ವರ್ತೂರು ಸಂತುಗಾಗಿ ಹಳ್ಳಿ ಹುಡುಗಿ ಬಟ್ಟೆಯಲ್ಲಿ‌ ಮಿಂಚಿದ ತನಿಷಾ

 | 
ುಬಹ

ಬಿಗ್ ಬಾಸ್ ಖ್ಯಾತಿಯ ತನಿಷಾ ಕುಪ್ಪಂಡ ಸೋಶಿಯಲ್ ಮೀಡಿಯಾದಲ್ಲಿ ಮುದ್ದಾದ ಫೋಟೋ ಸೀರೀಸ್ ಶೇರ್ ಮಾಡಿದ್ದು, ಅಭಿಮಾನಿಗಳು ತನಿಷಾ ನೋಡಿ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ.ಬಿಗ್ ಬಾಸ್ ಸೀಸನ್ 10ರಲ್ಲಿ ಸ್ಪರ್ಧಿಸುವ ಮೂಲಕ ಬೆಂಕಿ ಅಂತಾನೆ ಫೇಮಸ್ ಆದ ನಟಿ ತನಿಷಾ ಕುಪ್ಪಂಡ ಸದ್ಯ ತಮ್ಮ ರೆಸ್ಟೋರೆಂಟ್, ಜ್ಯುವೆಲ್ಲರಿ ಅಂತಾ ತುಂಬಾ ಬ್ಯುಸಿಯಾಗಿದ್ದಾರೆ.  

ಇನ್ನು ಹಲವು ಕಾರ್ಯಕ್ರಮಗಳಲ್ಲೂ ಮಿಂಚುವ ತನಿಷಾ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್. ಅಭಿಮಾನಿಗಳ ಜೊತೆಗೆ ಕನೆಕ್ಟ್ ಆಗಲು ನಟಿ ಹೆಚ್ಚಾಗಿ ತಮ್ಮ ಫೋಟೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಯಾವುದೇ ಕಾರ್ಯಕ್ರಮ ಇದ್ದರೂ ಭೇಟಿ ನೀಡಿ ಎಲ್ಲರೊಂದಿಗೆ ನಗುನಗುತ್ತಲೇ ಬೆರೆಯುತ್ತಾರೆ.

ಇತ್ತೀಚಿಗಷ್ಟೇ ಹೊಸಾ ಫೋಟೋ ಶೂಟ್ ಮಾಡಿಸಿ ತನಿಷಾ Do something today that your future self will thank you for ಎಂದು ಕ್ಯಾಪ್ಶನ್ ಹಾಕಿದ್ದು, ವಿವಿಧ ಪೋಸ್ ನೀಡಿ ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ನಟಿಯ ಟ್ರೆಡಿಶನಲ್ ಲುಕ್ ಗೆ ಫ್ಯಾನ್ಸ್ ಮನ ಸೋತಿದ್ದಾರೆ. ನಿಮ್ಮ ಬಟ್ಟೆಗಳ ಸೆಲೆಕ್ಷನ್ ಚೆನ್ನಾಗಿದೆ ಎಂದು ಹಾಡಿ ಹೊಗಳಿದ್ದಾರೆ.

ತನಿಷಾ ಫೋಟೊ ನೋಡಿ ನೆಟ್ಟಿಗರು, ಮುದ್ದು ಗೊಂಬೆ, ಬ್ಯೂಟಿಫುಲ್, ಕ್ವೀನ್, ಬೆಂಕಿ, ಕೆಂಪು ಗುಲಾಬಿ ಎಂದೆಲ್ಲಾ ಹಾಡಿ ಹೊಗಳಿದ್ದಾರೆ. ಅಲ್ಲದೇ ಟ್ರೆಡಿಶನಲ್ ಡ್ರೆಸ್  ನಿಮಗೆ ಚೆನ್ನಾಗಿ ಸೂಟ್ ಆಗುತ್ತೆ ಎಂದು ಸಹ ಹೇಳಿದ್ದಾರೆ. ಇನ್ನು ಕೆಲವರು ತನಿಷಾಗೆ ನಿಮ್ಮ ಪಕ್ಕದಲ್ಲಿ ವರ್ತೂರ್ ಅಣ್ಣ ಇದ್ದಿದ್ರೆ, ಫೋಟೋ ಇನ್ನಷ್ಟು ಚೆನ್ನಾಗಿ ಬರ್ತಿತ್ತು ಅಂದಿದ್ದಾರೆ. ತನಿಷಾ ಮತ್ತು ವರ್ತೂರ್ ಸಂತೋಷ್  ಜೋಡಿ ಬಿಗ್ ಬಾಸ್ ಸಮಯದಿಂದನೂ ತುಂಬಾನೆ ಫೇಮಸ್. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.