ದ ರ್ಶನ್ ಕೊ ಲೆ ಪ್ರಕರಣ ಕೇಳಿ ಸಿಡಿದೆದ್ದ ಸನ್ನಿ ಲಿಯೋನ್;

 | 
Uuu

ಬೆಂಗಳೂರಿಗೆ ಆಗಮಿಸಿದ್ದ ಬಾಲಿವುಡ್ ನಟಿ ಸನ್ನಿ ಲಿಯೋನ್ ಅವರಿಗೆ ನಟ ದರ್ಶನ್ ಬಂಧನದ ಕುರಿತು ಪ್ರಶ್ನೆ ಕೇಳಲಾಗಿತ್ತು. ಈ ಪ್ರಶ್ನೆಗೆ ತಮ್ಮದೇ ಶೈಲಯಲ್ಲಿ ಸನ್ನಿ ಲಿಯೋನ್ ಪ್ರತಿಕ್ರಿಯಿಸಿದ್ದಾರೆ. ಹೆಚ್.ಆರ್.ಬಿ.ಆರ್ ಲೇಔಟ್ ನಲ್ಲಿ ಹೊಸದಾಗಿ ಆರಂಭವಾಗ್ತಿರುವ ನ್ಯಾಚುರಲ್ಸ್ ನ ಬ್ಯೂಟಿ ಆ್ಯಂಡ್ ಎಕ್ಸ್ಪಿರಿಯನ್ಸ್ ಉದ್ಘಾಟನೆಗಾಗಿ ಪತಿ ಡೇನಿಯಲ್ ವೇಬರ್ ಜೊತೆ ಆಗಮಿಸಿದ್ದ ಸನ್ನಿ ಲಿಯೋನ್ ಅಂದವನ್ನು ಕಣ್ತುಂಬಿಕೊಳ್ಳಲು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದರು. 

ಸನ್ನಿ ಲಿಯೋನ್ ಕಾರ್‌ನಿಂದ ಹೊರ ಬರುತ್ತಿದ್ದಂತೆ ಅಭಿಮಾನಿಗಳು ಜೋರಾಗಿ ಶಿಳ್ಳೆ, ಚಪ್ಪಾಳೆ ಹಾಕುತ್ತಾ ಮಾದಕ ಚೆಲುವೆಯನ್ನು ಸಿಲಿಕಾನ್ ಸಿಟಿಗೆ ಸ್ವಾಗತಿಸಿಕೊಂಡರು. ದೂರದಿಂದಲೇ ಸನ್ನಿ ಫೋಟೋ ಸೆರೆ ಹಿಡಿದು, ಅಲ್ಲಿಂದಲೇ ಸೆಲ್ಫಿ ಕ್ಲಿಕ್ಕಿಸಿಕೊಂಡು ಒಳಗೊಳಗೆ ಖುಷಿಯಿಂದ ಕುಣಿದಾಡಿದರು. ಶಾಪ್ ಉದ್ಘಾಟನೆ ಬಳಿ ಕನ್ನಡದಲ್ಲಿಯೇ ಮಾತು ಆರಂಭಿಸುವ ಮೂಲಕ ಎಲ್ಲರಿಗೂ ಶಾಕ್ ನೀಡಿದರು. ಕನ್ನಡ ಕಲಿಯುತ್ತೇನೆ ಎಂದು ಮಾತು ಆರಂಭಿಸಿದ ಸನ್ನಿ ಲಿಯೋನ್, ಐ ಲವ್ ಬೆಂಗಳೂರು ಎಂದು ಜೋರಾಗಿ ಹೇಳಿದರು. ನನಗೆ ಸ್ಪಲ್ಪ ಸ್ವಲ್ಪ ಕನ್ನಡ ಬರುತ್ತದೆ.

ಇನ್ನು ಕಲಿಯುತ್ತೇನೆ ಎಂದು ಹೇಳುವ ಮೂಲಕ ಕನ್ನಡಿಗರಿಗೆ ಪ್ರೀತಿ ಪಾತ್ರರಾದರು. ಇದೇ ವೇಳೆ ದರ್ಶನ್ ಬಂಧನದ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ ನೀಡಲು ಸನ್ನಿ ಲಿಯೋನ್‌ ನಿರಾಕರಿಸಿದರು. ಇದು ತುಂಬಾ ಕಷ್ಟವಾದ ಪ್ರಶ್ನೆ ಆಗಿದೆ ಎಂದು ಹೇಳಿದರು. ತಂಗಿ, ಪತ್ನಿ ಮತ್ತು ತಾಯಿಯನ್ನು ಖುಷಿಪಡಿಸಲು ಯಾವ ವಸ್ತು ಖರೀದಿ ಮಾಡ್ತೀರಿ ಹೇಳಿ. ಆಗಲ್ಲವಲ್ಲಾ, ಇದು ಸಹ ಹಾಗೆ ಎಂದು  ಸನ್ನಿ ಕೊಂಚ ಗರಂ ಆದರು.

ಇದೀಗ ಸಿಲಿಕಾನ್ ಸಿಟಿಗೆ ಸೇಸಮ್ಮ ಎಂಟ್ರಿ ಕೊಟ್ಟು, ತನ್ನ ಅಭಿಮಾನಿಗಳ ಮುಖದಲ್ಲಿ ನಗು ತರಿಸಿದ್ದಾರೆ. ಸನ್ನಿ ಲಿಯೋನ್ ಕಂಡು ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಆದ್ರೆ ಬಂದಿದ್ದು ಒಂದೆರಡು ನಿಮಿಷವೂ ಇಲ್ಲ, ಹೀಗೆ ಬಂದ್ರು. ಹಾಗೆ ಹೋಗಿದ್ದಾರೆ. ಆದ್ರೂ ಬರೋ-ಹೋಗೋದನ್ನು ನೋಡಲು ಅಭಿಮಾನಿಗಳು ರಸ್ತೆ ತುಂಬೆಲ್ಲ ನಿಂತಿದ್ದರಂತೆ ಫ್ಯಾನ್ಸ್​. 

ಇನ್ನು ಸೇಸಮ್ಮನ ಆಗಮನವಾಗ್ತಿದ್ದಂತೆ ಫ್ಯಾನ್ಸ್ ಶಿಳ್ಳೆ ಹೊಡೆದು ಸಂಭ್ರಮಿಸಿದ್ರು. ಕೆಲ ಅಭಿಮಾನಿಗಳು ಸನ್ನಿ ಲಿಯೋನ್ ಭೇಟಿಯಾಗಿ ದೂರದಿಂದಲೇ ಫೋಟೋ ಕೂಡ ತೆಗೆಸಿಕೊಂಡರು. ಇನ್ನೂ ಕೆಲವರು ಬೆಂಗಳೂರಲ್ಲಿ ಇದ್ದು ಬಿಡಿ ಎಂದು ಬೇಡಿಕೆ ಇಟ್ಟಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು‌ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.