ಕಿಚ್ಚನ‌ ಜೊತೆ ಸೆಲ್ಫಿಗಾಗಿ ಎರಡು ಗಂಟೆ ಕಾದಿದ್ದ ಅಭಿಮಾನಿಗೆ ಸುದೀಪ್ ಅವಮಾನ

 | 
Ur

ಪ್ರತಿಯೊಬ್ಬ ಅಭಿಮಾನಿಗೂ ತಮ್ಮ ನೆಚ್ಚಿನ ಹೀರೋ-ಹೀರೋಯಿನ್‌ ಜತೆಗೆ ಫೋಟೊ ಕ್ಲಿಕ್ಕಿಸಿಕೊಳ್ಳಬೇಕು, ಆ ಫೋಟೊವನ್ನು ಸೋಶಿಯಲ್‌ ಮೀಡಿಯಾದಲ್ಲಿ, ಹಾಗೇನೆ ಮೊಬೈಲ್‌ನ ವಾಲ್‌ಪೇಪರ್‌ನಲ್ಲಿ ಹಾಕಿಕೊಳ್ಳಬೇಕು ಎಂಬ ಮಹದಾಸೆ ಇರುತ್ತದೆ. ಇದಕ್ಕಾಗಿ ಮನೆ ಮುಂದೆ ಹೋಗೋದು, ಯಾವುದಾದರೂ ಫಂಕ್ಷನ್‌ನಲ್ಲಿ ಕಂಡರೆ ಸೆಲ್ಫಿಗಾಗಿ ಮುಗಿ ಬೀಳೋದು ಕಾಮನ್‌.

 ಸದ್ಯ ಸೆಲ್ಫಿಗಾಗಿ 2 ಗಂಟೆ ಕಾದ ಅಭಿಮಾನಿಯೊಬ್ಬರು ಕಿಚ್ಚ ಸುದೀಪ್‌  ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಮಾತ್ರವಲ್ಲ ಸಿನಿಮಾ ಸೆಲೆಬ್ರಿಟಿಗಳನ್ನು ನಂಬಬೇಡಿ, ಅಂಧ ಭಕ್ತರಾಗಬೇಡಿ ಎಂಬ ಧಿಕ್ಕಾರವನ್ನೂ ಕೂಗಿದ್ದಾರೆ.ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಕಿಚ್ಚ ಸುದೀಪ್‌ ಅವರ ಕಾರು ಇರುವುದನ್ನು ಅಭಿಮಾನಿಯೊಬ್ಬರು ಗಮನಿಸಿದ್ದರು. 

ಹೀಗಾಗಿ ನೆಚ್ಚಿನ ನಟನೊಂದಿಗೆ ಒಂದು ಫೋಟೋ ತೆಗೆದುಕೊಳ್ಳಬೇಕೆಂದು ಸುಮಾರು ಎರಡು ಗಂಟೆಗಳಿಂದ ಕಾದು ಕುಳಿತ್ತಿದ್ದರು. ಏರ್‌ಪೋರ್ಟ್‌ ಹೊರಗೆ ಸುದೀಪ್‌ ಬರುವುದು ಕಂಡು ಅಭಿಮಾನಿ ಸೆಲ್ಫಿ ಕೇಳಿದ್ದಾರೆ. ಆದರೆ ಸುದೀಪ್‌ ಫೋಟೋಗೆ ನಿರಾಕರಿಸಿದ್ದಾರೆ. ಮಾತ್ರವಲ್ಲ ಕಾರಿನ ಬಳಿ ಹೋಗಿ ಫೋಟೊ ತೆಗೆಯಲು ಹೋದಾಗ, ಫೋಟೊ ತೆಗೆಯಬೇಡ ಎಂಬಂತೆ ಸನ್ನೆ ಮಾಡಿದ್ದಾರೆ. 

ತಮ್ಮ ಬಾಡಿಗಾರ್ಡ್‌ಗೆ ಹೇಳಿ ಫೋಟೊ ತೆಗೆಯಲು ಬಿಡಬೇಡಿ ಎಂಬಂತೆ ಸೂಚಿಸಿದ್ದಾರೆ. ಸೆಲ್ಫಿಗಾಗಿ 2 ಗಂಟೆ ಕಾದಿದ್ದಕ್ಕೆ ಕಿಚ್ಚ ಸುದೀಪ್ ಅವಮಾನ ಮಾಡಿದ್ದಾರೆ. ಸೆಲೆಬ್ರಿಟಿಗಳಿಗೆ ಧಿಕ್ಕಾರ ಎಂದು ವಿಡಿಯೊ ಪೋಸ್ಟ್‌ ಮಾಡಿದ್ದಾರೆ. ಎಲ್ಲ ಸೆಲೆಬ್ರಿಟಿಗಳು ಇದೇ ರೀತಿನೇ ತಮ್ಮ ಫ್ಯಾನ್ಸ್‌ಗಳನ್ನ ಟ್ರೀಟ್‌ ಮಾಡುವುದು. ನಾವು ಗಂಟಗಟ್ಟಲೆ ಕ್ಯೂ ನಿಂತು ನೂರಾರು ರೂ. ಖರ್ಚು ಮಾಡಿ ಮೂರು ಗಂಟೆ ಸಿನಿಮಾ ನೋಡಿ ಬರ್ತಿವಿ. 

ಆದರೆ 5 ಸೆಕೆಂಡ್‌ ನಿಂತು ಅಭಿಮಾನಿಗಳಿಗೆ ಫೋಟೊ ಕೊಡಲು ಆಗುವುದಿಲ್ಲ ಎಂದರೆ ಇವರೆಲ್ಲ ಯಾವ ಸೀಮೆಯ ಸೆಲೆಬ್ರಿಟಿಗಳು ಎಂದು ಬೇಸರವನ್ನು ವ್ಯಕ್ತಪಡಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarundu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.