ದರ್ಶನ್ ಏನೇ ಮಾಡಿದ್ರು ಡಿವೋರ್ಸ್ ಕೊಡದೇ ವಿಜಯಲಕ್ಷ್ಮಿ ಸುಮ್ಮನಿರುವುದು ಅದೊಂದೆ ಕಾರಣಕ್ಕೆ

 | 
Je
 ರೇಣುಕಾಸ್ವಾಮಿ ಕೊಲೆ ಕೇಸ್‌ ನಲ್ಲಿ ನಟ ದರ್ಶನ್‌ ಜೈಲು ಸೇರಿ ಬರೋಬ್ಬರಿ 110 ದಿನಗಳು ಕಳೆದಿವೆ. ಪ್ರೇಯಸಿಗೆ ಅಶ್ಲೀಲ ಮೆಸೇಜ್ ಕಳುಹಿಸಿದ ಎನ್ನುವ ಕಾರಣಕ್ಕೆ ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಎನ್ನುವಾತನ ಕೊಲೆಗೆ ಕಾರಣವಾದ ಆರೋಪದ ಮೇಲೆ ನಟ ದರ್ಶನ್‌ನನ್ನು ಬಂಧಿಸಲಾಗಿದ್ದು, ನಟ ದರ್ಶನ್‌ A2 ಆರೋಪಿಯಾಗಿದ್ದಾರೆ.
ರೇಣುಕಾಸ್ವಾಮಿ ಕೊಲೆ ಕೇಸ್‌ ನಲ್ಲಿ ನಟಿ ಪವಿತ್ರಾ ಗೌಡ ಸೇರಿದಂತೆ ಪ್ರಕರಣ ಸಂಬಂಧ ಒಟ್ಟು 13 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಇತ್ತ ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಅವರು ಪತಿಗಾಗಿ ದೇವರ ಮೊರೆ ಹೋಗಿದ್ದು, ಕಾನೂನು ಹೋರಾಟವನ್ನ ನಡೆಸುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ದರ್ಶನ್‌ಗೆ ಪತ್ನಿ ವಿಜಯಲಕ್ಷ್ಮಿ ವಿಚ್ಛೇದನ ನೀಡಲು ಮುಂದಾಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಸ್ಯಾಂಡಲ್‌ವುಡ್‌ ನಲ್ಲಿ ಚಿಕ್ಕಪುಟ್ಟ ಕಾರಣಗಳಿಗೆ ಹಾಗೂ ಮನಸ್ಥಾಪಗಳಿಗೆ ವಿಚ್ಛೇದನ ನೀಡುವುದು ಸರ್ವೆ ಸಮಾನ್ಯವಾಗಿವೆ. ಇತ್ತಿಚೆಗಷ್ಟೇ ದೊಡ್ಡಮನೆಯ ಯುವ ರಾಜ್‌ ಕುಮಾರ್‌ ಹಾಗೂ ಚಂದನ್‌ ಶೆಟ್ಟಿ , ನಿವೇದಿತಾ ವಿಚ್ಚೇದನ್ನ ಪಡೆದಿದ್ದಾರೆ. ಆದರೆ ಹಲವು ಬಾರೀ ದರ್ಶನ್‌ ನಿಂದ ಹಲ್ಲೆಗೊಳಗಾದ್ರೂ ದರ್ಶನ್‌ ಅವರಿಂದ ವಿಜಯಲಕ್ಷ್ಮೀ ಅವರು ಎಂದಿಗೂ ದೂರು ಉಳಿಯುವ ಮನಸ್ಸು ಮಾಡಿಲ್ಲ. 
ಈ ಹಿಂದೆ ಅಂದರೆ 2011ರಲ್ಲಿ ಹೆಂಡತಿ ಮೇಲೆ ಹಲ್ಲೆ ಮಾಡಿದ ಆರೋಪ ಎದುರಿಸಿದ್ದರು. ಅಲ್ಲದೇ ಪತ್ನಿ ವಿಜಯಲಕ್ಷ್ಮೀ ನೀಡಿದ ದೂರಿನ ಮೇರೆಗೆ ಅರೆಸ್ಟ್ ಆಗಿ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿ ಬಂದಿದ್ದಾರೆ.ಈ ಹಿಂದೆಯೂ ಕೆಲ ದಿನಗಳು ಜೈಲಿನಲ್ಲಿದ್ದ ದರ್ಶನ್‌ ಅವರನ್ನು ಚಿತ್ರರಂಗದ ಹಿರಿಯರು ಹಾಗೂ ಕಾನೂನು ಸಲಹೆಗಾರರ ಮಧ್ಯಸ್ಥಿಕೆಯಲ್ಲಿ ರಾಜಿ ಸಂಧಾನ ನಡೆಸಿ ಬಿಡುಗಡೆಗೊಳಿಸಲಾಗಿತ್ತು.
ರಾಜಿ ಸಂಧಾನದ ಬಳಿಕ ವಿಜಯಲಕ್ಷ್ಮೀ ದೂರನ್ನು ವಾಪಸ್‌ ಪಡೆದಿದ್ದರು. ಇನ್ನೂ 2016 ರಲ್ಲಿಯೂ ವಿಜಯಲಕ್ಷ್ಮಿ ಮೇಲೆ ದರ್ಶನ್‌ ಹಲ್ಲೆ ನಡೆಸಿರುವ ವಿಚಾರ ಸುದ್ದಿಯಾಗಿತ್ತು. ಇದೀಗ ಪ್ರೇಯಸಿ ಪವಿತ್ರಾ ಗೌಡಗಾಗಿ ನಟ ದರ್ಶನ್‌ ಬರೋಬ್ಬರಿ ಮೂರು ತಿಂಗಳು ಜೈಲು ವಾಸವನ್ನ ಅನುಭವಿಸಿದ್ದರು ಸಹ ವಿಜಯಲಕ್ಷ್ಮಿ ಮಾತ್ರ ದರ್ಶನ್‌ ಅವರಿಂದ ದೂರ ಉಳಿಯುವ ಪ್ರಯತ್ನವನ್ನ ಮಾಡಿಲ್ಲ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.