ಅವನಿಂದ ಏನೂ ಕಿಸಿಯೋಕೆ ಆಗಿಲ್ಲ, ಬ್ರೇಕಪ್ ಬಳಿಕ ತಮನ್ನಾ ಸ್ಪಷ್ಟತೆ

 | 
J
ಒಂದಿಷ್ಟು ಸೋಲು. ಇನ್ನೊಂದಿಷ್ಟು ಒಳ್ಳೆಯ ಸಿನಿಮಾಗಳಲ್ಲಿ ನಟಿಸಿ. ಬಿ ಟೌನ್ ಅಲ್ಲೂ ಮಿಂಚಿರುವ ತಮನ್ನಾ ಭಾಟಿಯಾ ಹಾಗೂ ವಿಜಯ್ ವರ್ಮಾ ಸುದೀರ್ಘ ದಿನಗಳ ಸಂಬಂಧಕ್ಕೆ ಬ್ರೇಕ್ ಬಿದ್ದಿದೆ ಅನ್ನೋದು ಇದೀಗ ಬಲವಾಗಿ ಕೇಳಿಬರುತ್ತಿದೆ. ಕಳದೆ ಕೆಲ ವರ್ಷಗಳಿಂದ ಈ ಜೋಡಿ ಪ್ರೀತಿಯಲ್ಲಿ ವಿಹರಿಸುತ್ತಿತ್ತು. ಅಧಿಕೃತವಾಗಿ ಈ ಜೋಡಿ ಎಲ್ಲೂ ಹೇಳದಿದ್ದರೂ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರು.
ಆದರೆ ಇದೀಗ ತಮನ್ನಾ ಹಾಗೂ  ವಿಜಯ್ ವರ್ಮಾ ನಡುವಿನ ಸಂಬಂಧ ಮುರಿದು ಬಿದ್ದಿದೆ ಅನ್ನೋದು ಬಾಲಿವುಡ್ ಮಾತ್ರವಲ್ಲ ಅಭಿಮಾನಿಗಳಲ್ಲು ಕೋಲಾಹಲ ಸೃಷ್ಟಿಸಿದೆ. ಬ್ರೇಕ್ ಅಪ್ ಸುದ್ದಿ ಬಳಿಕ ತಮ್ನನಾ ಹಾಗೂ ವಿಜಯ್ ವರ್ಮಾ ಯಾವುದೇ ಹೇಳಿಕೆ ನೀಡಿಲ್ಲ, ಪೋಸ್ಟ್ ಮಾಡಿಲ್ಲ. ಆದರೆ ಇದೀಗ ಮೊದಲ ಬಾರಿಗೆ ತಮನ್ನಾ ಭಾಟಿಯಾ ನೋವು ಹೊರಹಾಕಿದ್ದಾರೆ. ಪ್ರೀತಿ, ಸಂಬಂಧ ಕುರಿತು ಮಾತನಾಡಿದ್ದಾರೆ.
ಅಷ್ಟಕ್ಕೂ ವಿಜಯ್ ವರ್ಮಾ ಜೊತೆ ಬ್ರೇಕ್ ಅಪ್ ಆಗಿದೆ ಅನ್ನೋ ಮಾತುಗಳು ಎಲ್ಲೆಡೆ ಕೇಳಿಬರುತ್ತಿರುವ ನಡುವೆ ತಮನ್ನಾ ಭಾಟಿಯಾ ಆಡಿದ ಮಾತುಗಳು ಗಂಭೀರ ಸ್ವರೂಪ ಪಡೆದುಕೊಂಡಿದೆ. ಪ್ರೀತಿಗೆ ಮಿತಿಗಳಿರಬಾರದು. ಅನಿಯಮತಿ ಪ್ರೀತಿ ಸಿಗಬೇಕು. ಅದು ಪೋಷಕರಾಗಿರಬಹುದು, ಗೆಳೆಯರಾಗಿರಹದು ಮುದ್ದಿನ ಸಾಕು ಪ್ರಾಣಿಗಳಾಗಿರಬಹುದು. ಆದರೆ ಪ್ರೀತಿ ಯಾವತ್ತೂ ಯಾಂತ್ರಿಕವಾಗಬಾರದು ಎಂದು ತಮನ್ನಾ ಸೂಕ್ಷವಾಗಿ ಹೇಳಿದ್ದಾರೆ. ಇದರ ಜೊತೆಗೆ ಪ್ರೀತಿ ಒನ್ ಸೈಡೆಡ್ ಕುರಿತು ಮಾತನಾಡಿದ್ದಾರೆ.
ಬಹುತೇಕರು ಪ್ರೀತಿ ಎಂದರೇನು ಎಂದು ಸಂಬಂಧ ಎಂದರೇನು ಎಂದು ಇವೆರನ್ನು ಗೊಂದಲದಲ್ಲೇ ನೋಡುತ್ತಾರೆ. ಪ್ರೀತಿಯಲ್ಲಿ ಯಾವುದೇ ಷರತ್ತುಗಳು ಇರಬಾರದು. ಪ್ರೀತಿ ಯಾವತ್ತೂ ಷರತ್ತು ರಹಿತವಾಗಿರಬೇಕು, ಪ್ರೀತಿ ಅನಿಯಮಿತವಾಗಿರಬೇಕು. ಆದರೆ ಈ ರೀತಿಯ ಅನಿಯಮಿತ ಪ್ರೀತಿ ಯಾವತ್ತೂ ಒನ್ ಸೈಡೆಡ್ ಆಗಿರುತ್ತೆ. ಪ್ರೀತಿ ನಮ್ಮೊಳಗಿನ ಭಾವನೆ, ಸಂಬಂಧ.
ನಿಮಗೆ ಮತ್ತೊಬ್ಬರ ಬಳಿ ಇರುವ ಕಾಳಜಿ, ಪ್ರೀತಿ, ಸಂಬಂಧ ಎಲ್ಲವೂ ಪ್ರೀತಿಯೆ. ನಾನು ಯಾರನ್ನಾದರು ಪ್ರೀತಿಸಿದರೆ ಅವರನ್ನು ಬಂಧನದಲ್ಲಿಡಲು ನಾನು ಇಷ್ಟಪಡುವುದಿಲ್ಲ ಎಂದು ತಮನ್ನಾ ಹೇಳಿ ಬೇಸರ ವ್ಯಕ್ತಪಡಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.