ಅನುಷಾ ರೈ ಮೇಲೆ ಕೈಮಾಡಿದ ಚೈತ್ರ ಕುಂದಾಪುರ, ಸುದೀಪ್ ವಾರ್ನ್

 | 
Hi
 ಈ ಸಲದ ಬಿಗ್ಬಾಸ್ ಕಾರ್ಯಕ್ರಮ ಆಟಗಳಿಗಿಂತ ವಿವಾದಳಿಗೆ ಹೆಚ್ಚು ಫೇಮಸ್ ಆಗ್ತಿದೆ.ಬಿಗ್ ಬಾಸ್ ನಿಯಮಾವಳಿ ಪ್ರಕಾರ ಯಾವುದೇ ಸ್ಪರ್ಧಿಗಳು ತಮ್ಮ ಸಹ ಸ್ಪರ್ಧಿಗಳ ಮೇಲೆ ದೈಹಿಕವಾಗಿ ಹಲ್ಲೆ ಮಾಡುವಂತಿಲ್ಲ. ಆದರೂ, ಲಾಯರ್ ಜಗದೀಶ್ ಮೇಲೆ ಹಲ್ಲೆ ಮಾಡಿದ್ದ ನಟ ರಂಜಿತ್ ಮನೆಯಿಂದ ಹೊರ ಹೋಗಿದ್ದಾರೆ. ಇದೀಗ ಪುನಃ ಚೈತ್ರಾ ಕುಂದಾಪುರ ಅವರು ನಟಿ ಅನುಷಾ ರೈ ಮೇಲೆ ಕೈ ಮಾಡುವ ಮೂಲಕ ಬಿಗ್ ಬಾಸ್ ನಿಯಮವನ್ನು ಉಲ್ಲಂಘನೆ ಮಾಡಿದ್ದಾರೆ.
 ಹಾಗಾದರೆ, ಚೈತ್ರಾ ಕುಂದಾಪುರ ಅವರನ್ನು ಕೂಡ ಬಿಗ್ ಬಾಸ್ ಮನೆಯಿಂದ ಹೊರಗೆ ಹಾಕಲಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.ಬಿಗ್ ಬಾಸ್ ಸೀಸನ್ 11ರ ರಿಯಾಲಿಟಿ ಶೋನಲ್ಲಿ ಇದೀಗ ನಾಲ್ಕನೇ ವಾರದ ಕಿಚ್ಚನ ಪಂಚಾಯಿತಿ ಮುಕ್ತಾಯವಾಗಿದೆ. ಎಲ್ಲರಿಗೂ ಮಾನವೀಯತೆಯಿಂದ ಆಟವಾಡುವಂತೆ ಎಚ್ಚರಿಕೆಯನ್ನೂ ನೀಡಲಾಗಿದೆ. ಇದಾದ ನಂತರವೂ ಸೋಮವಾರ ಬಿಗ್ ಬಾಸ್ ಎಲ್ಲ ಸ್ಪರ್ಧಿಗಳಿಗೆ ಪಗಟೆ ಆಟವನ್ನು ಆಡಿಸಿದ್ದಾರೆ.
 ಇಲ್ಲಿ ಮನೆಯ ಕ್ಯಾಪ್ಟನ್ ಹನುಮಂತು ಅವರು ದಾಳವನ್ನು ಉರುಳಿಸಿದ್ದಾರೆ. ಅದರಂತೆ ಇತರೆ ಸ್ಪರ್ಧಿಗಳು ಕಾಯುಗಳನ್ನು ನಡೆಸುತ್ತಾ ಪಗಡೆಯ ಆವರಣದಲ್ಲಿರುವ ಮಾಹಿತಿಗೆ ಅನುಸಾರ ಮನೆಯ ವಿರೋಧಿ ಪಂಗಡದವನ್ನು ಉಳಿಸುವುದು, ಸ್ವ ತಂಡದ ಅಭ್ಯರ್ಥಿಯನ್ನು ನಾಮಿನೇಟ್ ಅಥವಾ ನಾಮಿನೇಷನ್‌ನಿಂದ ಉಳಿಸುವುದು ಸೇರಿದಂತೆ ಹಲವು ಟಾಸ್ಕ್‌ಗಳನ್ನು ಮಾಡಲಾಗಿದೆ.
ಈ ಆಟ ಮುಕ್ತಾಯದ ನಂತರ ಸೋಫಾದ ಮೇಲೆ ಅನುಷಾ, ಭವ್ಯಾಗೌಡ, ತ್ರಿವಿಕ್ರಮ್ ಹಾಗೂ ಧರ್ಮ ಅವರು ಒಟ್ಟಿಗೆ ಮಾತನಾಡುವ ಸ್ಥಳಕ್ಕೆ ಚೈತ್ರಾ ಕುಂದಾಪುರ ಬರುತ್ತಾಳೆ. ಆಗ ಅಸಹನೆಯಿಂದ ಇದ್ದ ಅನುಷಾ ಚೈತ್ರಾಳ ಮುಂದೆ ನಾವೆಲ್ಲರೂ ನಿಮ್ಮ ಕಣ್ಣಿಗೆ ಕಾಣಿಸಲಿಲ್ಲವಾ ಗೌತಮಿ ಅವರನ್ನು ಸೇವ್ ಮಾಡಿದ್ದೀರಿ ಎಂದು ಹೇಳುತ್ತಾರೆ. ಆಗ, ಚೈತ್ರಾ ಹೌದು ನನ್ನ ಕಣ್ಣಿಗೆ ಕಾಣಿಸಿದರೂ ಕಾಣಿಸದಿರುವವರ ತರಹ ಆಟವಾಡ್ತೇನೆ ಎಂದು ಹೇಳುತ್ತಾರೆ.
 ಆಗ ಬ್ಯಾಡ ಕಣ್ಣವ್ವಾ ನಮಗೆಲ್ಲಾ ಯಾಕೆ ಎಂದು ಅನುಷಾ ಹೇಳುತ್ತಾರೆ. ಇದರಿಂದ ಕೋಪಗೊಂಡ ಚೈತ್ರಾ ಅವರು ಅನುಷಾ ಅವರ ತಲೆಯ ಮೇಲೆ ಒಂದು ಬಾರಿ ಕುಕ್ಕುತ್ತಾರೆ. ಆಗ ಮತ್ತೆ ತೀವ್ರ ಕೋಪಗೊಂಡ ಅನುಷಾ, ಚೈತ್ರಾಳಿಗೆ ಷಟ್ ಅಪ್, ಗೆಟ್ ಲಾಸ್ಟ್ ಎಂದು ಹೇಳುತ್ತಾರೆ. ನಾನು ನಿಮಗೆ ಸೀರಿಯಸ್ ಆಗಿ ಹೇಳ್ತೇನೆ. ನಿಮಗೆ ಪದೇ ಪದೆ ಹೇಳುವುದಿಲ್ಲ ಎಂದು ಗರಂ ಆಗಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.