ಸ್ವಿಸ್ ಬ್ಯಾಂಕ್ ಖಾತೆ ಹೊಂದಿರುವವರಿಗೆ ನಡುಕ ಶುರು, ನುಡಿದಂತೆ ನಡೆದ್ರಾ ಮೋದಿಜಿ

 | 
Hg

ಇನ್ಮುಂದೆ ನನ್ನ ದುಡ್ಡು ಸ್ವಿಸ್ ಬ್ಯಾಂಕ್ ಖಾತೆಯಲ್ಲಿ ಸೇಫ್ ಆಗಿದೆ ಎಂದು ರಾಜಕಾರಣಿಗಳು ಹೇಳಿ ಆರಾಮಾಗಿ ಇರುವಂತಿಲ್ಲ. ಹೌದು ಸ್ವಿಟ್ಜರ್ಲೆಂಡ್‌ನ ಬ್ಯಾಂಕ್‌ಗಳು ತಮ್ಮಲ್ಲಿ ಭಾರತೀಯರು ಹೊಂದಿರುವ ಖಾತೆಗಳ ವಿವರಗಳನ್ನು ಭಾರತ ಸರ್ಕಾರದೊಂದಿಗೆ ಹಂಚಿಕೊಂಡಿವೆ. ಇದು ಉಭಯ ದೇಶಗಳ ನಡುವಿನ ಐದನೇ ಹಂತದ ಮಾಹಿತಿ ವಿನಿಮಯವಾಗಿದೆ.

ಇದರಲ್ಲಿ ವ್ಯಕ್ತಿಗಳು, ಕಂಪನಿಗಳು, ಟ್ರಸ್ಟ್‌ಗಳು ಹೊಂದಿರುವ ಖಾತೆಗಳ ವಿವರವೂ ಇದೆ. ಕಳೆದ ವರ್ಷದ ಅಕ್ಟೋಬರ್‌ನಲ್ಲಿ ನಾಲ್ಕನೇ ಕಂತಿನ ಮಾಹಿತಿಯನ್ನು ಸ್ವಿಟ್ಜರ್ಲೆಂಡ್‌ ಬ್ಯಾಂಕ್‌ಗಳು ಭಾರತ ಸರ್ಕಾರದೊಂದಿಗೆ ಹಂಚಿಕೊಂಡಿದ್ದವು. ಸ್ವಿಸ್ ಬ್ಯಾಂಕ್ ಖಾತೆಯ ವಿವರಗಳ ಐದನೇ ಕಂತನ್ನು ಭಾರತ ಸ್ವೀಕರಿಸಿದೆ. ವಾರ್ಷಿಕ ಸ್ವಯಂಚಾಲಿತ ಮಾಹಿತಿ ವಿನಿಮಯ ಅಡಿಯಲ್ಲಿ ಸ್ವಿಟ್ಜರ್ಲೆಂಡ್ 104 ದೇಶಗಳೊಂದಿಗೆ ಸುಮಾರು 36 ಲಕ್ಷ ಹಣಕಾಸು ಖಾತೆಗಳ ವಿವರಗಳನ್ನು ಹಂಚಿಕೊಂಡಿದೆ. 

ಭಾರತವು 75 ದೇಶಗಳೊಂದಿಗೆ 2019ರ ಸೆಪ್ಟೆಂಬರ್‌ನಲ್ಲಿ ಈ ಸ್ವಯಂಚಾಲಿತ ಮಾಹಿತಿ ವಿನಿಮಯದ ಅಡಿಯಲ್ಲಿ ಮೊದಲ ಬಾರಿಗೆ ಸ್ವಿಟ್ಜರ್ಲೆಂಡ್‌ನಿಂದ ಬ್ಯಾಂಕ್‌ ಖಾತೆಗಳ ವಿವರಗಳನ್ನು ಪಡೆದುಕೊಂಡಿತ್ತು.ಭಾರತದೊಂದಿಗೆ ಹಂಚಿಕೊಂಡ ವಿವರಗಳಲ್ಲಿ ನೂರಾರು ಬಗೆಯ ಹಣಕಾಸು ಖಾತೆಗಳ ಮಾಹಿತಿಗಳಿವೆ. ತೆರಿಗೆ ವಂಚನೆ, ಅಕ್ರಮ ಹಣಕಾಸು ವರ್ಗಾವಣೆ ಮತ್ತು ಭಯೋತ್ಪಾದಕ ನಿಧಿಯಂತಹ ಅಕ್ರಮಗಳ ತನಿಖೆಗೆ ಈ ದತ್ತಾಂಶವನ್ನು ಬಳಸಲಾಗುತ್ತದೆ. 

