ಕಾಟೇರ ಇರೋದ್ರಿಂದ ಸ್ವಲ್ಪ ಭಯ ಇದೇ, ತಮಿಳು ಸೂಪರ್ ಸ್ಟಾರ್ ಧನುಷ್ ಶಾ ಕಿಂಗ್ ಹೇಳಿಕೆ

 | 
ರಕ

 ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ ಅವರು ಪ್ರಮುಖ ಪಾತ್ರ ಮಾಡಿರುವ ತಮಿಳು ಸಿನಿಮಾ ಕ್ಯಾಪ್ಟನ್‌ ಮಿಲ್ಲರ್ ತೆರೆಗೆ  ಬಂದಿದೆ. ಧನುಷ್ ನಾಯಕತ್ವದ ಈ ಸಿನಿಮಾವು ತಮಿಳಿನ ಜೊತೆಗೆ ಕನ್ನಡ, ತೆಲುಗು ಭಾಷೆಗಳಲ್ಲೂ ತೆರೆಗೆ ಬಂದಿದ್ದು, ಕನ್ನಡಿಗರಿಗೆ ಈ ಸಿನಿಮಾದ ಮೇಲೆ ವಿಶೇಷ ಪ್ರೀತಿ ಬರಲು ಕಾರಣ, ಕ್ಯಾಪ್ಟನ್‌ ಮಿಲ್ಲರ್ ಸಿನಿಮಾದಲ್ಲಿ ಶಿವಣ್ಣ ಅವರು ನಟಿಸಿರುವುದು. 


ಪ್ಯಾನ್ ಇಂಡಿಯಾ ಚಿತ್ರವಾಗಿರೋ ಕ್ಯಾಪ್ಟನ್ ಮಿಲ್ಲರ್ ಕನ್ನಡದಲ್ಲೂ ತೆರೆಗೆ ಬಂದಿದೆ. ಜೈಲರ್ ಬಳಿಕ ಮತ್ತೊಮ್ಮೆ ಶಿವಣ್ಣ ಪ್ಯಾನ್ ಇಂಡಿಯಾ ಚಿತ್ರದಲ್ಲಿ ಮಿಂಚಿದ್ದು ಧನುಷ್ ಸೋದರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲಾರ್ಧದಲ್ಲಿ ಕೆಲವೇ ನಿಮಿಷ ಬಂದ್ರೂ ಶಿವಣ್ಣ ಮಿಂಚು ಹರಿಸ್ತಾರೆ.ಇನ್ನೂ ದ್ವಿತಿಯಾರ್ಧದಲ್ಲಿ ಬರುವ ಕರಿಘಟ್ಟದ ಬೆಟ್ಟದ ಮೇಲೆ ಈರಪ್ಪ ಸಾಂಗ್​ನಲ್ಲಿ ಶಿವಣ್ಣ ಮಸ್ತ್ ಆಗಿ ಸ್ಟೆಪ್ ಹಾಕಿದ್ದು ಪ್ರೇಕ್ಷಕರನ್ನೂ ಉತ್ಸಾಹದಿಂದ ಕುಣಿಯುವಂತೆ ಮಾಡ್ತಾರೆ. ಇನ್ನೂ, ಕ್ಲೈಮ್ಯಾಕ್ಸ್​​ ಫೈಟ್​​ನಲ್ಲಿ ಎಂಟ್ರಿ ಕೊಟ್ಟು ಚಿತ್ರಕ್ಕೆ ತಿರುವು ಕೊಡ್ತಾರೆ. ಒಟ್ಟಾರೆ ಶಿವಣ್ಣನ ಫ್ಯಾನ್ಸ್​ಗಂತೂ ಕ್ಯಾಪ್ಟನ್ ಮಿಲ್ಲರ್ ಮೋಸ ಮಾಡಲ್ಲ.


