ಹನುಮಂತನ ಪರ ನಿಂತು ಭವ್ಯಾಗೆ ಕ್ಲಾಸ್ ತೆಗೆದುಕೊಂಡ ಸುದೀಪ್, ಈ ವಾರ ನಿನೇ ಎಲಿಮಿನೇಷನ್ ಎಂದ ಕಿಚ್ಚ
Jan 12, 2025, 13:37 IST
|

ವೀಕೆಂಡ್ ಬಂತು ಅಂದರೆ ಕಿಚ್ಚ ಸುದೀಪ್ ಅವರ ಪಂಚಾಯಿತಿಗೆ ಕಾಯುತ್ತಿರುತ್ತಾರೆ. ಇದೀಗ ಭವ್ಯಾ ಹಾಗೂ ರಜತ್ ಅವರಿಗೆ ಕಿಚ್ಚ ಕ್ಲಾಸ್ ತೆಗೆದುಕೊಳ್ಲೋದು ಕನ್‌ಫರ್ಮ್ ಆಗಿದೆ. ಹೊಸ ಪ್ರೋಮೋ ಔಟ್ ಆಗಿದೆ. ‘ಟಿಕೆಟ್ ಟು ಫಿನಾಲೆ’ ಪಾಸ್ ಟಾಸ್ಕ್ ವೇಳೆ ಸಿಟ್ಟಿನಿಂದ ಹನುಮಂತನನ್ನು ಭವ್ಯಾ ಗೌಡ ಹೊಡೆದಿದ್ದರು. ಅದೇ ರೀತಿ ರಜತ್ ಅವರ ನಿರ್ಧಾರದ ಬಗ್ಗೆಯೂ ಕಿಚ್ಚ ಕ್ಲಾಸ್ ತೆಗೆದುಕೊಳ್ಳುವಂತಿದೆ.
ಹೊಸ ಪ್ರೋಮೋ ಔಟ್ ಆಗಿದ್ದು, ಗೆಲುವಿನ ಗುರಿ ಹತ್ತಿರ ಬರುತ್ತಿದ್ದ ಹಾಗೇ ವೇಗದ ಮೀತಿ ಮೀರಿ ಆಟದ ಗತಿ ತಪ್ಪಿಸಿದವರಾರು? ಕಣ್ಣು ಮುಚ್ಚಿ ನಿರ್ಧಾರಗಳನ್ನು ತೆಗೆದುಕೊಂಡವರು ಯಾರು? ಎಂದು ಕಿಚ್ಚ ಹೇಳಿದ್ದಾರೆ. ಈ ಮೂಲಕ ಈ ಎರಡೂ ಘಟನೆಗಳ ಬಗ್ಗೆ ಕಿಚ್ಚ ಮಾತನಾಡಿಲಿದ್ದಾರೆ.
ಈ ವಾರ ಬಿಗ್ ಬಾಸ್ ಸ್ಪರ್ಧಿಗಳಿಗೆ ‘ಟಿಕೆಟ್ ಟು ಫಿನಾಲೆ’ ಪಾಸ್ ಟಾಸ್ಕ್ ನೀಡಲಾಗಿತ್ತು. ಬಾಸ್ಕೆಟ್ ಬಳಿ ಬಂದು, ಚೆಂಡಿನ ಮಳೆ ಆದಾಗ ಚೆಂಡು ಸಂಗ್ರಹಿಸಿ, ಎದುರಾಳಿಗಳಿಂದ ಕಾಪಾಡಿಕೊಳ್ಳಬೇಕಿತ್ತು. ಈ ಆಟದ ಮೊದಲ ಸುತ್ತಿನಲ್ಲಿ ಭವ್ಯಾ ಗೌಡ ಗೆದ್ದರು. ಮೂರನೇ ಸುತ್ತಿನಲ್ಲಿ ಭವ್ಯಾ ಗೌಡ ಅವರ ಬಾಸ್ಕೆಟ್‌ನಿಂದ ಚೈತ್ರಾ ಕುಂದಾಪುರ ಹಾಗೂ ಗೌತಮಿ ಜಾಧವ್ ಚೆಂಡುಗಳನ್ನ ತೆಗೆದುಕೊಂಡರು.
ಆಗ ಸಿಟ್ಟಿಗೆದ್ದ ಭವ್ಯಾ ಗೌಡ, ಗೌತಮಿ ಅವರ ಬಾಸ್ಕೆಟ್‌ನಿಂದ ಚೆಂಡುಗಳನ್ನ ಬೀಳಿಸಿದರು. ಹನುಮಂತನ ಬಾಸ್ಕೆಟ್‌ನಿಂದಲೂ ಬಾಲ್ ಬೀಳಿಸಲು ಬಂದರು. ನಾನು ಎಳೆದಿಲ್ಲ ಅಂತ ಹನುಮಂತ ಹೇಳಿದಾಗ,ನಾನು ಹಿಂಗೆ ಆಡೋದು ನನ್ನ ಸಹವಾಸಕ್ಕೆ ಬಂದರೆ ಅಷ್ಟೇ ಎಂದು ಭವ್ಯಾ ಕೂಗಾಡಿದರು. ಬಳಿಕ ಆಟದ ಮಧ್ಯೆ ರೊಚ್ಚಿಗೆದ್ದ ಭವ್ಯಾ ಗೌಡ ಹನುಮಂತನ ಬೆನ್ನಿಗೆ ಹೊಡೆದರು.
ಆಗ ಹನುಮಂತ ಹೊಡಿಯುತ್ತಿದ್ದಾರೆ ಭವ್ಯಾ ಎಂದಾಗ, ನನ್ನ ಬಟ್ಟೆ ಎಳೆದರು ಅಂತ ಭವ್ಯಾ ಗೌಡ ಹೇಳಿದರು. ಇದಾದ ಬಳಿಕ ಈ ವಿಡಿಯೋ ಸಾಕಷ್ಟು ವೈರಲ್ ಕೂಡ ಆಗಿತ್ತು. ಪ್ರೇಕ್ಷಕರು ಛೀಮಾರಿ ಕೂಡ ಹಾಕಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkaruau.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.