5 ಕೋಟಿ ಬೆಲೆಯ Range Rover ಕಾರು ಖರೀದಿ ಮಾಡಿದ ತನಿಷಾ; ಎಲ್ಲಿಂದ ಬಂತು ಇಷ್ಟು ದುಡ್ಡು

 | 
Jj
 ಬಿಗ್ ಬಾಸ್ ಮೂಲಕ ಚಿರಪರಿತರಾದ ನಟಿ ತನಿಷಾ ಕುಪ್ಪಂಡ ಅವರು ಕೆಲವೇ ಕೆಲವು ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸಿದ್ದರೂ ಕೂಡ, ಸುದ್ದಿಯಾಗಿದ್ದು ಹೆಚ್ಚು. ಕನ್ನಡ ಬಿಗ್ ಬಾಸ್ ಸೀಸನ್ 10ರಲ್ಲಿ ಭಾಗವಹಿಸಿದ ತನಿಷಾ ಅವರು ಬೆಂಕಿ ಅಂತಲೇ ಜನಪ್ರಿಯತೆ ಗಳಿಸಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ನೇರವಾಗಿ ಮಾತನಾಡುತ್ತಾ, ಜಗಳ ಮಾಡುತ್ತಾ ಎಲ್ಲರಿಗೂ ಚಿರಪರಿಚಿತರಾದರು. 
ಬಿಗ್ ಬಾಸ್ ಮನೆಗೆ ಹೋಗುವ ಮುನ್ನವೇ ತಮ್ಮದೇ ಬಿಸಿನೆಸ್ ಹೊಂದಿದ್ದ ತನಿಷಾ ಅವರು ಇದೀಗ ಮತ್ತೊಂದು ಬಿಸಿನೆಸ್ ಶುರು ಮಾಡಿದ್ದು, ಸಕ್ಸಸ್ ಫುಲ್ ಲೈಫ್ ಲೀಡ್ ಮಾಡುತ್ತಿದ್ದಾರೆ.ಈ ಸಕ್ಸಸ್ ಎಂಜಾಯ್ ಮಾಡುತ್ತಿರುವ ತನಿಷಾ ಕುಪ್ಪಂಡ ಅವರು ತಮ್ಮ ಕನಸೊಂದನ್ನು ನನಸು ಮಾಡಿಕೊಂಡು ಸಂತಸ ಪಡುತ್ತಿದ್ದಾರೆ. 
ಇಂದು ತನಿಷಾ ಅವರು ಶೋ ರೂಂಗೆ ಹೋಗಿ ಲ್ಯಾಂಡ್ ರೋವರ್ ಡಿಸ್ಕವರಿ ಕಾರನ್ನು ಖರೀದಿ ಮಾಡಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಫೋಟೊ ಅಪ್ ಲೋಡ್ ಮಾಡಿದ್ದಾರೆ. ಈ ಹೊಸ ಕಾರಿನ ಬೆಲೆ ಬರೋಬ್ಬರು 1 ಕೋಟಿ ರೂಪಾಯಿ. ಬಿಸಿನೆಸ್ ಜೊತೆಗೆ ನಟಿಸುತ್ತಾ ತಮ್ಮ ಆರ್ಥಿಕ ಸ್ಥಿತಿಯನ್ನು ಉತ್ತಮ ಸ್ಥಾನದಲ್ಲಿಟ್ಟುಕೊಂಡಿರುವ ನಟಿ ತನಿಷಾ ಅವರು ಇಂದು ಲ್ಯಾಂಡ್ ರೋವರ್ ಕಾರನ್ನು ಖರೀದಿ ಮಾಡಿ ಖುಷಿ ಪಟ್ಟಿದ್ದಾರೆ.
 ಕನಸು ನನಸಾದ ಸಮಯ, ಸಂತೋಷ ಹೃದಯ ತುಂಬಿದ ಸಮಯ, ಮನಸು ಕುಣಿದಾಡಿದ ಸಮಯ, ನಿಮ್ಮೆಲ್ಲರ ಪ್ರೀತಿ ಆಶೀರ್ವಾದಕ್ಕೆ ಈ ಜೀವ ವಿಸ್ಮಯ ಎಂದು ಬರೆದುಕೊಂಡಿದ್ದಾರೆ.ದಂಡುಪಾಳ್ಯ ಸಿನಿಮಾ ಮೂಲಕ ಬೆಳ್ಳಿತೆರೆಗೆ ಎಂಟ್ರಿಕೊಟ್ಟ ತನಿಷಾ ಕುಪ್ಪಂಡ ಅವರು ಬಳಿಕ ಬಾಡಿಗಾರ್ಡ್, ಉಂಡೆನಾಮ, ಪೆಂಟಗನ್ ಹಾಗೂ ಪೆನ್ ಡ್ರೈವ್ ಸಿನಿಮಾಗಳ ಮೂಲಕ ಗಮನ ಸೆಳೆದಿದ್ದಾರೆ.
 ಪೆಂಟಗನ್ ಸಿನಿಮಾದಲ್ಲಿ ಬೋಲ್ಡ್ ಆಗಿ ನಟಿಸಿ ತನಿಷಾ ಕುಪ್ಪಂಡ ಅವರು ಸುದ್ದಿಯಾಗಿದ್ದರು. ಇನ್ನು ಮಂಗಳ ಗೌರಿ ಮದುವೆ, ಇಂತಿ ನಿಮ್ಮ ಆಶಾ, ಸತ್ಯ ಶಿವಂ ಸುಂದರಂ, ವಾರಸು ದಾರ, ಸರಯೂ, ಸಾಕ್ಷಿ, ಪ್ರೀತಿ ಎಂದರೇನು ಧಾರಾವಾಹಿಗಳಲ್ಲಿ ನಟಿಸಿ ಜನರ ಮನ ಗೆದ್ದಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.