'ವರ್ತೂರು ಸಂತು ಜೊತೆ ಆದಷ್ಟು ಬೇಗ ಮದುವೆ ಮಾತುಕತೆ ಎಂದ ತನಿಷಾ' ಮುಂದಿನ ತಿಂಗಳು ನಿಶ್ಚಿತಾರ್ಥ

 | 
ಹ್

ಬಿಗ್‌ಬಾಸ್ ಮನೆಯಲ್ಲಿ ಬೆಂಕಿ ಎಂದೇ ಎಲ್ಲರಿಂದಲೂ ಹೇಳಿಸಿಕೊಳ್ಳುತ್ತಿದ್ದವರು ತನಿಷಾ ಕುಪ್ಪಂಡ. ಸ್ನೇಹಿತರಿಗೆ ಬೆಚ್ಚನೆಯ ಭಾವ ನೀಡುತ್ತ, ಎದುರಾಳಿಯಾಗಿ ನಿಂತರೆ ಸುಡುವ ಕೋಪವನ್ನೂ ತೋರುತ್ತಿದ್ದ ಅವರಿಗೆ ಈ ಬಿರುದು ಒಪ್ಪುವಂಥದ್ದೇ ಆಗಿದೆ. ನಡುವಲ್ಲಿ ಕಾಲುನೋವಾಗಿ ವಾಪಸ್ ಬರುತ್ತಾರೋ ಇಲ್ಲವೋ ಎಂಬ ಹಂತ ತಲುಪಿದರೂ, ಬಿಡದೇ ವಾಪಸ್ ಬಂದು ಸಾಕಷ್ಟು ಆಟವಾಡಿ ನೂರಕ್ಕೂ ಅಧಿಕ ದಿನ ಉಳಿದಿಕೊಂಡಿದ್ದ ತನಿಷಾ ಕುಪ್ಪಂಡ ಕಳೆದ ವಾರ ಮಿಡ್‌ವೀಕ್ ಎಲಿಮಿನೇಷನ್‌ನಲ್ಲಿ ಮನೆಯಿಂದ ಹೊರಗೆ ಬಂದಿದ್ದರು. 

ಇನ್ನಷ್ಟು ದಿನ ಉಳಿದುಕೊಳ್ಳುತ್ತೇನೆ ಎಂಬ ವಿಶ್ವಾಸದಲ್ಲಿಯೇ ಇದ್ದ ಅವರಿಗೆ ಎಲಿಮಿನೇಷನ್ ಶಾಕ್ ಕೊಟ್ಟಿತ್ತು. ಅದಕ್ಕಾಗಿ ಹೋಗುವಾಗ ಕಣ್ಣೀರು ಹಾಕುತ್ತ ಮನೆಯ ಸದಸ್ಯರಿಗೂ ಜರಿದು, ‘ಬಿಗ್‌ಬಾಸ್ ಯಾಕಿಷ್ಟುಕೆಟ್ಟದಾಗಿ ಕಳಿಸಿಕೊಡ್ತೀರಾ?’ ಎಂದು ಕೇಳುತ್ತಲೇ ಹೊರಗೆ ಹೋದರು. ಆದರೆ ಈ ವಾರದ ವೀಕೆಂಡ್ ಎಪಿಸೋಡ್‌ನಲ್ಲಿ ಮತ್ತೆ ವೇದಿಕೆಗೆ ಬಂದು ಕಿಚ್ಚನ ಜೊತೆಗೆ ಬಿಚ್ಚು ಮನದಿಂದ ಮಾತುಗಳನ್ನಾಡಿದ ತನಿಷಾ ಕುಪ್ಪಂಡ ಮನೆಯಿಂದ ಹೊರಗೆ ಬಂದಕೂಡಲೇ ಕೆಲವೆಡೆ  ಸಂದರ್ಶನ ನೀಡಿದ್ದಾರೆ. 

