ಹೊಸ ಬಾಯ್ ಫ್ರೆಂಡ್ ಜೊತೆ ಕುಂಭಮೇಳದ ಗಂಗೆಯಲ್ಲಿ ಮುಳುಗಿ ಎದ್ದ ತಮನ್ನಾ ಭಾಟಿಯಾ
Feb 24, 2025, 09:59 IST
|

ಬಾಲಿವುಡ್‌ನ ಸೂಪರ್‌ಸ್ಟಾರ್‌ಗಳು ಪ್ರಯಾಗ್‌ರಾಜ್‌ನ ಮಹಾಕುಂಭ ಮೇಳಕ್ಕೆ ಆಗಮಿಸಿ ಪುಣ್ಯಸ್ನಾನ ಮಾಡುತ್ತಿದ್ದಾರೆ. ಈಗ ಈ ಲಿಸ್ಟ್‌ಗೆ ಬಾಲಿವುಡ್‌ನ ಮಿಲ್ಕಿ ಬ್ಯೂಟಿ ತಮನ್ನಾ ಕೂಡ ಸೇರಿದ್ದಾರೆ. ಮಹಾ ಕುಂಭಮೇಳಕ್ಕೆ ಆಗಮಿಸಿದ ತಮನ್ನಾ ಹಾಗೂ ಕನ್ನಡದ ನಟ ವಸಿಷ್ಟ ಸಿಂಹ ಒಟ್ಟಾಗಿ ಪುಣ್ಯ ಸ್ನಾನ ಮಾಡಿದ್ದಾರೆ.
ಅಷ್ಟಕ್ಕೂ ತಮನ್ನಾ ಹಾಗೂ ವಸಿಷ್ಟ ಸಿಂಹ ಒಟ್ಟಾಗಿ ಒಡೇಲಾ-2 ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮಹಾಕುಂಭ ಮೇಳದಲ್ಲಿ ಪುಣ್ಯಸ್ನಾನ ಮಾಡಿದ ಬಳಿಕ ಚಿತ್ರದ ಟೀಸರ್‌ಅನ್ನು ಪ್ರಯಾಗ್‌ರಾಜ್‌ನಲ್ಲಿಯೇ ಅನಾವರಣ ಮಾಡಿದ್ದಾರೆ. ಇವರೊಂದಿಗೆ ಕನ್ನಡದ ಹೆಸರಾಂತ ಮ್ಯೂಸಿಕ್ ಡೈರೆಕ್ಟರ್ ಅಜನೀಶ್ ಲೋಕನಾಥ್ ಕೂಡ ತಮ್ಮ ಕುಟುಂಬದೊಂದಿಗೆ ಪ್ರಯಾಜ್‌ರಾಜ್‌ಗೆ ಭೇಟಿ ನೀಡಿದ್ದರು. ಎಲ್ಲರೂ ಜೊತೆಯಲ್ಲಿರುವ ಫೋಟೋವನ್ನು ಕೂಡ ಅವರು ಹಂಚಿಕೊಂಡಿದ್ದಾರೆ.
ಅಷ್ಟಕ್ಕೂ ತಮ್ಮ ಡಾನ್ಸ್ ಹಾಗೂ ನಟನೆಯ ಕಾರಣಕ್ಕೆ ಪ್ರಸಿದ್ಧರಾಗಿರುವ 35 ವರ್ಷದ ತಮನ್ನಾ ಭಾಟಿಯಾ ಈಗ ಮತ್ತೊಮ್ಮೆ ಬೆಳ್ಳಿ ಪರದೆಯಲ್ಲಿ ಶಿವಭಕ್ತೆಯಾಗಿ ಕಾಣಿಸಿಕೊಳ್ಳುವ ಸಿದ್ದತೆಯಲ್ಲಿದ್ದಾರೆ. ಒಡೇಲಾ-2 ಸಿನಿಮಾದ ಬಗ್ಗೆ ಅವರಿಗೆ ಸಾಕಷ್ಟು ನಿರೀಕ್ಷೆ ಇದ್ದು, ಇದರಲ್ಲಿ ಶಿವನ ಭಕ್ತೆಯ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದ ನಿರ್ಮಾಕರು ಮಹಾಕುಂಭ ಮೇಳದಲ್ಲಿಯೇ ಇದರ ಭರ್ಜರಿ ಟೀಸರ್‌ಅನ್ನು ಕುಡ ಬಿಡುಗಡೆ ಮಾಡಿದ್ದಾರೆ.
ತಮನ್ನಾ ಭಾಟಿಯಾ ಅವರ ಮುಂಬರುವ ಚಿತ್ರ ಒಡೇಲಾ 2 ರ ಪೋಸ್ಟರ್ ಅಭಿಮಾನಿಗಳ ಗಮನ ಸೆಳೆಯಿತು. ಏಕೆಂದರೆ, ಈ ಚಿತ್ರದಲ್ಲಿ, ತಮನ್ನಾ ಭಾಟಿಯಾ ನಾಗ ಸಾಧುವಿನ ನೋಟದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕಾರಣಕ್ಕಾಗಿ, ಈ ಚಿತ್ರದ ಟೀಸರ್ ಅನ್ನು ಪ್ರಯಾಗರಾಜ್ ಮಹಾಕುಂಭ ಮೇಳದಲ್ಲಿ ನಾಗ ಸಾಧುಗಳ ನಡುವೆ ಬಿಡುಗಡೆ ಮಾಡಲಾಗಿದೆ. ಒಡೆಲಾ 2 ರ ಟೀಸರ್ ಬಿಡುಗಡೆಯಾದ ತಕ್ಷಣವೇ ಜನರು ಇದನ್ನು ಅಪಾರವಾಇ ಮೆಚ್ಚಿಕೊಂಡಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.