ಹೆಣ್ಣುಮಕ್ಕಳಿಗೆ ಮದುವೆ ನಂತರ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಪಾಲು ನೀಡಬೇಕು ಎಂದ ಸುಪ್ರೀಂ ಕೋರ್ಟ್

 | 
Bj

ತಂದೆಯ ಆಸ್ತಿಯಲ್ಲಿ ಪುತ್ರನ ಜತೆಗೆ ಪುತ್ರಿಗೂ ಸಮಾನ ಪಾಲಿದೆ ಎಂದು ಹೈಕೋರ್ಟ್‌ ಪುನರುಚ್ಚರಿಸಿದೆ.ಹೆಣ್ಣು ಮಕ್ಕಳಿಗೂ ಕೂಡ ತಂದೆಯ ಆಸ್ತಿ  ಯಲ್ಲಿ ಸಮಾನವಾದ ಹಕ್ಕು ನೀಡಬೇಕು ಗಂಡು ಮಕ್ಕಳಿಗೆ ಹೇಗೆ ತಂದೆಯ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕು ಇದಿಯೋ ಅದೇ ರೀತಿ ಹೆಣ್ಣು ಮಕ್ಕಳಿಗೂ ಕೂಡ ಆಕೆಯ ಮದುವೆಯ ನಂತರ ಪಿತ್ರಾರ್ಜಿತ  ಆಸ್ತಿಯಲ್ಲಿ ಹಕ್ಕು ಇದೆ ಎಂದು ಈಗಾಗಲೇ ಸುಪ್ರೀಂ ಕೋರ್ಟ್  ಆದೇಶ ಹೊರಡಿಸಿದೆ. 

ಆದರೆ ಹಿಂದೂ ಉತ್ತರಾಧಿಕಾರ ಕಾಯ್ದೆ 2005ರ ತಿದ್ದುಪಡಿಗಿಂತ ಮೊದಲು ನಿಯಮಗಳು ಬೇರೆ. 2005ರಲ್ಲಿ ಇಂದು ಉತ್ತರಾಧಿಕಾರ ಕಾಯ್ದೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಯಿತು. 2005ಕ್ಕಿಂತ ಮೊದಲು ಹೆಣ್ಣು ಮಕ್ಕಳಿಗೆ ತಂದೆಯ ಸ್ವಯಾರ್ಜಿತ ಆಸ್ತಿಯಲ್ಲಿ ಮಾತ್ರ ಪಾಲು ಇತ್ತು. ಆದರೆ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಕೇಳುವಂತೆ ಇರಲಿಲ್ಲ. ಅದು ಗಂಡು ಮಕ್ಕಳಿಗೆ ಮಾತ್ರ ಸೇರುತ್ತಿತ್ತು.

ಈ ಕಾನೂನು ಬದಲಾವಣೆ ಮಾಡಿ ಹೆಣ್ಣು ಮಕ್ಕಳಿಗೂ ಕೂಡ ಸಮಾನ ಹಕ್ಕು ನೀಡಬೇಕು ಎನ್ನುವ ಕಾನೂನನ್ನು ಜಾರಿಗೆ ತರಲಾಯಿತು. ಆದರೆ 2005ಕ್ಕಿಂತ ಮೊದಲು ಇದು ಯಾವುದೇ ಹೆಣ್ಣು ಮಗಳು ತನ್ನ ತಂದೆಯ ಆಸ್ತಿ ಬೇಡ ಎಂದು ಪತ್ರಕ್ಕೆ ಸಹಿ ಹಾಕಿ ಕೊಟ್ಟಿದ್ದರೆ ಈ ತಿದ್ದುಪಡಿಯ ನಂತರವೂ ಕೂಡ ತಂದೆ ಆಸ್ತಿಯಲ್ಲಿ ಪಾಲು ಕೇಳಲು ಸಾಧ್ಯವಿಲ್ಲ.

2005 ಕ್ಕಿಂತ ಮೊದಲು ಬದುಕಿದ್ದ ತಾಯಿಯ ಮಕ್ಕಳಿಗೆ ಆಕೆಯ ತಂದೆಯ ಆಸ್ತಿಯಲ್ಲಿ ಹಕ್ಕು ಇದೆ ಎನ್ನುವ ಪ್ರಶ್ನೆ ಹಲವರಲ್ಲಿ ಇದೆ. ಇತ್ತೀಚಿಗೆ ಗದಗದ ಪ್ರಕರಣ ಒಂದರಲ್ಲಿ ಹೈಕೋರ್ಟ್ ತೀರ್ಪನ್ನು ನೀಡಿದೆ. ಹಿಂದೆ 2005 ಮೊದಲು ಬದುಕಿದ್ದ ಮಹಿಳೆಯ ಮಕ್ಕಳಿಗೆ ಮಾತ್ರ ಆಕೆಯ ಪಾಲಿಗೆ ಬಂದಿರುವ ಆಸ್ತಿಯಲ್ಲಿ ಹಕ್ಕು ಇರುತ್ತಿತ್ತು. 2005 ತಿದ್ದುಪಡಿಯ ನಂತರ ಹೆಣ್ಣು ಮಕ್ಕಳು ಬದುಕಿದ್ದರು ಅಥವಾ ಇಲ್ಲದೇ ಇದ್ದರೂ ಅವರ ಆಸ್ತಿಯವರ ವಾರಸುದಾರರಿಗೆ ಸೇರಬೇಕು ಎಂದು ತಿಳಿಸಲಾಗಿದೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.