ತುಂಬಾ ನಗುನಗುತ್ತ ಮಸೀದಿ ಧ್ವಂಸದ ಬಗ್ಗೆ ಮಾತಾನಾಡಿದ ಸೂಲಿಬೆಲೆ
ಹಿಂದೂ ಧರ್ಮದ ನಾಶಕ್ಕೆ ಜಾಗತಿಕವಾಗಿ ದೊಡ್ಡ ಷಡ್ಯಂತರ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ದೊಡ್ಡ ಸಮ್ಮಳನವೂ ನಡೆದಿತ್ತು. ಹಿಂದೂ ಧರ್ಮವನ್ನು ನಾಶಪಡಿಸುವುದು ಅಷ್ಟು ಸುಲಭವಿಲ್ಲ. ಧರ್ಮ ಮತ್ತು ಮತ(ರಿಲಿಜನ್) ನಡುವೆ ಸಾಕಷ್ಟು ವ್ಯತ್ಯಾಸವಿದೆ. ಹಿಂದೂ ಧರ್ಮವೇ ಹೊರತು ಮತವಲ್ಲ. ಈ ಸ್ಪಷ್ಟತೆ ಹಿಂದೂಗಳಲ್ಲಿ ಇರಬೇಕು ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಪುಸ್ತಕ, ಒಬ್ಬನೇ ಋಷಿ ಎನ್ನುವುದಿಲ್ಲ. ನಮ್ಮಲ್ಲಿ ಮಧ್ವಾಚಾರ್ಯ, ಶಂಕರಾಚಾರ್ಯ, ರಾಮಾನುಜಾ ಚಾರ್ಯರು, ಇತಿಹಾಸ, ಪುರಾಣ, ತಂತ್ರಶಾಸ್ತ್ರ ಹೀಗೆ ಒಂದು ಪುಸ್ತಕವಲ್ಲ ಗ್ರಂಥಾಲಯವೇ ಇದೆ. ಭಿನ್ನ ಭಿನ್ನ ಮಾರ್ಗವನ್ನು ತನ್ನೊಂದಿಗೆ ಸೇರಿಸಿಕೊಳ್ಳುವುದು ಧರ್ಮ. ತನ್ನದು ಮಾತ್ರ ಸತ್ಯ ಎನ್ನುವುದು ರಿಲಿಜನ್. ಹೀಗಾಗಿ ರಿಲಿಜನ್ ಎಂದಿಗೂ ಧರ್ಮಕ್ಕೆ ಸಮಾನವಲ್ಲ. ಧರ್ಮದಲ್ಲಿ ಯಾವುದು ಅಗತ್ಯವೂ ಇಲ್ಲ, ಅನಿವಾರ್ಯವೂ ಅಲ್ಲ. ರೂಪವಿಲ್ಲದ ಕಲ್ಲಿನಲ್ಲೂ ದೇವರ ರೂಪ ನೋಡುವವರು ನಾವು ಎಂದು ವಿಶ್ಲೇಷಿಸಿದರು.
ನರೇಂದ್ರ ಮೋದಿಯವರನ್ನು ಮಗದೊಮ್ಮೆ ಪ್ರಧಾನಿಯಾಗಿಸುವ ಸಲುವಾಗಿ ಕರ್ನಾಟಕದಲ್ಲಿ ನಮೋ 2.0 ಗೆ ಚಾಲನೆ ನೀಡಲಾಗಿದ್ದು, 2024ರ ಮೇಯಲ್ಲಿ ನರೇಂದ್ರ ಮೋದಿಯವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವುದು ನಿಶ್ಚಿತ ಎಂದು ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ತಿಳಿಸಿದ್ದಾರೆ. ವಿಸ್ತಾರ ನ್ಯೂಸ್ ಸಿಇಒ ಹಾಗೂ ಪ್ರಧಾನ ಸಂಪಾದಕ ಹರಿಪ್ರಕಾಶ ಕೋಣೆಮನೆಯವರೊಂದಿಗೆ ವಿಶೇಷ ಸಂದರ್ಶನದಲ್ಲಿ ಅನೇಕ ವಿಚಾರಗಳ ಕುರಿತು ಚಕ್ರವರ್ತಿ ಸೂಲಿಬೆಲೆ ಮಾತನಾಡಿದ್ದಾರೆ.
ಜನರು ರಾಷ್ಟ್ರೀಯ ವಿಚಾರ ಬಂದಾಗ ಮೋದಿಯವರನ್ನು ಆಯ್ಕೆ ಮಾಡುತ್ತಾರೆ. ಪರಿಚ್ಛೇದ 370, ಕಾಶೀ ಕಾರಿಡಾರ್, ದೇಶವಿರೋಧಿ ಖಲಿಸ್ತಾನಿಗಳ ಹತ್ಯೆ ಮಾಡುವುದಿರಬಹುದು, ಪ್ರತಿಯೊಬ್ಬರಲ್ಲಿ ವಿಶ್ವಾಸ ಮೂಡಿಸಿದೆ. ಇದು ಮೋದಿ ಪರವಾಗಿ ಕೆಲಸ ಮಾಡುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ ಎಂದು ಹೇಳಿದರು. ಅಯೋಧ್ಯೆ ರಾಮಮಂದಿರದ ಐತಿಹಾಸಿಕ ಕ್ಷಣವನ್ನು ಎಲ್ಲರೂ ಭಿನ್ನ ಭಿನ್ನ ರೂಪದಲ್ಲಿ ಆನಂದಿಸುತ್ತಿದ್ದಾರೆ.
ರಾಮ ಮಂದಿರದ ಮೇಲಿದ್ದ ಮಸೀದಿಯನ್ನು ಒಡೆದು ಮತ್ತೆ ಆ ಶ್ರೀ ರಾಮ ಮಂದಿರದ ನಿರ್ಮಾಣ ನಡೆದಿದೆ ಆದರೆ ರಾಜ್ಯದಲ್ಲಿ ಕರಸೇವಕರನ್ನು ಬಂಧಿಸುತ್ತಿದ್ದಾರೆ. ಕರ್ನಾಟಕ ಆಂಜನೇಯನ ಭೂಮಿ, ಇಂತಹ ಕರ್ನಾಟಕದಲ್ಲಿ ಅಯೋಧ್ಯೆ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತ ಆಗ್ತಿರೋದು ಬೇಸರದ ಸಂಗತಿ ಎಂದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.