ಹೊಸ ಸೀರೆ ಉಟ್ಟು ವರ್ತೂರ್ ಸಂತುಗೆ ಟಾಂಗ್ ಕೊಟ್ಟ ತನಿಷಾ
Mar 10, 2025, 13:00 IST
|

ಬಿಗ್‌ಬಾಸ್ ಖ್ಯಾತಿಯ ನಟಿ ತನಿಷಾ ಕುಪ್ಪಂಡ ಮತ್ತೆ ಸುದ್ದಿಯಲ್ಲಿದ್ದಾರೆ. ಕಳೆದ ಸೀಸನ್‌ನಲ್ಲಿ ಬಿಗ್ ಬಾಸ್ ಸ್ಪರ್ಧಿಯಾಗಿದ್ದ ತನಿಷಾ ಈಗ ಹೆಚ್ಚು ಜನಪ್ರಿಯತೆ ಪಡೆದಿದ್ದಾರೆ. ಸಹ ಸ್ಪರ್ಧಿಯಾಗಿದ್ದ ವರ್ತೂರು ಸಂತೋಷ್ ಅವರೊಂದಿಗೆ ತನಿಷಾ ತುಂಬಾ ಕ್ಲೋಸ್ ಆಗಿ ಕಾಣಿಸಿಕೊಂಡಿದ್ದರಿಂದ ಇವರಿಬ್ಬರ ನಡುವೆ ಲವ್ ಇದೆ ಎಂದು ವೀಕ್ಷಕರು ಅಭಿಪ್ರಾಯಪಟ್ಟಿದ್ದರು.
ಬಳಿಕ ಇವರಿಬ್ಬರೂ ಒಟ್ಟಿಗೆ ಹಲವು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡರೂ ಲವ್ ವದಂತಿಗೆ ಬ್ರೇಕ್ ಹಾಕಿದ್ದರು. ಈಗ ತನಿಷಾ ಅವರು ಸ್ಪೆಷಲ್ ವಿಡಿಯೋ ಹಂಚಿಕೊಂಡು ನಾನು ನಿನ್ನ ಪ್ರೀತಿಸುವೆ ಎಂದು ಹೇಳುವ ಮೂಲಕ ಎಲ್ಲರಿಗೂ ಶಾಕ್ ಕೊಟ್ಟಿದ್ದಾರೆ.ಹೌದು ಇನ್‌ಸ್ಟಾಗ್ರಾಂನಲ್ಲಿ ರೀಲ್ ಹಂಚಿಕೊಂಡಿರುವ ತನಿಷಾ ಅವರು ನನ್ನ ತರ ಹುಡುಗಿ ಸಿಗೋಗೆ ಪುಣ್ಯ ಮಾಡಿರಬೇಕು ಎಂದಿದ್ದಾರೆ.
https://www.instagram.com/reel/DG7RSslIZ_p/?igsh=MTRvcnh3cmUzbjBydw==
ಯಾಕೆ ಅಂದ್ರೆ ಕೋಪಿಸಿದರೂ, ನಿಂದಿಸಿದರೂ ನಾನು ನಿನ್ನ ಪ್ರೀತಿಸುವೆ ಎನ್ನುವ ಹಾಡಿಗೆ ಧ್ವನಿಗೂಡಿಸಿ ಹಾರ್ಟ್ ಸಿಂಬಲ್ ತೋರಿಸಿದ್ದಾರೆ ನಟಿ. ರಮೇಶ್ ಅರವಿಂದ್ ನಟನೆಯ ಶ್ರೀಗಂಧ ಸಿನಿಮಾದ ಕಾಯಿಸುವ ಹುಡುಗಿಯರ ಪ್ರೀತಿಸಬಾರದು ಹಾಡಿಗೆ ತನಿಷಾ ರೀಲ್ಸ್ ಮಾಡಿದ್ದಾರೆ. ಇದರಲ್ಲಿ ಕೋಪಿಸಿದರೂ, ನಿಂದಿಸಿದರೂ ನಾನು ನಿನ್ನ ಪ್ರೀತಿಸುವೆ ಹಾಡಿಗೆ ತನಿಷಾ ಲಿಪ್ ಸಿಂಕ್ ಮಾಡಿದ್ದಾರೆ.
ಈ ವಿಡಿಯೋ ನೋಡಿದ ಅವರ ಅಭಿಮಾನಿಗಳು ಈ ಸಾಲುಗಳನ್ನು ಹೇಳಿದ್ದು ವರ್ತೂರು ಸಂತೋಷ್ ಅವರಿಗಾ? ಎಂದು ಕಾಲೆಳೆದಿದ್ದಾರೆ. ಅಲ್ಲದೆ ತನಿಷಾ ಅವರು ಈ ವಿಡಿಯೋ ಮೂಲಕ ತಮ್ಮ ಲವ್ ಪ್ರಪೋಸ್ ಮಾಡಿದ್ರಾ? ಎಂದೂ ಮಾತನಾಡಿಕೊಳ್ಳುತ್ತಿದ್ದಾರೆ. ನನ್ನಂತ ಹುಡುಗಿ ಸಿಗೋಕೆ ಪುಣ್ಯ ಮಾಡಿರಬೇಕು ಎಂದು ಹೇಳುವ ಮೂಲಕ ತನಿಷಾ ಕುತೂಹಲ ಮೂಡಿಸಿದ್ದಾರೆ. ಈ ರೀಲ್ಸ್ ಜೊತೆಗೆ ತನಿಷಾ ಹೀಗೆ, ನನ್ನನ್ನ ಪ್ರೀತಿ ಮಾಡೋರು ಕೇಳಿದ್ರು ಅಂತ ನಾನು ತುಂಬಾ ಪ್ರೀತಿಯಿಂದ ಈ ರೀಲ್ ಮಾಡಿದೀನಿ, ಏನಂತೀರ? ಹ್ಯಾಪಿ ಇಂಟರ್ನ್ಯಾಷನಲ್ ವುಮೆನ್ಸ್ ಡೇ ಎಂದು ವಿಶ್ ಕೂಡ ಮಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.