ಮೊದಲಿನಿಂದ ನನಗೆ ಒಟ್ಟಿಗೆ ಇದ್ದಿದ್ದರಿಂದ ಸಂಗೀತಾ, ಕಾರ್ತಿಕ್, ನನ್ನ ನಡುವೆ ಟ್ರಯೊ ಫ್ರೆಂಡ್‌ಷಿಪ್ ಬೆಳೀತು. ಆದರೆ ಅವರಿಬ್ಬರೂ ಸ್ವಲ್ಪ ಜಾಸ್ತಿ ಕ್ಲೋಸ್ ಆಗಿರುವುದು ನನಗೆ ಖಂಡಿತವಾಗಲೂ ಗೊತ್ತಿತ್ತು. ಆ ಕಾರಣಕ್ಕೇ ನಾನು ಇದು ಗುಂಪಲ್ಲ. ನನಗೆ ಇವರ ಜೊತೆಗೆ ಹೆಚ್ಚು ಮಾತಾಡಬೇಕು ಅನಿಸುತ್ತದಷ್ಟೆ ಎಂದು ಹೇಳಿಕೊಂಡು ಎಲ್ಲರ ಜೊತೆ ಮಾತಾಡಿಕೊಂಡು ಓಡಾಡಿಕೊಂಡೇ ಇದ್ದೆ. ತನಿಷಾ ಅವರ ದುಃಖಕ್ಕೆ ಸ್ಪಂದಿಸುವುದಕ್ಕೆ ಪ್ರತಿ ಸಲ ಇರುತ್ತಿದ್ದಳು. ಆದರೆ ತನಿಷಾಗೆ, ತನಿಷಾ ಥರ ಯಾರೂ ಇರಲಿಲ್ಲ.

ನನ್ನ ದುಃಖಕ್ಕಾಗಲಿ, ಖುಷಿಗಾಗಲಿ, ನನ್ನ ಕೋಪಕ್ಕಾಗಲಿ ಸ್ಪಂದಿಸುವವರು ಯಾರೂ ಇರಲಿಲ್ಲ. ಸಂಗೀತಾಗೆ ಏನು ಸಮಸ್ಯೆ ಎಂದರೆ, ಫ್ರೆಂಡ್ಸ್ ಅಂದ್ರೆ ಅವರನ್ನು ಸ್ವಲ್ಪ ತಲೆಮೇಲೆ ಇಟ್ಕೋಬೇಕು.ಆಗ ಅವರಿಗೆ ಸಮಾಧಾನ ಆಗುತ್ತದೆ. ಇಲ್ಲಾ ಅಂದ್ರೆ ಸಮಾಧಾನ ಆಗುವುದಿಲ್ಲ. ನಾನು ಜಗಳ ಆಯ್ತು ಅಂದ್ರೆ ಅಲ್ಲಲ್ಲೇ ಬಿಟ್ಟು ಹೋಗ್ತಾ ಇರ್ತೀನಿ. ಅವ್ರು ಜನರನ್ನೇ ಬಿಟ್ಟು ಹೋಗ್ತಿರ್ತಾರೆ. ಹಾಗಾಗಿ ಅವರು ತಪ್ಪು ಮಾಡಿದ್ರೂ ತುಂಬ ಬೇಗ ಕ್ಷಮಿಸಿ ನಾರ್ಮಲ್ ಆಗಿಬಿಡ್ತಿದ್ದೆ.

ನನಗೆ ವರ್ತೂರು ಅವರ ಮುಗ್ಧತೆ ಇಷ್ಟ. ಯಾರದೋ ಮಾತಿಗೆ ಕೇಳಿಸಿಕೊಂಡು, ಬಲಿಯಾಗಿ ಯಾರ ಬಗ್ಗೆಯೋ ಕ್ಯಾರೆಕ್ಟರ್ ಸರ್ಟಿಫಿಕೇಟ್ ಕೊಡುವುದಿಲ್ಲ ಅವರು. ಹಾಗಾಗಿ ಅವರ ಜೊತೆಗೆ ಮಾತಾಡುವುದು ನನಗೆ ಮೊದಲಿನಿಂದಲೂ ಇಷ್ಟ.ನನ್ನ ಪ್ರಕಾರ ಬಿಗ್‌ಬಾಸ್ ಮನೆಯಲ್ಲಿ ಫೇಕ್ ಅಂದ್ರೆ, ಸಂಗೀತಾ. ಜೆನ್ಯೂನ್ ಅನಿಸುವುದು ವರ್ತೂರು ಸಂತೋಷ್. ನನ್ನ ಪ್ರಕಾರ ಗೆಲ್ಲಬಹುದು ಅನಿಸುವುದು ಸಂಗೀತಾ. ಆದರೆ ನನಗೆ ವಿನ್ ಆಗಬೇಕು ಎಂದುನನಗೆ ಇರುವುದು ಕಾರ್ತಿಕ್. ಎಂದು ತನಿಶಾ ಕುಪ್ಪುಂಡ ನುಡಿದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.