ಮದುವೆ ಮುಗಿದ ಬಳಿಕ ಹ ನಿಮೂನ್ Plan ಬಗ್ಗೆ ತರುಣ್ ಹೊಸ ನಿರ್ಧಾರ
ನಿರ್ದೇಶಕ ತರುಣ್ ಸುಧೀರ್ ಮತ್ತು ಸೋನಲ್ ಮದುವೆ ಆಗೋಕೆ ಕಾರಣವೇ ನಟ ದರ್ಶನ್. ಅಂದುಕೊಂಡಂತೆ ಆಗಿದ್ದರೆ ದರ್ಶನ್ ಮುಂದೆ ನಿಂತು ಈ ಜೋಡಿಯ ಮದುವೆ ಮಾಡಬೇಕಿತ್ತು. ಇವರ ಮದುವೆ ನಿಶ್ಚಿಯ ಮಾಡಿ ಕೊಲೆ ಕೇಸ್ ನಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿಕೊಂಡರು ದರ್ಶನ್.
ಈ ಮದುವೆಗೆ ದರ್ಶನ್ ಬರ್ತಾರೆ ಅನ್ನೋ ಮಾತು ಸುಳ್ಳಾಯಿತು ಹಾಗಾಗಿ ಅವರ ಅನುಪಸ್ಥಿತಿ ಬೇಸರ ತರಿಸಿದೆ ಎಂದಿದ್ದಾರೆ ತರುಣ್ ಸುಧೀರ್.ಮದುವೆಯ ಈ ಸಂಭ್ರಮದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ತರುಣ್, `ಹೊಸ ಜೀವನ ಹೊಸ ಹುರುಪಿದೆ. ಇಷ್ಟು ದಿನ ಕಾದಿದ್ದಕ್ಕೂ ಬೇಸ್ಟ್ ಕೊಟ್ಟಿದಾರೆ ದೇವ್ರು. ತುಂಬಾ ಜನ ಬಂದು ವಿಶ್ ಮಾಡಿದ್ರು ಎಲ್ಲರೂ ತಮ್ಮನ ಥರ ಕುಟುಂಬದ ಥರ ಬಂದು ಹಾರೈಸಿದ್ರು ಎಂದಿದ್ದಾರೆ.
ದರ್ಶನ್ ಅನುಪಸ್ಥಿತಿ ಬಗ್ಗೆಯೂ ಮಾತನಾಡಿದ ತರುಣ್, ಲಗ್ನ ಪತ್ರಿಕೆ ಬರೆಸುವ ಮುಂಚೆ ಡೇಟ್ ಕನ್ಪರ್ಮ್ ಆಗಿತ್ತು. ಡೇಟ್ ಚೇಂಜ್ ಮಾಡ್ಬೇಡ ಮದ್ವೆ ಮಾಡ್ಕೊ ಅಂದ್ರು ದರ್ಶನ್. ಆಗಸ್ಟ್ 11 ಡೇಟ್ ಕೊಟ್ಟಿದ್ವಿ. ಅವರು ಹೇಳಿದಂತೆ ಮದುವೆ ಆಗ್ತಿದ್ದೇವೆ. ದರ್ಶನ್ ಅವ್ರ ಅನುಪಸ್ಥಿತಿ ಬೇಸರ ಅನ್ನಿಸ್ತಿದೆ ಎಂದು ದರ್ಶನ್ ಬಗ್ಗೆ ಮಾತಾಡ್ತಾ ಭಾವುಕರಾದ ತರುಣ್ ಸುಧೀರ್.
ನಟ ದರ್ಶನ್ ಹಾಗೂ ನಿರ್ದೇಶಕ ತರುಣ್ ಇಬ್ಬರು ಅಣ್ಣ-ತಮ್ಮನಂತೆ ಇದ್ದರು. ಇದೀಗ ದರ್ಶನ್ ಮದುವೆಗೆ ಬರಲು ಸಾಧ್ಯವಾಗಲಿಲ್ಲ ಎನ್ನುವ ಬೇಸರ ತರುಣ್ ಅವರಿಗೂ ಇದೆ. ಮದುವೆ ಬಳಿಕ ದರ್ಶನ್ ಬಗ್ಗೆ ಮಾತಾಡಿದ ತರುಣ್ ಭಾವುಕರಾದ್ರು.ಬೆಂಗಳೂರಿನ ಪೂರ್ಣಿಮಾ ಪಾಲೇಸ್‌ನಲ್ಲಿ ಈ ಜೋಡಿ ಮದುವೆ ನೆರವೇರಿದೆ. ತುಲಾ ಲಗ್ನ ಮುಹೂರ್ತದಲ್ಲಿಯೇ ಮಾಂಗಲ್ಯದ ಧಾರಣೆ ನಡೆದಿದೆ.
ಇವರ ಮದುವೆಗೆ ಸಿನಿಮಾರಂಗ ಹಾಗೂ ರಾಜಕಾರಣಿಗಳು ಸಾಕ್ಷಿ ಆಗಿದ್ದಾರೆ. ಹಿಂದೂ ಸಂಪ್ರದಾಯದಂತೆ ಈ ಜೋಡಿಯ ಮದುವೆ ನೆರವೇರಿದೆ. ತರುಣ್ ಸುಧೀರ್ ಅವರ ಸಂಪ್ರದಾಯದಂತೇನೆ ಈ ಜೋಡಿ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.