ಈ ವಿನಿಮಯವು ಕಳೆದ ತಿಂಗಳು ನಡೆದಿದ್ದು, ಮುಂದಿನ ಮಾಹಿತಿಯನ್ನು ಸೆಪ್ಟೆಂಬರ್ 2024ರಲ್ಲಿ ಸ್ವಿಟ್ಜರ್ಲೆಂಡ್ ಹಂಚಿಕೊಳ್ಳಲಿದೆ. ದತ್ತಾಂಶ ರಕ್ಷಣೆ ಮತ್ತು ಗೌಪ್ಯತೆಗೆ ಭಾರತದಲ್ಲಿರುವ ಕಾನೂನುಗಳ ಪರಿಶೀಲನೆ ಸೇರಿದಂತೆ ಸುದೀರ್ಘ ಪ್ರಕ್ರಿಯೆಯ ನಂತರ ಸ್ವಿಟ್ಜರ್ಲೆಂಡ್ ಭಾರತದೊಂದಿಗೆ ಈ ದತ್ತಾಂಶಗಳನ್ನು ಹಂಚಿಕೊಂಡಿದೆ. ಹೆಸರು, ವಿಳಾಸ, ವಾಸವಿರುವ ದೇಶ ಮತ್ತು ತೆರಿಗೆ ಗುರುತಿನ ಸಂಖ್ಯೆ ಹಾಗೂ ಖಾತೆಯ ಬ್ಯಾಲೆನ್ಸ್ ಮತ್ತು ಬಂಡವಾಳ ಆದಾಯಕ್ಕೆ ಸಂಬಂಧಿಸಿದ ಮಾಹಿತಿಯು ವಿನಿಮಯ ಮಾಡಿಕೊಂಡ ವಿವರಗಳಲ್ಲಿ ಸೇರಿವೆ.

ಸ್ವಿಟ್ಜರ್ಲೆಂಡ್‌ನಲ್ಲಿರುವ ಎಲ್ಲಾ ಬ್ಯಾಂಕ್‌ಗಳಲ್ಲಿ ಸ್ವಿಸ್ ಫೆಡರಲ್ ಬ್ಯಾಂಕಿಂಗ್ ಆಕ್ಟ್‌ನ ಗೌಪ್ಯತೆ ಕಾಯಿದೆಯ ಸೆಕ್ಷನ್ 47ರ ಅಡಿಯಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆಯಬಹುದು. ಸ್ವಿಟ್ಜರ್ಲೆಂಡ್‌ನಲ್ಲಿ ಯಾವುದೇ ಅಪರಾಧ ಮಾಡದಿದ್ದರೆ ಬ್ಯಾಂಕ್ ಅವರ ಬಗ್ಗೆ ಯಾರೊಂದಿಗೂ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳುವುದಿಲ್ಲ. ಈ ಕಾರಣಕ್ಕೆ 'ಸ್ವಿಸ್‌ ಬ್ಯಾಂಕ್‌' ಹೆಸರು ಭಾರೀ ಚಾಲ್ತಿಗೆ ಬಂದಿತ್ತು. 

ಜನರೂ ಈ ಬ್ಯಾಂಕ್‌ಗಳಿಗೆ ಮುಗಿಬಿದ್ದಿದ್ದರು. ಆದರೆ, 2017 ರಲ್ಲಿ ವಿಶ್ವ ಸಮುದಾಯದ ಒತ್ತಡದ ನಂತರ ಸ್ವಿಟ್ಜರ್ಲೆಂಡ್‌ ಸರಕಾರ ಕಾನೂನನ್ನು ಸಡಿಲಗೊಳಿಸಿದ್ದಲ್ಲದೆ, ಮಾಹಿತಿಯನ್ನು ಹಂಚಿಕೊಳ್ಳಲು ಪ್ರಾರಂಭಿಸಿದ್ದರಿಂದ ಇನ್ನಾದರೂ ರಾಜಕಾರಣಿಗಳ ಗುಟ್ಟು  ಹೊರಬೀಳುತ್ತದೆ ಎನ್ನಬಹುದಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.