ಬ್ಯಾಂಗಲ್ ಬಂಗಾರಿ ಹಾಡಿಗೆ ಎದ್ದುಬಿದ್ದು ಡ್ಯಾನ್ಸ್ ಮಾಡಿದ ಸುಧಾರಾಣಿ, ಯುವರಾಜ್ ಕುಮಾರ್ ಫಿದಾ
Jul 6, 2025, 09:41 IST
|

ಎಕ್ಕ ಸಿನಿಮಾದ ಬ್ಯಾಂಗಲ್ ಬಂಗಾರಿ ಹಾಡು ಕಳೆದ ಕೆಲ ದಿನಗಳಿಂದಲೂ ಎಲ್ಲ ಸಾಮಾಜಿಕ ಜಾಲತಾಣ ಹಾಗೂ ಇನ್ನಿತರೆ ಕಡೆಗಳಲ್ಲಿ ಸಖತ್ ಆಗಿ ಸದ್ದು ಮಾಡುತ್ತಿದೆ. ಯುವರಾಜ್ಕುಮಾರ್-ಸಂಜನಾ ನಟಿಸಿರುವ ಈ ಹಾಡು ಬಿಡುಗಡೆ ಆದ 22 ದಿನಗಳಲ್ಲಿ 10 ಮಿಲಿಯನ್ ವೀಕ್ಷಣೆ ಗಳಿಸಿಕೊಂಡಿದೆ. ಹಾಡು ಸಖತ್ ವೈರಲ್ ಆಗಿದ್ದು, ಈ ಬಾರಿ ಗಣಪತಿ ಹಬ್ಬದಲ್ಲೂ ಸಖತ್ ಮಿಂಚುವುದು ಖಾತ್ರಿ ಆಗಿದೆ.
ಯಾವ ಆಟೊ, ಟ್ಯಾಕ್ಸಿ ಹೊಕ್ಕಿದರೂ ಇದೇ ಹಾಡು ಕೇಳಿ ಬರುತ್ತಿದೆ. ಯೂಟ್ಯೂಬ್ನಲ್ಲಂತೂ ಜನ ಲೂಪ್ನಲ್ಲಿ ಈ ಹಾಡು ಕೇಳುತ್ತಿದ್ದಾರೆ. ಹಾಡಿನ ಮಜವಾದ ಸಾಹಿತ್ಯ, ಹಾಡಿರುವ ರೀತಿಗೆ ಕೇಳುಗರು ಫಿದಾ ಆಗಿದ್ದಾರೆ. ಈ ಗೀತೆ ಎಲ್ಲೆಡೆ ವೈರಲ್ ಆಗಿದ್ದು, ಅನೇಕ ಸೆಲೆಬ್ರಿಟಿಗಳು ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಹಲವರು ರೀಲ್ಸ್ ಸಹ ಮಾಡಿದ್ದಾರೆ. ಇದೀಗ ಈ ಹಾಡು ಹೊಸ ದಾಖಲೆ ಬರೆದಿದ್ದು ಯೂಟ್ಯೂಬ್ನಲ್ಲಿ 10 ಮಿಲಿಯನ್ ವೀಕ್ಷಣೆ ಪಡೆದಿದೆ.
ನಟಿ ಸುಧಾರಾಣಿ ಕೂಡ ಲುಂಗಿ ಧರಿಸಿ ಬ್ಯಾಂಗಲ್ ಬಂಗಾರಿ ಹಾಡಿಗೆ ಹೆಜ್ಜೆ ಹಾಕಿರೋದು ಇನ್ನೊಂದು ವಿಷೇಶ. ಹೌದು ಕನ್ನಡದಲ್ಲಿ ಈಗಾಗಲೇ ಕೆಲವು ಒಳ್ಳೆಯ ಹಾಡುಗಳನ್ನು ಹಾಡಿರುವ ಆಂಟೊನಿ ದಾಸನ್ ಅವರು ‘ಬ್ಯಾಂಗಲ್ ಬಂಗಾರಿ’ ಹಾಡನ್ನು ಹಾಡಿದ್ದಾರೆ. ಆಂಟೊನಿ ಅವರು ಈ ಹಿಂದೆ ‘ಟಗರು ಬಂತು ಟಗರು’, ‘ಭೀಮ’ ಸಿನಿಮಾದ ‘ಸೂರಿ ಅಣ್ಣ’ ಇನ್ನೂ ಕೆಲವಾರು ಹಿಟ್ ಹಾಡುಗಳನ್ನು ಕನ್ನಡದಲ್ಲಿ ಹಾಡಿದ್ದಾರೆ. ಇದೀಗ ‘ಬ್ಯಾಂಗಲ್ ಬಂಗಾರಿ’ಗೂ ತಮ್ಮ ದನಿ ನೀಡಿದ್ದಾರೆ.
ಎಕ್ಕ ಸಿನಿಮಾಕ್ಕೆ ಚರಣ್ ರಾಜ್ ಸಂಗೀತ ನೀಡಿದ್ದು, ಯುವಜನೆತೆಗೆ ಇಷ್ಟವಾಗುವ ಹಾಡುಗಳನ್ನು ಚರಣ್ ನೀಡಿದ್ದಾರೆ. ಹಾಡಿಗೆ ಯುವ-ಸಂಜನಾ ಸಖತ್ ಆಗಿ ಹೆಜ್ಜೆ ಹಾಕಿದ್ದಾರೆ. ಹಾಡು ಯೂಟ್ಯೂಬ್ನಲ್ಲಿ ಬಿಡುಗಡೆ ಆದ ಕೇವಲ 22 ದಿನಗಳಲ್ಲಿ ಬರೋಬ್ಬರಿ 10 ಮಿಲಿಯನ್ ವೀಕ್ಷಣೆ ಕಂಡಿದೆ. ಟಾಪ್ ಮ್ಯೂಸಿಕ್ ವಿಡಿಯೋ ಕೆಟಗರಿಯಲ್ಲಿ 29ನೇ ಸ್ಥಾನ ಪಡೆದಿದೆ.ತನ್ನಿಷ್ಟದ ಹುಡುಗಿಗೆ ಬಳೆ ತೊಡಿಸಿದಾಗ ಹುಡುಗ ಖುಷಿಯಿಂದ ಹಾಡುವ ಹಾಡು ಇದಾಗಿದೆ. ಈಗಾಗಲೇ ಹಲವಾರು ಮಂದಿ ಸಿನಿಮಾ ಹಾಗೂ ಕಿರುತೆರೆ ಸೆಲೆಬ್ರಿಟಿಗಳು ‘ಬ್ಯಾಂಗಲ್ ಬಂಗಾರಿ’ ಹಾಡಿಗೆ ತಮ್ಮದೇ ರೀತಿಯಲ್ಲಿ ಸ್ಟೆಪ್ಪುಗಳನ್ನು ಹಾಕಿ, ರೀಲ್ಸ್ ಮಾಡಿದ್ದಾರೆ. ಸ್ವತಃ ಯುವರಾಜ್ ಕುಮಾರ್ ಸಹ ಹಲವರೊಟ್ಟಿಗೆ ಬ್ಯಾಂಗಲ್ ಬಂಗಾರಿ ಹಾಡಿಗೆ ಸ್ಪೆಟ್ಟು ಹಾಕಿ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.