ವಯಸ್ಸೇ ಆಗದ ನ ಟಿ ಅಂದರೆ ಅದು ಛಾಯಾ ಸಿಂಗ್;

 | 
Je
ಛಾಯಾ ಸಿಂಗ್‌ ಹೆಸರು ಕನ್ನಡರಿಗೆ ಹೊಸದೇನಲ್ಲ. ಸಿನಿಮಾ ಸೇರಿ ಕಿರುತೆರೆಯಲ್ಲಿಯೂ ಹೆಸರು ಮಾಡಿದ್ದಾರೆ. ದಶಕಗಳಿಂದ ಹಲವು ಭಾಷೆಗಳಲ್ಲಿ ಹೆಸರು ಮಾಡಿದ್ದಾರೆ ಛಾಯಾ. ಇದೀಗ ಬಹುವರ್ಷಗಳ ಬಳಿಕ ಅಮೃತಧಾರೆ ಧಾರಾವಾಹಿ ಮೂಲಕ ಮತ್ತೆ ಕನ್ನಡ ಕಿರುತೆರೆಯ ಪ್ರೇಕ್ಷಕರನ್ನು ಮೋಡಿ ಮಾಡುತ್ತಿದ್ದಾರೆ. ಅಚ್ಚರಿಯ ವಿಚಾರ ಏನೆಂದರೆ ಇವರ ಪತಿ ಕೂಡ ಸಿನಿಮಾದವರು.
ಕನ್ನಡ ಸಿನಿಮಾ ಮತ್ತು ಕಿರುತೆರೆಗೆ ಛಾಯಾ ಸಿಂಗ್‌ ಹೊಸಬರಲ್ಲ. ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಬಹುವರ್ಷಗಳ ಬಳಿಕ ಕನ್ನಡ ಕಿರುತೆರೆಗೆ ಅವರ ಆಗಮನವಾಗಿದೆ. ಅದೂ ಅಮೃತಧಾರೆ ಅನ್ನೋ ಧಾರಾವಾಹಿ ಮೂಲಕ. ಕನ್ನಡ ಕಿರುತೆರೆಯಲ್ಲೀಗ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆ ಧಾರಾವಾಹಿಯದ್ದೇ ಮಾತು. ಭೂಮಿಕಾ ಪಾತ್ರ ನಿರ್ವಹಿಸುತ್ತಿರುವ ಛಾಯಾ ಸಿಂಗ್‌ ಅವರೇ ಎಲ್ಲರ ಆಕರ್ಷಣೆ. ಗೌತಮ್‌ ದಿವಾನ್‌ ಪಾತ್ರಧಾರಿ ರಾಜೇಶ್‌ ನಟರಂಗ್‌ ಸಹ ಇಷ್ಟವಾಗ್ತಾರೆ.
ಮೊದಲಿಗೆ ಛಾಯಾ ಸಿಂಗ್‌ ಮೂಲತಃ ತಮಿಳುನಾಡಿನವರು. ಆದರೂ ಕನ್ನಡದಿಂದಲೇ ಬಣ್ಣದ ಲೋಕಕ್ಕೆ ಅವರ ಪ್ರಯಾಣ ಆರಂಭವಾಗಿದ್ದು. ಮೂಲತಃ ರಜಪೂತ್ ಮನೆತನಕ್ಕೆ ಸೇರಿರುವ ಇವರು 2000ರಲ್ಲಿ ತೆರೆಗೆ ಬಂದ ಮುನ್ನುಡಿ ಸಿನಿಮಾ ಮೂಲಕ ಸಿನಿಮಾ ಲೋಕಕ್ಕೆ ಪದಾರ್ಪಣೆ ಮಾಡಿದ ಛಾಯಾ ಸಿಂಗ್‌ ರಜಪೂತ್‌, ಕನ್ನಡದ ಜತೆಗೆ ತೆಲುಗು, ತಮಿಳು, ಮಲಯಾಳಂ ಸಿನಿಮಾಗಳಲ್ಲಿಯೂ ಬಣ್ಣ ಹಚ್ಚಿದ್ದಾರೆ. 
ಹೀಗೆ ಸಿನಿಮಾಗಳ ಜತೆಗೆ ಕಿರುತೆರೆಗೆ ಹೊರಳಿದ ಛಾಯಾ ಹಲವು ಭಾಷೆಗಳ ಸೀರಿಯಲ್‌ಗಳಲ್ಲಿಯೂ ನಟಿಸಿದ್ದಾರೆ. 2012ರಲ್ಲಿ ಕನ್ನಡದಲ್ಲಿ ಸರೋಜಿನಿ, ಪ್ರೇಮ ಕಥೆಗಳು ಸೀರಿಯಲ್‌ಗಳಲ್ಲಿ ನಟಿಸಿದ್ದರು. ಅದೇ ವರ್ಷ ಕುಣಿಯೋಣು ಬಾರಾ ರಿಯಾಲಿಟಿ ಶೋದ ತೀರ್ಪುಗಾರರೂ ಆದರು. ಹಾಲು ಜೇನು, ನಾನು ನೀನು ಶೋದಲ್ಲಿಯೂ ಕಾಣಿಸಿಕೊಂಡರು. ಅಲ್ಲಿಂದ ಸುದೀರ್ಘ ದಿನಗಳ ಕಾಲ ಕನ್ನಡದಿಂದ ದೂರವೇ ಉಳಿದರು. 
ತಮಿಳು, ತೆಲುಗು ಸೀರಿಯಲ್‌ಗಳಲ್ಲಿ ಸಕ್ರಿಯರಾದ ಛಾಯಾ, ಅದೇ ಇಂಡಸ್ಟ್ರಿಯಲ್ಲಿ ಸಿನಿಮಾ ಮತ್ತು ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದ ಕೃಷ್ಣ ಅವರ ಭೇಟಿಯಾಯಿತು. ಮೂಲತಃ ನೋಯ್ಡಾದವರಾದ ಕೃಷ್ಣ ತಮಿಳಿನ ಹಲವು ಸಿನಿಮಾ, ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ.ಸಹಜ ಪರಿಚಯ ಸ್ನೇಹವಾಗಿ, ಸ್ನೇಹ ಸಲುಗೆಗೆ ತಿರುಗಿ, ಆ ಸಲುಗೆ ಪ್ರೀತಿಯಾಗಿ ಮೊಳಕೆಯೊಡೆದು ಮದುವೆಯಲ್ಲಿ ಒಂದಾಯಿತು. 
2012ರಲ್ಲಿ ಈ ಜೋಡಿ ಸಪ್ತಪದಿ ತುಳಿಯುವ ಮೂಲಕ  ಸತಿಪತಿಗಳಾಗಿದ್ದಾರೆ. ಇದೀಗ ಅಮೃತಧಾರೆ ಧಾರವಾಹಿಯಲ್ಲಿ ಛಾಯ ಸಿಂಗ್ ನಟಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.