ಲಕ್ಷ್ನಿನಿವಾಸ್ ಸೀರಿಯಲ್ ನಿಂದ ಹೊರಬಂದ ತನು, ಸೆಟ್ ಒಳಗಡೆ ಏನು ನಡೆಯುತ್ತಿದೆ ಗೊ ತ್ತಾ

 | 
Hyy
ಕಿರುತೆರೆಯಲ್ಲಿ ಇತ್ತೀಚೆಗೆ ಲಾಂಚ್ ಆದ ಧಾರಾವಾಹಿಗಳಲ್ಲಿ ಲಕ್ಷ್ಮೀ ನಿವಾಸ ಕೂಡ ಒಂದು. ಬಹುದೊಡ್ಡರಗಣ ಹೊಂದಿರೋ ಈ ಧಾರಾವಾಹಿಯ ವೀಕ್ಷಕರ ನೆಚ್ಚಿನ ಸೀರಿಯಲ್ ನಲ್ಲಿ ಇದೆ. ಆದರೆ ಇದೀಗ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ತನು ಪಾತ್ರದಲ್ಲಿ ನಟಿಸುತ್ತಿದ್ದ ನಟಿ ಯುಕ್ತಾ ಅವರು ಹೊರಬಂದಿದ್ದಾರೆ. ವೀಕ್ಷಕರಿಗೆ ವಿಶ್ವ ಹಾಗೂ ತನು ಪಾತ್ರ ತುಂಬ ಇಷ್ಟವಾಗಿದೆ. ಮುದ್ದು ಮುದ್ದಾಗಿ ವಿಶ್ವ.. ವಿಶ್ವ ಅಂತ ಸಿಕ್ಕಿಬಿದ್ದ ಚಲುವೆ ತನು ಏಕಾಏಕಿ ಸೀರಿಯಲ್ ನಿಂದ ಆಚೆ ಬಂದು ವೀಕ್ಷಕರಿಗೆ ಶಾಕ್ ಕೊಟ್ಟಿದ್ದಾರೆ.
ಅಷ್ಟಕ್ಕೂ ನಟಿ ಯುಕ್ತಾ ಅವರು ಧಾರಾವಾಹಿಯಿಂದ ಆಚೆ ಬಂದಿದ್ದೇಕೆ ಅಂತ ಮಾಹಿತಿ ಲಭ್ಯವಾಗಿಲ್ಲ.ಆದರೆ ನಟಿ ತನು ಪಾತ್ರಧಾರಿ ಜಾಗಕ್ಕೆ ಹೊಸ ನಟಿ ಆಗಮನವಾಗಿದೆ. ಇದೀಗ ತನು ಪಾತ್ರಕ್ಕೆ ಮಹಾಲಕ್ಷ್ಮೀ ಎಂಬುವವರು ಎಂಟ್ರಿ ಕೊಟ್ಟಿದ್ದಾರೆ. ಈ ಮಹಾಲಕ್ಷ್ಮೀ ಬೇರೆ ಯಾರು ಅಲ್ಲ, ಲಕ್ಷ್ಮೀ ನಿವಾಸ ಸೀರಿಯಲ್​ನಲ್ಲಿ ಸಿದ್ದೇಗೌಡರ ಪಾತ್ರದಲ್ಲಿ ನಟಿಸುತ್ತಿರೋದು ನಟ ಧನಂಜಯ್ ಅವರ ತಂಗಿ.
ನಟಿ ಮಹಾಲಕ್ಷ್ಮೀ ಕುಬುಸ, ಥಗ್ಸ್‌ ಆಫ್‌ ರಾಮಘಡ, ಸ್ವಪ್ನ ಮಂಟಪ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಂದಹಾಗೆ ಧನಂಜಯ ಅವರ ನಿಜವಾದ ಅಮ್ಮ ಚೆಲುವು ತಾಯಿಯಾಗಿ ನಟಿಸುತ್ತಿದ್ದಾರೆ. ಈಗ ತನು ಜಾಗಕ್ಕೆ ಅವರ ನಿಜವಾದ ತಂಗಿ ಎಂಟ್ರಿ ಕೊಟ್ಟಿದ್ದಾರೆ. ಖುಷಿಯ ವಿಚಾರ ಏನೆಂದರೆ ಒಂದೇ ಧಾರಾವಾಹಿಯಲ್ಲಿ ಅಮ್ಮ-ಮಗ-ಮಗಳು ನಟಿಸುತ್ತಿರೋದು. ಈ ವಿಚಾರ ಸೀರಿಯಲ್ ವೀಕ್ಷಕರಿಗೂ ಖುಷಿ ಕೊಟ್ಟಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.