ಕೊನೆಗೂ ಸಿಹಿಸುದ್ದಿ ಕೊಟ್ಟ ತನಿಷಾ ಹಾಗೂ ವರ್ತೂರು, ಇದೇ ತಿಂಗಳು ಕರುನಾಡಿನ ಜನತೆಗೆ ಬಾಡೂಟ

 | 
ಕಿ

ಹಳ್ಳಿಕಾರ್ ವರ್ತೂರು ಸಂತೋಷ್ ಅವರ ಮನೆಗೆ ಬಿಗ್​ಬಾಸ್ ಸ್ಪರ್ಧಿಗಳೆಲ್ಲ ಭೇಟಿ ಕೊಟ್ಟ ಘಟನೆ ನಡೆದಿದೆ. ಬಿಗ್​ಬಾಸ್ 10ರ ಸ್ಪರ್ಧಿಗಳು ವರ್ತೂರು ಸಂತೋಷ್ ಅವರ ಮನೆಯಲ್ಲಿ ಒಟ್ಟಾದರು. ಎಲ್ಲರೂ ಜೊತೆಯಾಗಿ ಸೇರಿಕೊಂಡಿದ್ದು ಫೋಟೊ, ವಿಡಿಯೋ ವೈರಲ್ ಆಗಿವೆ.ನಟಿ ತನಿಷಾ ಕುಪ್ಪಂಡ ಅವರು ಗೆಳೆಯ ವರ್ತೂರು ಸಂತೋಷ್ ಅವರ ಮನೆಗೆ ಹೋಗಿದ್ದರು. 

ವರ್ತೂರು ಸಂತೋಷ್ ಅವರಿಗೆ ತುಕಾಲಿ ಸಂತೋಷ್ ಹಾಗೂ ತನಿಷಾ ಜೊತೆ ಹೆಚ್ಚು ಸಲುಗೆ ಇದೆ. ಅವರ ನಡುವೆ ಒಳ್ಳೆಯ ಬಾಂಡಿಂಗ್ ಕೂಡಾ ಇದೆ.ತುಕಾಲಿ ಸಂತೋಷ್ ಅವರಿಗೆ ವರ್ತೂರು ಸಂತೋಷ್ ಸಂತು-ಪಂತು ಡಾಲರ್ ಕೊಟ್ಟರೆ ತನಿಷಾ ಕುಪ್ಪಂಡ ಅವರಿಗೆ ಕೂಡಾ ಗಿಫ್ಟ್ ಕೊಟ್ಟರು. ಈ ಗಿಫ್ಟ್ ಏನಾಗಿರಬಹುದು ಎಂದು ಎಲ್ಲರೂ ಕುತೂಹಲ ವ್ಯಕ್ತಪಡಿಸಿದ್ದರು.

ತನಿಷಾ ಅವರಿಗೆ ವರ್ತೂರು ಸಂತೋಷ್ ಕೊಟ್ಟಿದ್ದು ಮೇಕಪ್ ಸೆಟ್. ತನಿಷಾ ಅವರಿಗೆ ಮೇಕಪ್ ಸೆಟ್ ಎಂದರೆ ತುಂಬಾ ಇಷ್ಟ. ಅವರು ಬಿಗ್​ಬಾಸ್ ಮನೆಯಲ್ಲಿದ್ದಾಗಲೇ ಅವರ ಮೇಕಪ್ ಕಿಟ್ ಕುರಿತ ಪ್ರೀತಿ ಎಲ್ಲರೂ ನೋಡಿದ್ದರು.ಈಗ ತನಿಷಾಗೆ ವರ್ತೂರು ಸಂತೋಷ್ ಅವರು ಸುಂದರವಾದ ಮೇಕಪ್ ಕಿಟ್ ಗಿಫ್ಟ್ ಮಾಡಿದ್ದಾರೆ. ಇದನ್ನು ತಿಳಿದ ಫ್ಯಾನ್ಸ್ ವರ್ತೂರು ಸಂತೋಷ್ ಕ್ರಿಯೇಟಿವ್. ಎಷ್ಟು ಚೆನ್ನಾಗಿ ಯೋಚಿಸಿ ಸುಂದರವಾದ ಗಿಫ್ಟ್ ಕೊಟ್ಟಿದ್ದಾರೆ ಎಂದು ಹೊಗಳಿದ್ದಾರೆ. 

ಅಂತೂ ವರ್ತೂರು ಸಂತೋಷ್ ಅವರ ಗಿಫ್ಟ್ ತನಿಷಾಗೆ ಇಷ್ಟ ಆಗಿರುತ್ತೆ ಎನ್ನುವುದಂತೂ ಗ್ಯಾರೆಂಟಿ. ಯಾಕೆಂದರೆ ನಟಿಗೆ ಮೇಕಪ್ ಕುರಿತು ಹೆಚ್ಚಿನ ಆಸಕ್ತಿ ಇದೆ.ವರ್ತೂರು ಸಂತೋಷ್- ತನಿಷಾ ಅವರು ಲವರ್ಸ್ ಎನ್ನುವಂತೆಯೇ ಸುದ್ದಿ ಹೋಗಿತ್ತು. ಆದರೆ ಅವರ ಲವರ್ಸ್ ಅಲ್ಲ, ಬದಲಾಗಿ ಅವರ ನಡುವೆ ಫ್ರೆಂಡ್​ಶಿಪ್ ಇದೆ. ಅವರ ನೇಚರ್ ಪರಸ್ಪರ ಸಿಂಕ್ ಆಗುತ್ತದೆ ಎನ್ನಲಾಗುತ್ತಿದೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.