ಬಿಗ್ ಬಾಸ್ ಮನೆಯಿಂದ ಹೊರಬಂದ ಒಂದೇ ವಾರದಲ್ಲಿ ಗಂಡನಿಗೆ ಡಿವೋರ್ಸ್ ಕೊಟ್ಟ ನಟಿ

 | 
Jjj
ಸಿನಿಮಾಗಳಲ್ಲಿ ನಟ ನಟಿಯರ ಲೈಫ್ ಎಷ್ಟು ಚಂದವೋ ಅಷ್ಟು ನಿಜಬದುಕಿಲ್ಲ. ಹೌದು ಇತ್ತೀಚೆಗೆ ಬಿಗ್ ಬಾಸ್ ಮನೆಗೆ ಹೋಗಿಬಂದ ಧಾರಾವಾಹಿ ನಟಿ ಇದೀಗ ಗಂಡನಿಂದ ದೂರವಾಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಮುಕ್ತವಾಗಿ ಬೇರೊಬ್ಬ ವ್ಯಕ್ತಿಯನ್ನು ಸ್ನೇಹಿತನನ್ನಾಗಿ ಮಾಡಿಕೊಂಡಿದ್ದೇ ಗಂಡನ ಕೋಪಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಇದೀಗ ಗಂಡನಿಂದ ಡಿವೋರ್ಸ್ ಕೇಳಲಾಗಿದೆ ಎಂಬ ವಿವಾದ ಹರಡಿದ್ದು, ಇದಕ್ಕೆ ಸ್ವತಃ ನಟಿಯೇ ಉತ್ತರ ನೀಡಿದ್ದಾರೆ.
ದಕ್ಷಿಣ ಭಾರತದ ಮಲೆಯಾಳಂ ಸಿನಿಮಾ ಮತ್ತು ಧಾರಾವಾಹಿ ನಟಿಯಾಗಿರುವ ವೀಣಾ ನಾಯರ್ ಅವರು ತಮ್ಮ ವೈಯಕ್ತಿಕ ಜೀವನ, ಮಗನ ವಿಚಾರ ಮತ್ತು ಇತರ ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ತಮ್ಮ ಪತಿಯಿಂದ ದೂರವಾಗಿ ವಾಸ ಮಾಡುತ್ತಿದ್ದರೂ ಕಾನೂನುಬದ್ಧವಾಗಿ ವಿಚ್ಛೇದನ ಪಡೆದಿಲ್ಲ ಎಂದು ಆನ್‌ಲೈನ್ ಮಲಯಾಳಿ ಮನೋರಂಜನಾ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ವಿಷಯ ತಿಳಿಸಿದ್ದಾರೆ.
ನನ್ನ ಮಗ ತುಂಬಾ ಸಂತೋಷವಾಗಿದ್ದಾನೆ. ಅವನು ನಮ್ಮಿಬ್ಬರನ್ನೂ ಮಿಸ್ ಮಾಡಿಕೊಳ್ಳುತ್ತಿಲ್ಲ. ಅವನ ತಂದೆ ಬಂದಾಗ ಅವರ ಜೊತೆ ಹೊರಗೆ ಹೋಗುತ್ತಾನೆ. ನಾನು ಒಬ್ಬ ತಾಯಿಯ ಪ್ರೀತಿಯನ್ನು ಮಾತ್ರ ಕೊಡಬಲ್ಲೆ. ತಂದೆಯ ಪ್ರೀತಿ ಕೊಡಲು ಸಾಧ್ಯವಿಲ್ಲ. ಅದು ಅವನಿಗೆ ಅವರಪ್ಪನ ಮೂಲಕವೇ ಸಿಗುತ್ತಿದೆ', ಎಂದು ವೀಣಾ ನಾಯರ್ ಹೇಳಿದರು. ನಮ್ಮಿಬ್ಬರ ನಡುವಿನ ಸಮಸ್ಯೆಯಿಂದ ದೂರವಾಗಿದ್ದೇವೆ ಮತ್ತು ಅದು ನನ್ನ ಮಗನ ಮೇಲೆ ಪರಿಣಾಮ ಬೀರಬಾರದು ಎಂದು ನಾನು ಬಯಸುತ್ತೇನೆ ಎಂದು ಹೇಳಿದರು. ಬಿಗ್‌ಬಾಸ್ ತಮ್ಮ ದಾಂಪತ್ಯ ಜೀವನದ ಮೇಲೆ ಪರಿಣಾಮ ಬೀರಿದೆ ಎಂಬ ವದಂತಿಗಳನ್ನು ನಿರಾಕರಿಸಿದರು.
ತಾನು ಎದುರಿಸುತ್ತಿರುವ ಬಾಡಿ ಶೇಮಿಂಗ್ ಬಗ್ಗೆಯೂ ವೀಣಾ ಮುಕ್ತವಾಗಿ ಮಾತನಾಡಿದರು. ಇಂತಹ ಕಾಮೆಂಟ್‌ಗಳು ಸಾಮಾನ್ಯವಾಗಿ ಕೇಳಿಬರುತ್ತವೆ. ಹೇಳುವವರು ಹೇಳುತ್ತಲೇ ಇರುತ್ತಾರೆ. ಮೊದಲು ಕೆಲವರು ತಮಾಷೆಯಾಗಿ ಕೇಳುತ್ತಿದ್ದರು, ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಬಹಿರಂಗವಾಗಿ ಕೇಳಲು ಪ್ರಾರಂಭಿಸಿದ್ದಾರೆ. ತೂಕ ಹೆಚ್ಚಾಗಿದೆ ಎಂದು ನನಗೆ ಯಾವುದೇ ಆರೋಗ್ಯ ಸಮಸ್ಯೆಗಳಿಲ್ಲ. ನಾನು ಚಿಕ್ಕಂದಿನಿಂದಲೂ ಹೀಗೆಯೇ ಇದ್ದೇನೆ. 
ಎರಡು ಮೂರು ವರ್ಷಗಳ ಹಿಂದೆ 20 ಕೆಜಿ ತೂಕ ಇಳಿಸಿಕೊಂಡಾಗ ನನ್ನನ್ನು ಸ್ವಲ್ಪ ತೂಕ ಕಡಿಮೆಯಾಗಿ ಎಲ್ಲರೂ ನೋಡಿರಬಹುದು. ಶಾಲೆಯಲ್ಲಿ ಓದುವಾಗ ತೂಕದ ಕಾರಣದಿಂದ ನನ್ನನ್ನು ಕೀಟಲೆ ಮಾಡುತ್ತಿದ್ದರು. ಹೇಳುವವರು ಹೇಳಲಿ ಬಿಡಿ, ಇದಕ್ಕೆ ನಾನು ಯಾವುದೇ ತಲೆ ಕೆಡಿಸಿಕೊಳ್ಳದೇ ಮುಂದೆ ಹೋಗುವುದರ ಬಗ್ಗೆ ಆಲೋಚನೆ ಮಾಡುತ್ತೇನೆ ಎಂದು ವೀಣಾ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.