಲ ಸ್ಟಾರ್‌ ನಟರ ಜತೆಗೆ ಸಿನಿಮಾ ಮಾಡಿದ್ದಾರೆ. ಹೀಗಿರುವ ಲೀಲಾವತಿಗೀಗ ಬರೋಬ್ಬರಿ 87 ವರ್ಷ ವಯಸ್ಸಾಗಿತ್ತು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇನ್ನಿಲ್ಲವಾಗಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ನಟ ದರ್ಶನ್ ಅವರು ಲೀಲಾವತಿ ಅಮ್ಮನನ್ನು ನೋಡಿ ಬಂದಿದ್ದರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯ ಲೀಲಾವತಿ ಅವರ ತೋಟದ ಮನೆಗೆ ಆಗಮಿಸಿದ ದರ್ಶನ್‌ ಮತ್ತು ಅವರ ಸಂಗಡಿಗರು, ವಿನೋದ್‌ ರಾಜ್‌ ಅವರನ್ನು ಭೇಟಿಯಾಗಿದ್ದರು. ಅದಾದ ಬಳಿಕ ಒಂದಷ್ಟು ಹೊತ್ತು ಅವರ ಜತೆಗೆ ಮಾತನಾಡಿದ್ದರು. 

ಇದೇ ವೇಳೆ ಮನೆಯಲ್ಲಿಯೇ ವಿಶೇಷ ಪೂಜೆ ಸಹ ಆಯೋಜಿಸಲಾಗಿತ್ತು. ಆ ಪೂಜೆಯಲ್ಲೂ ಭಾಗವಹಿಸಿ, ಬಳಿಕ ಲೀಲಾವತಿ ಅವರನ್ನು ಭೇಟಿ ಮಾಡಿ ಮಾತನಾಡಿಸಿ ಧೈರ್ಯ ಹೇಳಿದ್ದರು. ದರ್ಶನ್‌ ಬರುತ್ತಿದ್ದಂತೆ, ವಿನೋದ್‌ ರಾಜ್‌ ಅಮ್ಮನನ್ನು ಎಬ್ಬಿಸಿ, ಅಮ್ಮ ನೋಡಿಲ್ಲಿ ನಿನ್ನನ್ನು ನೋಡಲು ಯಾರು ಬಂದಿದ್ದಾರೆ.. ದರ್ಶನ್‌ ಬಂದಿದಾನಮ್ಮ ದರ್ಶನು. ಎದ್ದೇಳು.. ಇಲ್ನೋಡಮ್ಮ ಎಂದಿದ್ದಾರೆ ವಿನೋದ್‌. 

ಇಲ್ಲ ನಿಮ್ಮನ್ನು ಅಮ್ಮ ಗುರುತಿಸುತ್ತಾರೆ ಎಂದೂ ದರ್ಶನ್‌ ನೋಡಿ ಹೇಳಿದ್ದಾರೆ ವಿನೋದ್.‌ ಕೆಲ ಹೊತ್ತು ಲೀಲಾವತಿ ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದ ದರ್ಶನ್‌, ತೋಟದ ಮನೆಯನ್ನು ವೀಕ್ಷಿಸಿ ಅಲ್ಲಿಂದ ತೆರಳಿದ್ದರು.
ಇದೀಗ ನಟಿ ಲೀಲಾವತಿ ಅವರ ಹಾಲು ತುಪ್ಪ ಹಾಕುವ ದಿನ ಭೇಟಿ ನೀಡಿದ ದರ್ಶನ್ ಅವರು ವಿನೋದ್ ರಾಜ್ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ದರ್ಶನ್ ಪ್ರೀತಿಯ ಮಾತು ಕೇಳಿ ವಿನೋದ್ ರಾಜ್ ಅವರನ್ನು ತಬ್ಬಿಕೊಂಡು ಕಣ್ಣೀರಿಟ್ಟಿದ್ದಾರೆ. 

ಈ ಕಾರಣದಿಂದ ದರ್ಶನ್ ಅಭಿಮಾನಿಗಳು ದರ್ಶನ್ ಗುಣವನ್ನು ಬಹಳ ಮೆಚ್ಚುತ್ತಾರೆ. ದೊಡ್ದ ನಟನಾದರು ಲೀಲಾವತಿ ಅಮ್ಮನ ಸಮಾಧಿಯ ಮುಂದೆ ಕುಳಿತು ದುಃಖ ವ್ಯಕ್ತಪಡಿಸಿರುವ ದಾಸನ ಗುಣಕ್ಕೆ ಎಲ್ಲರೂ ಮರುಳಾಗಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.