ತರುಣ್ ಸುಧೀರ್ ಅವರಿಗೆ ಇರುವ ಸಮಸ್ಯೆಯನ್ನು ನೋಡಿ ಹೆಣ್ಣು ಕೊಡುವುದಕ್ಕೆ ಒಪ್ಪುತ್ತಿರಲಿಲ್ಲ

 | 
೭ೀ
ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕನಾಗಿ ಇತ್ತೀಚಿನ ವರ್ಷಗಳಲ್ಲಿ ಯಶಸ್ಸು ಕಾಣುತ್ತಿರುವ ತರುಣ್, ಕನ್ನಡ ಚಿತ್ರರಂಗಕ್ಕೆ ಮತ್ತಷ್ಟು ಉತ್ತಮ ಸಿನಿಮಾಗಳನ್ನು ನೀಡಬೇಕು ಎನ್ನುವ ಅಭಿಲಾಷೆಯಲ್ಲಿದ್ದಾರೆ. ಹೀಗಾಗಿ ಈ ಹಿಂದೆ ಮದುವೆ ಬಗ್ಗೆ ಮಾತನಾಡಿದ್ದ ತರುಣ್ ಸುಧೀರ್, ಸದ್ಯಕ್ಕೆ ಮದುವೆ ಬಗ್ಗೆ ಆಲೋಚನೆ ಇಲ್ಲ, ಮದುವೆ ಆಗದೇ ನೆಮ್ಮದಿಯಾಗಿ ಇದ್ದೇನೆ ಎಂದು ಪದೇ ಪದೇ ಹೇಳುತ್ತಿದ್ದರು. 
ಆದರೆ ತಾಯಿ ಮಾಲತಿ ಮಾತ್ರ ಮಗನಿಗೆ ಮದುವೇ ಮಾಡಿಯೇ ಸಿದ್ಧ ಎನ್ನುತ್ತಿದ್ದರು.ಅವನ ಅಣ್ಣ-ಅತ್ತಿಗೆ ಇರುತ್ತಾರೆ. ಆದರೆ ಇವನಿಗೆ ಅಂತಾ ನೀನು ಊಟ ಮಾಡಿದ್ಯಾ ಅಂತಾ ಕೇಳೋರೆ ಇಲ್ಲ. ನೀವೆಲ್ಲಾ ಎಷ್ಟು ಒಳ್ಳೆ ಸ್ನೇಹಿತರು. ನೀವೇ ಈಗ ತಂದೆ-ತಾಯಿ ಅವನಿಗೆ ಈಗ. ಆದರೆ ಅವನಿಗೆ ಸಂಗಾತಿ ಅಂತಾ ಬಂದರೆ ಒಳ್ಳೆಯದು ಅಲ್ವಾ, ನನಗೆ ಯೋಚನೆ ಆಗುತ್ತದೆ. ಇವನೇನು ಸುಂದರ ಇಲ್ವಾ, ರೂಪವಂತ ಇಲ್ವಾ, ಇವನಿಗೆ ಒಳ್ಳೆಯ ಗುಣ ಇಲ್ವಾ ಎಂದು ನೋವು ಹೊರಹಾಕಿದ್ದರು.
ತರುಣ್‌ ಇಂದಿನವರೆಗೂ ಒಂದು ಅಡಿಕೆ ಹೋಳನ್ನು ಕೈಯಲ್ಲಿ ಮುಟ್ಟಿಲ್ಲ. ಒಂದು ಸಿಗರೇಟು ಮುಟ್ಟಿಲ್ಲ. ಇಷ್ಟು ಒಳ್ಳೆ ಗುಣ ಇರುವ ಹುಡುಗನಿಗೆ ಒಂದು ಹೆಣ್ಣು ಯಾಕೆ ಸಿಗ್ತಿಲ್ಲ. ಇವನಿಗೆ ಯಾಕೆ ಸೆಟ್‌ ಆಗುತ್ತಿಲ್ಲ. ಪ್ರತಿ ದಿನ ರಾತ್ರಿ- ಹಗಲು ಇದೇ ಆಲೋಚನೆ ನನಗೆ. ದೇವರಲ್ಲಿ ದಿನ ಇದನ್ನೇ ಪ್ರಾರ್ಥನೆ ಮಾಡುತ್ತೇನೆ' ಎಂದು ಕಣ್ಣೀರು ಹಾಕಿದ್ದರು. ಆದರೆ ಈಗ ಮಾಲತಿ ಸುಧೀರ್‌ ಅವರ ಬಹುದಿನದ ಕನಸು ನನಸಾಗುತ್ತಿದ್ದು, ತರುಣ್‌ ಸುಧೀರ್‌ ಸೋನಾಲ್ ಕೈ ಹಿಡಿದಿದ್ದಾರೆ.
ಇನ್ನು ಕಾಟೇರ ಸಿನಿಮಾ ನಿರ್ದೇಶಕ ತರುಣ್‌ ಸುಧೀರ್‌ ಮತ್ತು ಸೋನಲ್‌ ಮೊಂತೆರೋ ಜೋಡಿಯ ಮದುವೆ ಕಾರ್ಯಕ್ರಮವು ಆಗಸ್ಟ್‌ 11ರಂದು ನಡೆದಿತ್ತು. ಕುಟುಂಬಸ್ತರು, ಸ್ಯಾಂಡಲ್‌ವುಡ್‌ನ ಆಪ್ತರ ಸಮ್ಮುಖದಲ್ಲಿ ಸೋನಲ್‌ ಕೊರಳಿಗೆ ಮಾಂಗಲ್ಯಧಾರಣೆ ಮಾಡಿದ್ದರು ತರುಣ್‌. 
ಈ ಸಮಯದಲ್ಲಿ ಕಾರ್ಯಕ್ರಮದಲ್ಲಿ ಕಾಟೇರ ನಟ ದರ್ಶನ್‌ ಅನುಪಸ್ಥಿತಿ ಕಾಡಿತ್ತು. ನಮ್ಮ ಪ್ರೀತಿ ಮದುವೆ ವರೆಗೂ ಬರಲು ದರ್ಶನ್‌ ಅಣ್ಣನೇ ಕಾರಣ ಎಂದು ತರುಣ್‌ ಸುಧೀರ್‌ ಈ ಹಿಂದೆ ಹೇಳಿದ್ದರು. ಒಟ್ಟಿನಲ್ಲಿ ನನ್ನ ಇನ್ನೊಂದು ಮಗ ಮದುವೆಗಿಲ್ಲ ಎಂದು ತರುಣ್ ತಾಯಿ ಕಣ್ಣೀರು ಹಾಕಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.