ಬಿಗ್ ಬಾಸ್ ಸಂಸ್ಥೆಯ‌ ಮೋಸದಾಟಕ್ಕೆ ನಾನು ಬಿಡಬೇಕಾಯಿತು, ಕೊನೆಗೂ ಮೌನ‌ಮುರಿದ ಸುದೀಪ್

 | 
Gui
ಸುಮಾರು ಹನ್ನೊಂದು ವರ್ಷಗಳ ಸುದೀರ್ಘ ಪ್ರಯಾಣದ ಬಿಗ್‌ ಬಾಸ್ ನಿರೂಪಣೆಯಿಂದ ಕಿಚ್ಚ ಸುದೀಪ್ ಅವರು ಇದೀಗ ಹೊರಬಂದಿದ್ದಾರೆ. ಹೌದು, ಸುದೀಪ್ ಅವರು ಬಿಗ್ ಬಾಸ್ ಕಾರ್ಯಕ್ರಮ ನಿರೂಪಣೆಯಿಂದ ದೂರ ಇರಲು ಬಲವಾದ‌ ವಿಚಾರವೂ ಇದೆ. 
ಕಿಚ್ಚ ಸುದೀಪ್ ಅವರು ಇಷ್ಟು ವರ್ಷಗಳ ಕಾಲ ಬಿಗ್ ಬಾಸ್ ನಿರೂಪಣೆ ಮಾಡಿ ಇದೀಗ ಅದರಿಂದ ಹೊರಬಂದಿದ್ದೇನೆ ಎಂದಾಗ ಸಾಕಷ್ಟು ಬಿಗ್ ಬಾಸ್ ವೀಕ್ಷಕರಿಗೆ ನೋವಿನ ಸಂಗತಿಯಾಗಿದೆ.‌ ಹೌದು, ವಾರದ ಕಥೆ ಕಿಚ್ಚನ ಜೊತೆ episode ನೊಡೋಕೆ ಸಾಕಷ್ಟು ಜನ ಕಾಯುತ್ತಾರೆ.
ಕಿಚ್ಚನ ಮಾತಿನ ಶೈಲಿ‌ ಹಾಗೂ ಮನೆಮಂದಿಗೆ ಬುದ್ದಿವಾದ ಹೇಳುವ ಈ ಪರಿ ಇನ್ಯಾರಿಂದಲೂ ಸಾಧ್ಯವಿಲ್ಲ. ಯಾಕೆಂದರೆ ಕಿಚ್ಚನ ಮಾತಿಗೆ ಬಿಗ್ ಬಾಸ್ ಸ್ಪರ್ಧಿಗಳು ಒಂದು ಬೆಲೆ‌ ಕೊಡುತ್ತಾರೆ. ಜೊತೆಗೆ ಕಿಚ್ಚನ ಮೇಲೆ ವೈಯಕ್ತಿಕವಾಗಿ ಎಲ್ಲಾ ನಟ ನಟಿಯರಿಗೂ ಅಭಿಮಾನವಿದೆ. ಹಾಗಾಗಿ ಕಿಚ್ಚ ಸುದೀಪ್ ಅವರಿಗೆ ಕೆಲವೊಂದು ನಿರ್ಧಾರ ತೆಗೆದುಕೊಳ್ಳಲು ತುಂಬಾ ಸುಲಭವಾಗುತ್ತಿತ್ತು. 
ಇನ್ನು ಬಿಗ್ ಬಾಸ್ ಸಂಸ್ಥೆಯಿಂದ ಕಿಚ್ಚ ಹೊರಬರುವುದಕ್ಕೆ‌‌ ಸಾಕಷ್ಟು ಕಾರಣಗಳಿವೆ. ಬಿಗ್ ಬಾಸ್ ಶೋ ಆರಂಭವಾದ ಬಳಿಕ ಸಿನಿಮಾ ಕಡೆ ಹೆಚ್ಚು ಗಮನ ಕೊಡುವುದಕ್ಕೆ ಸಾಧ್ಯವಾಗುತ್ತಿಲ್ಲ.‌ ಇನ್ನು ಕಿಚ್ಚನ ಕೆಲವೊಂದು ಮಾತು ಬಿಗ್ ಬಾಸ್ ಸಂಸ್ಥೆಗೆ ಸರಿಹೊಂದುವುದಿಲ್ಲ. ಜೊತೆಗೆ ಕಿಚ್ಚನ ಸಮಯದ ಬಗ್ಗೆ ಬಿಗ್ ಬಾಸ್ ಸಂಸ್ಥೆಗೆ ಹೊಂದಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಬಿಗ್ ಬಸ್ ನಿಂದ ಕಿಚ್ಚ ಹೊರಬರಲು ಧೃಡ ನಿರ್ಧಾರ ತೆಗೆದುಕೊಂಡರು.‌