30 ವರ್ಷಗಳಿಂದ ಯಾವುದೇ ಹೊಸ ಸೀರೆ ಖರೀದಿ ಮಾಡಿಲ್ಲ ಸೂಧಾಮೂರ್ತಿ; ಕಾರಣ ಏ.ನು ಗೊ ತ್ತಾ

 | 
Fgy

ಕರ್ನಾಟಕ ಕಂಡ ಶ್ರೇಷ್ಠ ಮಹಿಳೆಯರಲ್ಲಿ ಒಬ್ಬರು ಸುಧಾಮೂರ್ತಿ. ಸರಳತೆಗೆ ಒಂದೊಳ್ಳೆ ನಿದರ್ಶನವಾಗಿ ಎಲ್ಲರಿಗೂ ಸ್ಫೂರ್ತಿಯ ಚಿಲುಮೆಯಾಗಿದ್ದಾರೆ ಸುಧಾ ಅಮ್ಮ. ಬದುಕು ಒಂದು ಸಾಧಾರಣ, ಮಧ್ಯಮ ಕುಟುಂಬದಲ್ಲಿ ಆರಂಭವಾದರೂ ಇಂದು ಸಾವಿರಾರು ಮಂದಿಗೆ ಉದ್ಯೋಗ ನೀಡುತ್ತಾ, ಪರೋಪಕಾರಿ ಕೆಲಸಗಳನ್ನು ಮಾಡುತ್ತಾ, ತಮ್ಮ ಪುಸ್ತಕದಿಂದ ಎಲ್ಲರಿಗೂ ಸ್ಪೂರ್ತಿಯಾಗಿದ್ದಾರೆ.

ಕಾಟನ್‌ ಸೀರೆ, ಕರಿಮಣಿ, ಹಣೆಯಲ್ಲಿ ಬೊಟ್ಟು, ಮುಡಿಯಲ್ಲಿ ಮಲ್ಲಿಗೆ, ಸರಳ ಜೀವನ, ಹಮ್ಮು ಬಿಮ್ಮು ಇಲ್ಲದ ನಡವಳಿಕೆ, ಇವೇ ಸುಧಾಮೂರ್ತಿಗೆ ಭೂಷಣ ಮತ್ತು ಒಡವೆಗಳಾಗಿವೆ. ಇನ್ಫೋಸಿಸ್ ಫೌಂಡೇಶನ್‌ನ ಅಧ್ಯಕ್ಷೆ ಮತ್ತು 150 ಕ್ಕೂ ಹೆಚ್ಚು ಪ್ರಕಟಿತ ಪುಸ್ತಕಗಳೊಂದಿಗೆ ನಿಪುಣ ಲೇಖಕಿ ಸುಧಾ ಮೂರ್ತಿ ಅವರು ಎಂಜಿನಿಯರಿಂಗ್‌ನಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಹೆಣ್ಣು ಮಕ್ಕಳಿಗೆ ಈ ಕ್ಷೇತ್ರದಲ್ಲಿ ಸಾಧನೆ ಮಾಡೋಕಾಗಲ್ಲ, ಈ ಕ್ಷೇತ್ರ ಹೆಣ್ಣು ಮಕ್ಕಳಿಗೆ ಸರಿಹೊಂದುವುದಿಲ್ಲ ಎಂಬ ಲಿಂಗತಾರತಮ್ಯ, ಸ್ಟೀರಿಯೊಟೈಪ್‌ಗಳನ್ನು ಮುರಿದವರು ಇವರು.

ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದ ದೈತ್ಯ ಕಂಪನಿ ಇನ್ಫೋಸಿಸ್ ಸಂಸ್ಥೆಯ ಒಡತಿಯಾಗಿದ್ದರೂ ಸಮಾಜಮುಖಿ ಕಾರ್ಯಗಳಲ್ಲಿ ಮತ್ತು ಬರಹಗಾರ್ತಿಯಾಗಿ ಇವರ ಸಾಧನೆ ಅಪ್ರತಿಮ. ಹಣ ಎಲ್ಲಾ ನಿಮಿತ್ತ, ಬದುಕಿನಲ್ಲಿ ಆದರ್ಶ, ಸರಳತೆ, ಸಹಾಯಗಳೇ ಶಾಶತ್ವ ಎಂದು ನಂಬಿದವರು.ಸುಧಾಮೂರ್ತಿ ಬಗ್ಗೆ ಹೇಳುತ್ತಾ ಹೋದರೆ, ಮಾತೇ ಮುಗಿಯುವುದಿಲ್ಲ. ಇವರ ಬಗ್ಗೆ ಮತ್ತೊಂದು ಇಂಟರೆಸ್ಟಿಂಗ್‌ ವಿಚಾರ ಇದೆ, ಅದು ಕೂಡ ಅವರ ಸೀರೆ ಬಗ್ಗೆ.

ಸುಧಾಮೂರ್ತಿಗೆ ಸೀರೆ ಅಂದರೆ ಇಷ್ಟ, ಆದರೂ ಸಹ ಇವರು ಹೊಸ ಸೀರೆ ಖರೀದಿ ಮಾಡದೇ ವರ್ಷಗಳೇ ಕಳೆದು ಹೋಗಿವೆಯಂತೆ. ಹೌದು, 775 ಕೋಟಿ ಮೌಲ್ಯದ ನಿವ್ವಳ ಮೌಲ್ಯದ ಹೊರತಾಗಿಯೂ ಅವರು ಸರಳತೆಯ ಜೀವನ ನಡೆಸುತ್ತಿದ್ದಾರೆ. ಇಷ್ಟೆಲ್ಲಾ ಹಣವಿದ್ದರೂ ಈ ಮಹಿಳೆ 30 ವರ್ಷಗಳಿಂದ ಹೊಸ ಸೀರೆ ಖರೀದಿಸಿಲ್ಲಂತೆ. ಅಚ್ಚರಿ ಅಲ್ವಾ.. ಹೀಗೆ ಸೀರೆ ಖರೀದಿ ಮಾಡದೇ ಇರುವುದರ ಹಿಂದೆಯೂ ಕಾರಣ ಇದೆಯಂತೆ.

ಅವರೊಮ್ಮೆ ಪವಿತ್ರ ನಗರವಾದ ಕಾಶಿಗೆ ಭೇಟಿ ನೀಡಿದ್ದರು, ಆಗ ಅಲ್ಲಿ ನೀವು ಇಷ್ಟಪಡುವ ಒಂದು ವಿಷಯವನ್ನು ಬಿಟ್ಟುಬಿಡಬೇಕು ಎಂದು ಹೇಳಲಾಯಿತು. ಆಗ ಸುಧಾಮೂರ್ತಿಯವರು ತಮಮಿಷ್ಟದ ಸೀರೆಗಳನ್ನು ಖರೀದಿಸುವುದನ್ನು ಬಿಟ್ಟುಬಡುವುದಾಗಿ ಹೇಳಿದರು. ಅಲ್ಲಿಂದ ತಮ್ಮಿಷ್ಟದ ಸೀರೆಗಳನ್ನು ಖರೀದಿ ಮಾಡೋದೇ ಬಿಟ್ಟರು ಇನ್ಫೋಸಿಸ್ ಫೌಂಡೇಶನ್‌ನ ಅಧ್ಯಕ್ಷೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.