ನಾನು ಅವಸರದಲ್ಲೇ ಗರ್ಭಿಣಿ ಆಗಿದ್ದು ಆ ಕಾರಣಕ್ಕೆ; ಅದಿತಿ ಮಾತಿಗೆ ಶ್ರುತಿ ಶಾ ಕ್

 | 
Js

ಸ್ಯಾಂಡಲ್​ವುಡ್​ ಬ್ಯೂಟಿ ಅದಿತಿ ಪ್ರಭುದೇವ ಈಗ ಎರಡೂವರೆ ತಿಂಗಳ ಮಗುವಿನ ಅಮ್ಮ. ಡೆಲಿವರಿಯ ಅಂತಿಮ ದಿನಗಳವರೆಗೂ ಸಕತ್​ ಆ್ಯಕ್ಟೀವ್​ ಆಗಿರೋ ನಟಿ, ಸದ್ಯ ಮಗು ಹುಟ್ಟಿದ ಎರಡೇ ತಿಂಗಳಿನಲ್ಲಿ ಮತ್ತೆ ಫೀಲ್ಡ್​ಗೆ ಇಳಿದಿದ್ದಾರೆ. ಇದೀಗ ತಾಯ್ತನದ ಸಂಪೂರ್ಣ ಖುಷಿಯನ್ನು ಸವಿಯುತ್ತಿದ್ದಾರೆ. 

ಮೊದಲಿನಿಂದಲೂ ಸೋಷಿಯಲ್​ ಮೀಡಿಯಾದಲ್ಲಿಯೂ ಸಾಕಷ್ಟು ಆ್ಯಕ್ಟೀವ್​ ಆಗಿರುವ ನಟಿ ವಿಭಿನ್ನ ರೀತಿಯ ಟಿಪ್ಸ್​, ಅಡುಗೆ ಕುರಿತು ವಿಡಿಯೋ ಶೇರ್​ ಮಾಡುತ್ತಿದ್ದರು.  ಗರ್ಭಿಣಿಯಾದ ಮೇಲೂ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್​ ಆಗಿಯೇ ಇದ್ದರು.

ಗರ್ಭಿಣಿಯರಿಗೆ ಸಹಜವಾಗಿ ಕಾಡುವ ಸಮಸ್ಯೆಗಳ ಬಗ್ಗೆ ಕೆಲವು ವಿಡಿಯೋ ಮಾಡಿದದರು.  ಅದಕ್ಕೆ ಕೆಲವೊಂದು ಪರಿಹಾರ ನೀಡಿದ್ದರು. ಅದಾದ ಬಳಿಕ ಮಗುವಿಗೆ ಜನ್ಮ ನೀಡಿದ ಎರಡು ತಿಂಗಳಲ್ಲೇ ಮತ್ತೆ ಕೆಲಸ ಶುರು ಮಾಡಿಕೊಂಡಿದ್ದಾರೆ. 2022ರ ನವೆಂಬರ್​ 28ರಂದು ಅದಿತಿ ಅವರು, ಕೊಡಗಿನ ಉದ್ಯಮಿ ಯಶಸ್​ ಪಟ್ಲಾ ಅವರ ಕೈಹಿಡಿದಿದ್ದಾರೆ. ಮದುವೆಯಾಗಿ ಒಂದು ವರ್ಷದಲ್ಲಿ ಗುಡ್​ನ್ಯೂಸ್​ ಕೊಟ್ಟಿದ್ದ ನಟಿ, 2024ರ ಏಪ್ರಿಲ್​ 4ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. 

ಮಗಳಿಗೆ ಎರಡು ತಿಂಗಳು ಆಗುತ್ತಲೇ,  ಇವರು,  ಕಲರ್ಸ್​ ಕನ್ನಡ ಚಾನೆಲ್​ನಲ್ಲಿ ಇದಾಗಲೇ ರಾಜಾ ರಾಣಿ ಮೂರನೇ ಸೀಸನ್​ನಲ್ಲಿ ಕಾಣಿಸಿಕೊಂಡಿದ್ದಾರೆ.  ರಿಯಲ್ ಜೋಡಿಗಳು, ಒಬ್ಬರನ್ನೊಬ್ಬರು ಎಷ್ಟೊಂದು ಅರ್ಥ ಮಾಡ್ಕೊಂಡಿದ್ದಾರೆ ಅನ್ನೋದನ್ನು ತಿಳಿಸುವ ಈಗಾಗಲೇ 2 ಸೀಸನ್ ಗಳನ್ನು ಮುಗಿಸಿರುವ ರಾಜಾ ರಾಣಿ (Raja Rani) ಕಾರ್ಯಕ್ರಮದ ಮೂರನೇ ಸೀಸನ್ ಆಗಿ ರಾಜಾ ರಾಣಿ ರೀಲೋಡೆಡ್​ನಲ್ಲಿ  ಸೃಜನ್​ ಲೋಕೇಶ್​ ಮತ್ತು ತಾರಾ ಅನುರಾಧ ಅವರ ಜೊತೆ ಅದಿತಿ  ತೀರ್ಪುಗಾರರಾಗಿದ್ದಾರೆ. 