ಕ್ಯಾಪ್ಟನ್ ಮಿಲ್ಲರ್ ಚಿತ್ರ ಬಿಡುಗಡೆ ಮಾಡುವಾಗ ಇದ್ದ ಭಯವೆಂದರೆ ಕಾಟೇರ ಚಿತ್ರ ಹೌದು ಕರ್ನಾಟಕದ ತುಂಬ ಈಗ ಕಾಟೇರಾ ಕ್ರೇಜ್ ಇದೆ ಎಂದು ಧನುಷ್ ನುಡಿದಿದ್ದಾರೆ.
ಅಷ್ಟಕ್ಕೂ ಕ್ಯಾಪ್ಟನ್ ಮಿಲ್ಲರ್ ಸಿನಿಮಾದ ಕಥೆ ಏನು ಅಂತ ನೋಡಹೋದ್ರೆ,  ಅದೊಂದು ಬುಡಕಟ್ಟು ಜನಾಂಗ. ದೇವಾಲಯದ ಪಕ್ಕದಲ್ಲೇ ಇದ್ದರೂ ಸಹ ದೇವಸ್ತಾನದ ಒಳಗೆ ಅವರು ಕಾಲಿಡುವ ಹಾಗಿಲ್ಲ. ಈ ಬುಡಕಟ್ಟು ಜನಾಂಗದ ಯುವಕ ಬ್ರಿಟಿಷ್ ಸೈನ್ಯಕ್ಕೆ ಸೇರುತ್ತಾನೆ. ಬ್ರಿಟಿಷರು ಒಮ್ಮೆ 300ಕ್ಕೂ ಹೆಚ್ಚು ಸ್ವತಂತ್ರ ಹೋರಾಟಗಾರರ ಮಾರಣಹೋಮ ನಡೆಸುತ್ತಾರೆ. 


ಅದನ್ನ ಕಂಡು ಆ ಯುವಕ,  ತಾನು ಬ್ರಿಟಿಷ್ ಸೈನ್ಯದಲ್ಲಿ ಕೆಲಸ ಮಾಡ್ತಾ , ನಮ್ಮವರನ್ನೇ ಏಕೆ ಬಲಿ ತೆಗೆದುಕೊಳ್ಳಬೇಕು ಅಂತ  ತನ್ನ ತಪ್ಪಿನ ಅರಿವಾಗಿ, ಬ್ರಿಟಿಷ್ ಸೈನ್ಯಕ್ಕೆ ಗುಡ್ ಬೈ ಹೇಳ್ತಾನೆ. ಬಳಿಕ ಅವರ ವಿರುದ್ಧನೇ ತಿರುಗಿ ಬಿದ್ದು ಸ್ವತಂತ್ರ ಹೋರಾಟಕ್ಕೆ ಇಳೀತಾನೆ. ಮುಂದೇನು ಅನ್ನೋದೆ ಇಡೀ ಸಿನಿಮಾ ಕಥೆ.


ಪಿರಿಯಡ್ ಆಕ್ಷನ್ ಡ್ರಾಮಾ ಚಿತ್ರವಾಗಿರೋ ಕ್ಯಾಪ್ಟನ್ ಮಿಲ್ಲರ್ ಮೇಕಿಂಗ್ ಅದ್ಭುತವಾಗಿದೆ. ಆ್ಯಕ್ಷನ್ ದೃಶ್ಯಗಳು ಅಮೋಘವಾಗಿ ಮೂಡಿಬಂದಿವೆ. ಧನುಷ್ ಅಂತೂ ಅಸುರನ್, ಕರ್ಣನ್, ಬಳಿಕ ಮತ್ತೊಮ್ಮೆ ಅದ್ಭುತ ಪರ್ಫಾರ್ಮೆನ್ಸ್​ ನೀಡಿದ್ದಾರೆ. ಚಿತ್ರ ನೋಡುಗರಿಗೆ ಒಂದು ವಿಶಿಷ್ಟ ಅನುಭವ ನೀಡುತ್ತೆ.ಸ್ವತಂತ್ರ ಪೂರ್ವದ ಕಥೆಯನ್ನ ನಿರ್ದೇಶಕ ಅರುಣ್ ಮಹೇಶ್ವರನ್ ರೋಚಕವಾಗಿ ತೆರೆ ಮೇಲೆ ತಂದಿದ್ದು ಚಿತ್ರಕ್ಕೆ ಬಿಗ್ ಓಪನಿಂಗ್ ಸಿಕ್ಕಿದೆ. ತಮಿಳಿನ ಜೊತೆಗೆ ಅನ್ಯಭಾಷೆಗಳಲ್ಲೂ ಕ್ಯಾಪ್ಟನ್ ಮಿಲ್ಲರ್​ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಕ್ಯಾಪ್ಟನ್ ಮಿಲ್ಲರ್ ಕನ್ನಡ ವರ್ಷನ್ ಕೂಡ ಒಳ್ಳೆ ಓಪನಿಂಗ್ ಪಡೆದಿದ್ದು ಶಿವಣ್ಣನ ಫ್ಯಾನ್ಸ್ ಕೂಡ ಸಿನಿಮಾ ನೋಡಿ ಖುಷಿ ಪಟ್ಟಿದ್ದಾರೆ.

( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.