18ರ ಯುವತಿಯಂತೆ ಬ್ರೇಕ್‌ ಡ್ಯಾನ್ಸ್ ಮಾಡಿದ ಸುಧಾರಾಣಿ, ಇವರ ಅಂದ ನೊಡೋದೆ ಕಣ್ಣಿಗೆ ಆನಂದ

 | 
H

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಆನಂದ್ ಸಿನಿಮಾ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಸುಧಾರಾಣಿ ಇಂದು ಕಾಲದಲ್ಲಿ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದರು. ಮೂರನೇ ವಯಸ್ಸಿಗೆ ಜಾಹೀರಾತುವೊಂದರಲ್ಲಿ ಕಾಣಿಸಿಕೊಂಡಿದ್ದ ಸುಧಾರಾಣಿ, ನಂತರ ಕಿಲಾಡಿ ಕಿಟ್ಟು, ಕುಳ್ಳ ಕುಳ್ಳಿ, ಅನುಪಮ ಸೇರಿದಂತೆ ಇನ್ನು ಕೆಲ ಸಿನಿಮಾಗಳಲ್ಲಿ ಬಾಲನಟಿಯಾಗಿ ನಟಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು. 

ಇವರ ಮೊದಲ ಹೆಸರು ಜಯಶ್ರೀ. ನಂತರದಲ್ಲಿ ಸುಧಾರಾಣಿ ಎಂದು ಬದಲಿಸಿಕೊಂಡರು. ಸ್ಯಾಂಡಲ್‌ವುಡ್‌ಗೆ ಹಲವು ಹಿಟ್ ಸಿನಿಮಾಗಳನ್ನು ನೀಡಿರುವ ಸುಧಾರಾಣಿ ಈಗ ಸಕತ್ ಆಗಿ ಡ್ಯಾನ್ಸ್ ಮಾಡಿ ಟ್ರೆಂಡಿಂಗ್ ಸೃಷ್ಟಿ ಮಾಡಿದ್ದಾರೆ. ಡಾ.ಸುಧಾರಾಣಿ ಅವರು ಖಾಸಗಿ ವಾಹಿನಿಯ ಧಾರಾವಾಹಿ ಮುಖ್ಯ ಪೋಷಕ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ಹೊರಗಿನ ಪ್ರಪಂಚವನ್ನು ಮರೆತು ತನ್ನ ಕುಟುಂಬವೇ ಒಂದು ಪ್ರಪಂಚ ಎಂದು ಬದುಕುತ್ತಿರುವ ಒಂದು ಹೆಣ್ಣು ತಾಯಿಯಾಗಿ, ಸೊಸೆಯಾಗಿ ಮನೆ ಹೀಗೆ ನಿಭಾಯಿಸಿಕೊಂಡು ಹೋಗುತ್ತಾಳೆ ಎಂಬ ಕಥೆಯಲ್ಲಿ ಮುಖ್ಯ ಪಾತ್ರಧಾರಿಯಾಗಿ ನಟಿಸಿದ್ದಾರೆ. 

https://youtube.com/shorts/HaL4RHR2IOI?si=5O4ozwtPmKBUd6Ge

ಈ ಮೂಲಕ ಕಿರುತೆರೆಯತ್ತ ಬಂದಿರುವ ಸುಧಾರಾಣಿ ಸಮಯ ದೊರೆತಾಗ ಡ್ಯಾನ್ಸ್ ಕೂಡ ಮಾಡಿ ಎಲ್ಲರ ಮನಗೆದ್ದಿದ್ದಾರೆ. ನನಗೆ ಸೋಷಿಯಲ್‌ ಮೀಡಿಯಾದ ಬಗ್ಗೆ ಅಷ್ಟಾಗಿ ಐಡಿಯಾ ಇರಲಿಲ್ಲ. ಹಲವರು ನನ್ನನ್ನು ಸೋಷಿಯಲ್‌ ಮೀಡಿಯಾದಲ್ಲಿ ಯಾಕಿಲ್ಲ ಎಂದು ಕೇಳುತ್ತಿದ್ದರು. ನನಗೆ ಆ ದಿನ ಏನು ಅನಿಸುತ್ತದೆ ಅದನ್ನು ಪೋಸ್ಟ್‌ ಮಾಡುತ್ತೇನೆ ಅಷ್ಟೇ. ಈ ಮಾಧ್ಯಮ ಚೆನ್ನಾಗಿದೆ, ಹಲವರು ಇಷ್ಟಪಡುತ್ತಿದ್ದಾರೆ. ಎಂದು ತಾವು ಡ್ಯಾನ್ಸ್ ಮಾಡಿದ್ದರ ಕುರಿತು ಹೇಳಿದ್ದಾರೆ.

ಬರೋಬ್ಬರಿ ನಾಲ್ಕು ದಶಕಗಳಿಗಿಂತಲೂ ಅಧಿಕಕಾಲ ಕನ್ನಡ ಚಿತ್ರರಂಗದಲ್ಲಿ ನಟಿ ಸುಧಾರಾಣಿ ಅವರು ವಿಭಿನ್ನ ವಿಭಿನ್ನ ಪಾತ್ರಗಳನ್ನು ಮಾಡುವ ಮೂಲಕ ಸಕ್ರಿಯರಾಗಿದ್ದಾರೆ. ಕೇವಲ ಸಿನಿಮಾರಂಗದಲ್ಲಿ ಮಾತ್ರವಲ್ಲದೆ ಈಗ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುವಂತಹ ಶ್ರೀರಸ್ತು ಶುಭಮಸ್ತು ಕಾರ್ಯಕ್ರಮದಲ್ಲಿ ಕೂಡ ಸುಧಾರಾಣಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. 

ನಟಿ ಸುಧಾರಾಣಿ ಅವರು ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಕನ್ನಡ ಚಿತ್ರರಂಗದಲ್ಲಿ ಬಾಲ ನಟಿಯಾಗಿ ಕಾಣಿಸಿಕೊಂಡು ನಂತರ ನಾಯಕ ನಟಿಯಾಗಿ ಕೂಡ ಚಿಕ್ಕವಯಸ್ಸಿಗೆ ಕಾಣಿಸಿಕೊಳ್ಳುವ ಮೂಲಕ ಅತ್ಯಂತ ಕಡಿಮೆ ಸಮಯದಲ್ಲಿ ಹೆಚ್ಚಿನ ಜನಪ್ರಿಯತೆಯನ್ನು ಹೊಂದಿರುವ ನಟಿಯಾಗಿದ್ದಾರೆ. ಅವರ ಚೆಲುವಿಗೆ ಈಗಿನ ನಟಿಯರು ಕೂಡ  ಸಮನಾಗುವುದಿಲ್ಲ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.