 ಇದಕ್ಕಾಗಿ  ಅಭಿಮಾನಿಗಳು ಇಷ್ಟು ಚಿಕ್ಕ ವಯಸ್ಸಿನ ಪಾಪುವನ್ನು ಬಿಟ್ಟು ಬಂದಿರುವುದಕ್ಕೆ ಅಸಮಾಧಾನ ಹೊರಹಾಕುತ್ತಲೇ ಇದ್ದಾರೆ.  ಆದರೆ ಇದೀಗ ಈ ಷೋನಲ್ಲಿ ಮದುವೆಯಾದ ವರ್ಷದಲ್ಲಿಯೇ ತಾಯಿಯಾಗಿದ್ದು ಏಕೆ ಎನ್ನುವ ಕಾರಣವನ್ನು ಬಿಚ್ಚಿಟ್ಟಿದ್ದಾರೆ. ಸಾಮಾನ್ಯವಾಗಿ ನಟಿಯರು ಅಥವಾ ಯಾವುದೇ ಕ್ಷೇತ್ರದ ಸೆಲೆಬ್ರಿಟಿಗಳು ಮದುವೆ ಆಗುವುದೇ ಲೇಟು. ಮದುವೆ ಆದರೂ ತಮ್ಮ ಕರಿಯರ್​ ಮೇಲೆ ಹೆಚ್ಚು ಜಾಗರೂಕರಾಗಿರುತ್ತಾರೆ.

ಅದಕ್ಕಾಗಿಯೇ ಮಗುವನ್ನು ಮಾಡಿಕೊಳ್ಳುವುದು ತುಂಬಾ ಲೇಟು. ಇನ್ನು ಕೆಲವರಂತೂ ಎಲ್ಲಿ ತಮ್ಮ ಸೌಂದರ್ಯ ಹಾಳಾಗುತ್ತದೆ ಎಂದು ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆಯುತ್ತಾರೆ. ಆದರೆ ನಟಿ ಅದಿತಿ ವಿಷಯದಲ್ಲಿ ಹಾಗಲ್ಲ. ವರ್ಷದಲ್ಲಿಯೇ ಗರ್ಭಿಣಿಯಾಗಿದ್ದರು. ಆದರೆ ಇದಕ್ಕೆ ಅವರು ಕೊಟ್ಟ ಕಾರಣದಿಂದ ರಾಜಾ ರಾಣಿ ಷೋನಲ್ಲಿ ತೀರ್ಪುಗಾರರಾಗಿರುವ ತಾರಾ ಮತ್ತು ಶ್ರುತಿ ಅವರೇ ನಾಚಿಕೊಂಡರು.

ಸದ್ಯ ಅದಿತಿ ತಾಯ್ತನದ ಸುಖದ ಕುರಿತು ಈ ಹಿಂದೆ ಹೇಳಿಕೊಂಡಿದ್ದರು.  ಮದುವೆಯಾದ ಮೇಲೆ ಜೀವನದ ಬದಲಾವಣೆ ಆಗಿದ್ದು ನಿಜ. ಆದ್ರೆ ಅಮ್ಮನಾದ ಮೇಲಂತೂ ಅದೊಂದು ರೀತಿಯಲ್ಲಿ ಹೇಳಿಕೊಳ್ಳಲಾಗದ ಖುಷಿ. ಎಲ್ಲರೂ ಹೇಳುತ್ತಿದ್ದಾಗ ಏನೂ ಅನ್ನಿಸುತ್ತಿರಲಿಲ್ಲ. ಆದರೆ ಇದೀಗ ತುಂಬಾ ಖುಷಿಯಾಗುತ್ತಿದೆ. ಅದನ್ನು ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ. ಇದೇ ವೇಳೆ ತನ್ನ ಮಗುವಿಗೆ ಈಗ ಎರಡು ತಿಂಗಳು. ಅಮ್ಮ ಮತ್ತು ಗಂಡನ ಸಹಾಯ ಇಲ್ಲದಿದ್ದರೆ ತಾವು ಹೀಗೆ ಇಲ್ಲಿ ಬರಲು ಸಾಧ್ಯವಾಗುತ್ತಿರಲಿಲ್ಲ. 

ಅಮ್ಮ ಮಗುವನ್ನು ನೋಡಿಕೊಳ್ಳುತ್ತಿರುವ ಕಾರಣ ನಾನು ಷೋಗೆ ಬರಲು ಸಾಧ್ಯವಾಯಿತು ಎಂದಿದ್ದರು. ಇದೇ ವೇಳೆ ಪ್ರತಿ ಎರಡು ಗಂಟೆಗೊಮ್ಮೆ ಮಗುವಿಗೆ ನಾನು ಎದೆಹಾಲು ಕುಡಿಸಬೇಕು. ಕಲರ್ಸ್​ಕನ್ನಡ ವಾಹಿನಿ ನನಗೆ ಅದಕ್ಕೆ ಅವಕಾಶ ಮಾಡಿಕೊಟ್ಟಿದೆ. ಅದಕ್ಕೆ ಧನ್ಯವಾದ ಸಲ್ಲಿಸುತ್ತೇನೆ. ಇಲ್ಲದಿದ್ದರೆ ರಿಯಾಲಿಟಿ ಷೋನಲ್ಲಿ ಬರಲು ಆಗುತ್ತಿರಲಿಲ್ಲ ಎಂದಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.