ನ ಟಿ ಶ್ರುತಿಗೆ ಇಬ್ಬರು ತಾಯಂದಿರು; ಇ ಬ್ಬರ ಜೊತೆನೂ ಭರ್ಜರಿ ಡ್ಯಾನ್ಸ್

 | 
Hs
ಸಿನಿಮಾ ಹಾಗೂ ರಾಜಕೀಯದಲ್ಲಿ ಸಕ್ರಿಯವಾಗಿರುವ ನಟಿ ಶ್ರುತಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯವಾಗಿದ್ದಾರೆ. ಆಗಾಗ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಪೋಸ್ಟ್​ ಮಾಡುವ ನಟಿ ಶ್ರುತಿ ತಮ್ಮ ತಂದೆ ಹಾಗೂ ತಾಯಂದಿರ ಅಪರೂಪದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ತಾಯಂದಿರ ಜೊತೆ ಹೆಜ್ಜೆ ಹಾಕಿದ ಫೋಟೋ ಕೂಡ ಹಂಚಿಕೊಂಡಿದ್ದಾರೆ.
ನಟಿ ಶ್ರುತಿ ಬಾಲ್ಯದಲ್ಲೇ ಬಣ್ಣದ ಲೋಕಕ್ಕೆ ಕಾಲಿಟ್ಟವರು. ಕಲಾರಾಧನೆ ಅವರ ರಕ್ತದಲ್ಲೇ ಇದೆ. ಏಕೆಂದರೆ ಶ್ರುತಿ ಅವರ ತಂದೆ ಹಾಗೂ ತಾಯಂದಿರುವ ರಂಗಭೂಮಿ ಹಿನ್ನಲೆವುಳ್ಳವರು. ನಾಟಕಗಳನ್ನು ಮಾಡುತ್ತಾ ಊರೂರು ಸುತ್ತುತ್ತಿದ್ದರು ಶ್ರುತಿ ಅವರ ಪೋಷಕರು. ಅಷ್ಟಕ್ಕೂ ನಟಿ ಶ್ರುತಿಗೆ ಇಬ್ಬರು ತಾಯಂದಿರು ಹೌದು ಯಾರು ಹೆತ್ತವಳೆಂದು ಸಹ ಗೊತ್ತಿಲ್ಲ.
ಶ್ರುತಿ ತಂದೆ ಅವರಿಗೆ ಇಬ್ಬರು ಮಡದಿಯರು. ತಂದೆ ಕೃಷ್ಣ ಅವರು ಅವಳಿ ಸಹೋದರಿಯರಾದ ರಾಧಾ ರುಕ್ಮಣಿ ಅವರನ್ನು ವಿವಾಹವಾಗಿದ್ದಾರೆ. ಈ ಹಿಂದೆ ನಟಿ ಶ್ರುತಿ ಅವರ ಅಮ್ಮಂದಿರು ಗುಬ್ಬಿ ಕಂಪನಿಯಲ್ಲಿ ಗಾಜಿನ ಮನೆ ಎಂಬ ನಾಟಕ ಮಾಡುತ್ತಿದ್ದರಂತೆ. ಅಲ್ಲಿಂದ ಪ್ರೀತಿಸಿ ಮದುವೆ ಆಗಿ ಒಟ್ಟಾಗಿ ಬದುಕು ಸಾಗಿಸುತ್ತಿದ್ದಾರೆ.
ಪ್ರತಿ ಅಮ್ಮಂದಿರ ದಿನ ಶ್ರುತಿ ಇಬ್ಬರ ಜೊತೆಗೂ ನೃತ್ಯಮಾಡುವ ರೂಢಿ ಹೊಂದಿದ್ದಾರಂತೆ.ಅದರಂತೆ ಅವರೊಂದಿಗೆ ನೃತ್ಯ ಮಾಡಿರುವ ಚಿತ್ರವನ್ನು ಕೂಡ ಶ್ರುತಿ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇತ್ತೀಚೆಗಷ್ಟೆ ಶ್ರುತಿ ಅವರ ಅಪ್ಪ-ಅಮ್ಮಂದಿರು 53ನೇ ವರ್ಷದ ವಿವಾಹವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಅದೇ ಖುಷಿಯಲ್ಲಿ ನಟಿ ಈ ಬಗ್ಗೆ ಹೇಳಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.