ವಿಷ್ಣುವರ್ಧನ್ ಜೊತೆ ನಟಿಸಿದ ನಟಿಗೆ ವಿಚಿತ್ರ ಖಾಯಿಲೆ, ಯೌವನದಲ್ಲಿ ಆದ ಯಾವ ವಿಚಾರವೂ ನೆನಪಿಲ್ಲವಂತೆ

 | 
Js
ಕನ್ನಡ, ತೆಲುಗು, ತಮಿಳು ಸೇರಿದಂತೆ ಬಹುಭಾಷಾ ನಟಿಯಾಗಿ ಜನಪ್ರಿಯತೆ ಪಡೆದು ಏಕಾಏಕಿ ಚಿತ್ರರಂಗದಿಂದ ಕಣ್ಮರೆಯಾದ ನಟಿಯರು ಬಹುಸಂಖ್ಯೆಯಲ್ಲಿದ್ದಾರೆ. ಕೆಲವರು ಈಗೀಗ ಧಾರಾವಾಹಿಗಳ ಮೂಲಕ ಕಂಬ್ಯಾಕ್‌ ಮಾಡುತ್ತಿದ್ದರೆ, ಇನ್ನೂ ಕೆಲವರು ಸಂಪೂರ್ಣವಾಗಿ ತೆರೆಯ ಹಿಂದೆ ಸರಿದಿದ್ದಾರೆ. ಈ ಪೈಕಿ ಸಿಂಹಾದ್ರಿಯ ಸಿಂಹ ಸಿನಿಮಾ ಖ್ಯಾತಿ ನಟಿ ಭಾನುಪ್ರಿಯಾ ಕೂಡ ಒಬ್ಬರು.
ಸ್ನೇಹಿತರೇ...ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯೂ ಸೇರಿದಂತೆ 150ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಭಾನುಪ್ರಿಯಾ ಇದ್ದಕ್ಕಿದ್ದಂತೆ ತೆರೆಮರೆಗೆ ಸರಿದರು. ನೃತ್ಯ ಹಾಗೂ ನಟನೆ ಎರಡಲ್ಲೂ ಸೈ ಎನಿಸಿಕೊಂಡು ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿಕೊಂಡು ಬಹುಬೇಡಿಕೆಯ ನಟಿಯಾಗಿದ್ದ ಭಾನುಪ್ರಿಯಾ ಅವರಿಗೆ ಏನಾಯ್ತು? ಯಾಕೆ ತೆರೆ ಮೇಲೆ ಬರುತ್ತಿಲ್ಲ? ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ? ಎನ್ನುವ ಪ್ರಶ್ನೆ ಅನೇಕರಲ್ಲಿ ಕಾಡಿತ್ತು. ಆದರೆ ಈವರೆಗೂ ಅವರ ಆಪ್ತರನ್ನು ಬಿಟ್ಟು ನಟಿ ಭಾನುಪ್ರಿಯಾ ಬದುಕಿನಲ್ಲಿ ನಡೆದ ದುರಂತದ ಬಗ್ಗೆ ಈವರೆಗೂ ಯಾರಿಗೂ ತಿಳಿದಿರಲಿಲ್ಲ. ಇದೀಗ ಈ ವಿಚಾರ ಬೆಳಕಿಗೆ ಬಂದಿದೆ.
ಹೌದು ಸ್ನೇಹಿತರೇ...ನಟಿ ಭಾನುಪ್ರಿಯಾ 26 ವರ್ಷಗಳ ಹಿಂದೆ ಸಿನಿಮಾಟೋಗ್ರಫರ್ ಆದರ್ಶ್ ಕೌಶಲ್ ಎನ್ನುವವರನ್ನು ಮದುವೆ ಆಗಿದ್ದರು. ಈ ದಂಪತಿಗೆ ಒಬ್ಬಳು ಮಗಳು ಕೂಡ ಇದ್ದಾಳೆ. ಅನ್ಯೋನ್ಯವಾಗಿದ್ದ ಈ ಜೋಡಿ ಏಕಾಏಕಿ ಡಿವೋರ್ಸ್ ಪಡೆದು ದೂರಾಗಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡಿತ್ತು. ಇದು ಎಷ್ಟರ ಮಟ್ಟಿಗೆ ಸುಳ್ಳು? ಸತ್ಯ? ಎನ್ನುವುದು ಯಾರಿಗೂ ಗೊತ್ತಿರಲಿಲ್ಲ. ಆದರೆ ನಟಿ ಭಾನುಪ್ರಿಯಾ ಬಾಳಲ್ಲಿ ಸಹಿಸಿಕೊಳ್ಳಲಾದ ಆಘಾತವೊಂದು ನಡೆದು ಹೋಗಿದೆ.
ಸ್ನೇಹಿತರೇ...ಭಾನುಪ್ರಿಯಾ ಅವರ ಪತಿ ಆದರ್ಶ್ ಕೌಶಲ್ 2018ರಲ್ಲಿ ಹೃದಯಾಘಾತದಿಂದ ನಿಧನರಾದರು. ಪತಿಯ ಸಾವಿನ ಬಳಿಕ ಭಾನುಪ್ರಿಯಾ ಖಿನ್ನತೆಗೆ ಜಾರಿದ್ದರು. ಇದೇ ನೋವಿನಲ್ಲೇ ಸುಮಾರು ಏಳು ವರ್ಷಗಳನ್ನು ಕಳೆದಿರುವ ನಟಿ ಇದೀಗ ನೆನಪಿನ ಶಕ್ತಿಯನ್ನೇ ಕಳೆದುಕೊಂಡಿದ್ದು, ಯಾರನ್ನೂ ಗುರುತಿಸುವ ಹಂತದಲ್ಲಿ ಇಲ್ಲ ಎನ್ನುವ ಆಘಾತಕಾರಿ ವಿಚಾರ ತಿಳಿದು ಬಂದಿದೆ. ನಟಿ ಇತರ ಆರೋಗ್ಯ ಸಮಸ್ಯೆಯಿಂದ ಕೂಡ ಬಳಲುತ್ತಿದ್ದು, ನೆನಪಿನ ಶಕ್ತಿ ಸಂಪೂರ್ಣವಾಗಿ ಕುಂದಿದೆ ಎನ್ನಲಾಗಿದೆ.
ಒಟ್ಟಿನಲ್ಲಿ ಹೇಳುವುದಾದರೆ ಈ ವಿಚಾರ ತಿಳಿಯುತ್ತಿದ್ದಂತೆ ಭಾನುಪ್ರಿಯಾ ಅಭಿಮಾನಿಗಳು ತೀವ್ರ ಬೇಸರ ವ್ಯಕ್ತಪಡಿಸಿದ್ದು, ನಟಿ ಆದಷ್ಟು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದಾರೆ. ಇನ್ನು ನಟಿ ಭಾನುಪ್ರಿಯಾ ಕನ್ನಡದ ರಸಿಕ, ದೇವರ ಮಗ, ಸಿಂಹಾದ್ರಿಯ ಸಿಂಹ, ಕದಂಬ ಹಾಗೂ ಮೇಷ್ಟ್ರು ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಆದಷ್ಟು ಬೇಗನೆ ಗುಣಮುಖರಾಗಲಿ ಎಂದು ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.