ತನಿಷಾ ಹೊಸ ಲುಕ್ ನೋಡಿ ಫಿದಾ ಆದ ಕನ್ನಡಿಗರು; ವರ್ತೂರ್ ಸಂತು ತಬ್ಬಿಬ್ಬು

 | 
Hh

ನಟಿ ತನಿಷಾ ಕುಪ್ಪಂಡ ಅವರು ಬಿಗ್‌ ಬಾಸ್‌' ಕನ್ನಡ ಸೀಸನ್ 10ರ ಶೋನಿಂದ ಹೊರ ಬಂದ ಮೇಲೆ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಅವರ ಹೊಸ ಹೊಸ ಸಾಹಸಗಳ ಫೋಟೋ, ವಿಡಿಯೋಗಳು ಸದ್ದು ಮಾಡುತ್ತಲೇ ಇರುತ್ತವೆ. ಈ ಹಿಂದೆಯೇ ರೆಸ್ಟೋರೆಂಟ್ ಆರಂಭಿಸಿದ್ದ ಅವರು, ಈಗ ಸಿಲ್ವರ್ ಜ್ಯುವೆಲ್ಲರಿ ಉದ್ಯಮ ಆರಂಭಿಸಿದ್ದಾರೆ.

ಜೊತೆಗೆ ಸಿನಿಮಾಗಳಲ್ಲೂ ಸಕ್ರಿಯರಾಗಿದ್ದಾರೆ.ಬಿಗ್ ಬಾಸ್‌' ಶೋಗೆ ಹೋಗಿಬಂದ ಬಳಿಕ ತನಿಷಾಗೆ ಸಿಕ್ಕಾಪಟ್ಟೆ ಅವಕಾಶಗಳು ಸಿಗುತ್ತಿವೆಯಂತೆ. ಆ ಬಗ್ಗೆ ಮಾತನಾಡಿರುವ ತನಿಷಾ ಕುಪ್ಪಂಡ ಅವರು,ಬಿಗ್‌ ಬಾಸ್‌ ನಂತರ ನನಗೆ ಸಾಕಷ್ಟು ಸಿನಿಮಾಗಳ ಆಫರ್‌ ಬರುತ್ತಿದೆ. ಅದಕ್ಕಿಂತಲೂ ಹೆಚ್ಚಾಗಿ ವಿಶೇಷ ಹಾಡಿನ ಅವಕಾಶಗಳು ಜಾಸ್ತಿ ಆಗಿವೆ.

ಆದರೆ ನಾನು ನನ್ನ ಉದ್ಯಮದ ಕಡೆಗೆ ಹೆಚ್ಚು ಗಮನ ಹರಿಸುತ್ತಿರುವುದರಿಂದ ಎಲ್ಲವನ್ನೂ ಒಪ್ಪಿಕೊಳ್ಳುತ್ತಿಲ್ಲ. ಹಲವು ಕಾರ್ಯಕ್ರಮಗಳಲ್ಲಿ ಅತಿಥಿಯಾಗಲು ಒಪ್ಪಿದ್ದೇನೆ. ಇವೆಲ್ಲವನ್ನು ಮುಗಿಸಿ ಹೊಸ ಸಿನಿಮಾಗಳತ್ತ ಗಮನ ಹರಿಸುತ್ತೇನೆ ಎನ್ನುತ್ತಾರೆ. ಇನ್ನು ಇತ್ತೀಚಿಗಷ್ಟೇ ಸೀರೆ ಉಟ್ಟು ಫೋಟೋ ಶೂಟ್ ಗೆ ಫೋಸ್ ನೀಡಿದ್ದಾರೆ.

ಕನ್ನಡತಿ ಧಾರಾವಾಹಿ ನಟ ಕಿರಣ್ ರಾಜ್ ಅವರ 'ಶೇರ್‌' ಸಿನಿಮಾದಲ್ಲಿ ಖಡಕ್‌ ಪೊಲೀಸ್‌ ಅಧಿಕಾರಿಯಾಗಿ ತನಿಷಾ ಕುಪ್ಪಂಡ ಕಾಣಿಸಿಕೊಂಡಿದ್ದಾರೆ. ಖಡಕ್‌ ಮಾತುಗಳ ಮೂಲಕ ಗಮನ ಸೆಳೆದಿರುವ ತನಿಷಾ, ಬಿಗ್‌ ಬಾಸ್‌ ಮನೆಯಲ್ಲಿ ಬೆಂಕಿ ಎಂದೇ ಜನಪ್ರಿಯರಾಗಿದ್ದರು. ಈಗ ಅವರು ಸೀರೆ ಧರಿಸಿರುವ ಫೋಟೊಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ. 

ಅಭಿಮಾನಿಗಳು ಇವರ ಸೀರೆ ನೋಡಿ ಸೂಪರ್ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.