ರೋಡ್ ಶೋ ಸಂಧರ್ಭದಲ್ಲಿ ವರ್ತೂರ್ ಸಂತು ಮೈಮೇಲೆ ಬಿದ್ದ ತನಿಷಾ; ಶೇಖ್ ಆದ ಸಂತು

 | 
Gh
ಬಿಗ್ಬಾಸ್ 11 ರ ಸೀಸನ್ ಶುರು ಆದ್ರೂ 10 ರ ಹವಾ ಮುಗಿದಿಲ್ಲ.ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10ರ  ಸ್ಪರ್ಧಿಯಾಗಿದ್ದ ತನಿಷಾ ಕುಪ್ಪಂಡ ಹಾಗೂ ವರ್ತೂರು ಸಂತೋಷ್​ ಅವರು ಎಷ್ಟು ಕ್ಲೋಸ್​ ಫ್ರೆಂಡ್ ಅಂತ ಎಲ್ಲರಿಗೂ ಗೊತ್ತಿದೆ. ಬಿಗ್​ಬಾಸ್​ ಸೀಸನ್ 10ರ ಬಳಿಕ ಸಿಕ್ಕಾಪಟ್ಟೆ ಸುದ್ದಿಯಲ್ಲಿರೋ ಜೋಡಿ ಇದು.
ಬಿಗ್​ಬಾಸ್​ ಮುಗಿದ ಬಳಿಕ ಸಾಕಷ್ಟು ಬಾರಿ ತನಿಷಾ ಕುಪ್ಪಂಡ ಹಾಗೂ ವರ್ತೂರು ಸಂತೋಷ್ ಅವರು ಭೇಟಿಯಾಗಿದ್ದಾರೆ. ಆಗಾಗ ತನಿಷಾ ಕುಪ್ಪಂಡ ಹಾಗೂ ವರ್ತೂರು ಸಂತೋಷ್ ಭೇಟಿಯಾಗುತ್ತಲೇ ಇರುತ್ತಾರೆ. ಆದರೆ ಇದರ ಮಧ್ಯೆ ನಿನ್ನೆ ನಡೆದ GKVK ಕಾರ್ಯಕ್ರಮದಲ್ಲಿ ವರ್ತೂರು ಸಂತೋಷ್, ತನಿಷಾ ಕುಪ್ಪಂಡ, ತುಕಾಲಿ ಸಂತೋಷ್ ಹಾಗೂ ಮಾನಸ ಬಂದಿದ್ದರು.
ಜಿಕೆವಿಕೆ ಕೃಷಿ ಮೇಳದಲ್ಲಿ ಭಾಗಿಯಾಗಿದ್ದ ತನಿಷಾ ಹಾಗೂ ವರ್ತೂರು ಸಂತೋಷ್​ ಅವರು ಒಂದೇ ಎತ್ತಿನಗಾಡಿ ಮೇಲೆ ಹೋಗುತ್ತಿದ್ದರು. ಇದೇ ಎತ್ತಿನಗಾಡಿ ಮೇಲೆ ಹೋಗುತ್ತಿದ್ದಾಗ ನೂಕುನುಗ್ಗಲು ಉಂಟಾಗಿದೆ. ಆಗ ಎತ್ತಿನಗಾಡಿ ಮೇಲೆ ನಿಂತುಕೊಂಡಿದ್ದವರ ಬ್ಯಾಲೆನ್ಸ್ ತಪ್ಪಿದೆ. ಆಗ ತನಿಷಾ ಕುಪ್ಪಂಡ ಅವರು ಏಕಾಏಕಿ ವರ್ತೂರು ಸಂತೋಷ್ ಅವರ ಮೇಲೆ ಬಿದ್ದಿದ್ದಾರೆ.
 ಸದ್ಯ ತನಿಷಾ ಕುಪ್ಪಂಡ ಏನೂ ಆಗಿಲ್ಲ. ಆದರೆ ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಇನ್ನು ಬಿಗ್ ಬಾಸ್ ಗೂ ಮುಂಚೆ ಹೆಚ್ಚಿನ ಜನಕ್ಕೆ ಪರಿಚಿತರಾಗಿಲ್ಲದ ತನಿಷಾ, ಬಿಗ್ ಬಾಸ್ ಮೂಲಕ ರಾಜ್ಯದ ಜನರಿಗೆ ಹೆಚ್ಚು ಪರಿಚಿತರಾದರು.
ತನಿಷಾ ಅವರಿಗಾಗಿ ಬೆಂಕಿ ಬಂತು ಬೆಂಕಿ ಎನ್ನುವ ಹಾಡನ್ನು ಸಹ ಬಿಡುಗಡೆ ಮಾಡಲಾಗಿತ್ತು. ಬಿಗ್ ಬಾಸ್ ಮೂಲಕ ಅಪಾರ ಅಭಿಮಾನಿಗಳನ್ನು ಪಡೆದಿದ್ದರು ತನಿಷಾ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.