ರವಿಕೆ ಹಾಕದೆ ಬಂದ ತಮಿಳು ನ ಟಿ; ಸೀರೆ ಜಾರಿ ಬಿದ್ದರೆ ಕೆಲವರಿಗೆ ಅದೇ ಆನಂದ ಎಂದು ಗುಡುಗಿದ ಕಲಾವಿದೆ

 | 
Juj

ಮಲಯಾಳಂ ನಟಿ ಚೈತ್ರಾ ಪ್ರವೀಣ್‌ ಇತ್ತೀಚೆಗೆ ಸಿನಿಮಾ ಕಾರ್ಯಕ್ರಮವೊಂದರಲ್ಲಿ ಕಪ್ಪು ಸೀರೆ ಧರಿಸಿ ಕಾಣಿಸಿಕೊಂಡಿದ್ದರು. ಆದರೆ, ಅವರು ಧರಿಸಿದ್ದ ಸೀರೆಯ ಶೈಲಿಯೇ ಈಗ ವಿವಾದಕ್ಕೆ ಕಾರಣವಾಗಿದೆ.ನಟಿ ಚೈತ್ರಾ ಪ್ರವೀಣ್‌ ಸೋಶಿಯಲ್‌ ಮೀಡಿಯಾ ಟ್ರೋಲ್‌ಗೆ ಗುರಿಯಾಗಿದ್ದಾರೆ. 

ಮಲಯಾಳಂ ಚಿತ್ರಗಳಲ್ಲಿ ನಟಿಸಿರುವ ಚೈತ್ರಾ ಪ್ರವೀಣ್‌ ತಮ್ಮ ಬೋಲ್ಡ್‌ ಪಾತ್ರಗಳಿಂದ ಕೇರಳದ ಪಡ್ಡೆ ಹುಡುಗರ ಪಾಲಿಗೆ ಹಾಟ್‌ ಫೇವರಿಟ್‌ ಆಗಿದ್ದಾರೆ. ಸೋಶಿಯಲ್‌ ಮೀಡಿಯಾಗಳಲ್ಲಿ ತಮ್ಮ ಬೋಲ್ಡ್‌ ಫೋಟೋಗಳನ್ನು ಹಂಚಿಕೊಳ್ಳುವ ಚೈತ್ರಾ ಪ್ರವೀಣ್‌ ತಮ್ಮ ಹೊಸ ಸಿನಿಮಾ ಎಲ್‌ಎಲ್‌ಬಿ: ಲೈಫ್‌ ಲೈನ್‌ ಆಫ್‌ ಬ್ಯಾಚುಲರ್ಸ್‌ ಬಿಡುಗಡೆಯ ಖುಷಿಯಲ್ಲಿದ್ದಾರೆ. 

ಆದರೆ, ಇತ್ತೀಚೆಗೆ ಅವರು ಇದೇ ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ಧರಿಸಿದ್ದ ಸೀರೆಯ ಕುರಿತೇ ಈಗ ವಿವಾದ ಶುರುವಾಗಿದೆ. ಹಾಗಂತ ಅವರೇನೂ ಬೋಲ್ಡ್‌ ಬಟ್ಟೆ ಧರಿಸಿರಲಿಲ್ಲ. ಕಪ್ಪು ಬಣ್ಣದ ಸೀರೆಗೆ ಚರ್ಮದ ಬಣ್ಣದ ರವಿಕೆ ತೊಟ್ಟಿದ್ದರು. 

ದೂರದಿಂದ ನೋಡಿದಾಗ ಅವರು ರವಿಕೆಯೇ ಧರಿಸಿಲ್ಲವೇನೋ ಎನ್ನುವಂತೆ ಕಾಣುತ್ತಿತ್ತು. ಕೆಲವರು ಚೈತ್ರಾ ಪ್ರವೀಣ್‌ ಅವರ ಲುಕ್‌ ಅನ್ನು ಹೊಗಳಿದ್ದು ಮಾತ್ರವಲ್ಲದೆ ಸಖತ್‌ ಹಾಟ್‌ ಆಗಿ ಕಾಣುತ್ತಿದ್ದೀರಿ ಎಂದಿದ್ದರೆ, ಇನ್ನೂ ಕೆಲವರು ಅವರ ಬಟ್ಟೆಯನ್ನು ಟೀಕೆ ಮಾಡಿದ್ದಾರೆ. 

ಆಕೆ ಧರಿಸಿರುವ ಸೀರೆ ಪ್ರಚೋದನಕಾರಿಯಾಗಿದೆ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಹೀಗೆ ಬರುವುದು ಸರಿಯಲ್ಲ. ಎಂದು ಹೇಳಿದ್ದಾರೆ. ತಮ್ಮ ವಿರುದ್ಧ ಸಾಕಷ್ಟು ಟ್ರೋಲ್‌ಗಳು ಬಂದ ಬೆನ್ನಲ್ಲಿಯೇ  ಚೈತ್ರಾ ಪ್ರವೀಣ್‌ ಈ ಬಗ್ಗೆ ಮಾತನಾಡಿದ್ದಾರೆ. ನಾನು ಎಲ್ಲರಿಗೂ ಒಂದು ಸ್ಪಷ್ಟನೆ ನೀಡಲು ಬಯಸುತ್ತೇನೆ. ಎಂದಿಗೂ ವೈರಲ್‌ ಆಗುವ ಉದ್ದೇಶ ನನಗಿಲ್ಲ.  

ಇದು ನನ್ನ ತಾಯಿ ಕೊಟ್ಟ ಸೀರೆ. ಕಪ್ಪು ಬಣ್ಣದ ಈ ಸೀರೆಯಲ್ಲಿ ನಾನು ಚೆನ್ನಾಗಿಯೇ ಕಾಣುತ್ತೇನೆ ಎಂದು ನನ್ನ ತಾಯಿ ಹೊಗಳಿದ್ದಲ್ಲದೆ, ಈ ರೀತಿಯ ಸೀರೆಗಳು ನನಗೆ ಸರಿಹೊಂದುತ್ತದೆ ಎಂದಿದ್ದರು. ಆದರೆ, ಕಾರ್ಯಕ್ರಮದಲ್ಲಿ ಡಾನ್ಸ್‌ ಮಾಡುವ ಸಮಯ ಬಂದಾಗ ಸೀರೆ ಜಾರಿಹೋಗಬಹುದು, ಇದರಿಂದ ನನ್ನ ಹೊಕ್ಕಳು, ಸೊಂಟ ಕಾಣಬಹುದು ಎನ್ನುವ ಅಪಾಯವೂ ನನಗೆ ಗೊತ್ತಿತ್ತು. ಇದಕ್ಕೆ ನಾನೇನೂ ಮಾಡಲು ಸಾಧ್ಯವಿರಲಿಲ್ಲ. ಎಂದು ಸ್ಪಷ್ಟತೆ ನೀಡಿದ್ದಾರೆ.