ಬಿಗ್ ಬಾಸ್ ಮನೆಯಲ್ಲಿ ಕಾಮಿಡಿ ಮಾಡುತ್ತಿದ್ದ ಕಲಾವಿದ ಒಮ್ಮೆಲೇ ಇ ಹಲೋಕ
ಕಳೆದ ವರ್ಷ ಚಿತ್ರರಂಗ ಹಲವರು ಕಲಾವಿದರನ್ನು ಕಳೆದುಕೊಂಡಿದೆ. ಹೌದು ಈಗ ಅದೇ ದಾರಿಯಲ್ಲಿ ಬಿಗ್ಬಸ್ ಸ್ಪರ್ಧಿಯಾಗಿದ್ದ ಬೋಂಡಾ ಮಣಿ ಸಾಗಿದ್ದಾರೆ. ಹಾಸ್ಯ ನಟ, ಒಳ್ಳೆಯ ಹೆಸರು ಪಡೆದಿರುವ ನಟ ಇನ್ನಿಲ್ಲವಾಗಿದ್ದಾರೆ. ಜನಪ್ರಿಯ ಹಾಸ್ಯನಟ ಬೋಂಡಾ ಮಣಿ ಮೂತ್ರಪಿಂಡ ಸಂಬಂಧಿ ಕಾಯಿಲೆಯಿಂದ ಶನಿವಾರ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 60 ವರ್ಷ ವಯಸ್ಸಾಗಿತ್ತು.
ಮಣಿ ಅವರು ಚೆನ್ನೈನ ಪೊಝಿಚಲೂರ್‌ನಲ್ಲಿರುವ ತಮ್ಮ ನಿವಾಸದಲ್ಲಿ ಮೂರ್ಛೆ ಹೋದರು ಕುಟುಂಬ ಸದಸ್ಯರು ಕೂಡಲೇ ಅವರನ್ನು ಕ್ರೋಮ್‌ಪೇಟೆಯ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟೋತ್ತಿಗಾಗಲೇ ಮಣಿ ನಿಧನ ಹೊಂದಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಮಣಿ ಅವರ ಚಿಕಿತ್ಸೆಗೆ ಚಿತ್ರರಂಗದ ಹಿರಿಯ ಹಾಗೂ ಖ್ಯಾತ ನಟರು ಆರ್ಥಿಕ ಸಹಾಯ ಮಾಡಿದ್ದಾರೆ.
ಅವರ ಪಾರ್ಥಿವ ಶರೀರವನ್ನು ಪೊಝಿಚಾಲೂರಿನ ಅವರ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿದ್ದು ಸಂಜೆ 5ರ ಸುಮಾರಿಗೆ ಕ್ರೋಂಪೇಟೆಯಲ್ಲಿರುವ ಚಿತಾಗಾರದಲ್ಲಿ ಅಂತಿಮ ವಿಧಿವಿಧಾನಗಳು ನಡೆಯಲಿವೆ ಎಂದು ಕುಟುಂಬ ಮೂಲಗಳು ಮಾಹಿತಿ ನೀಡಿದೆ. ಮೃತರು ಪತ್ನಿ ಮಾಲತಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಬೋಂಡಾ ಮಣಿ ತಮಿಳು ಚಿತ್ರರಂಗದ ಜನಪ್ರಿಯ ಹಾಸ್ಯನಟರಾಗಿದ್ದರು. 1991 ರಲ್ಲಿ ಬಿಡುಗಡೆಯಾದ ನಟ ಭಾಗ್ಯರಾಜ್ ಅವರ ‘ಪೌನು ಪೌನುತನ್’ ಚಿತ್ರದ ಮೂಲಕ ಬೋಂಡಾ ಮಣಿ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಪೊನ್ವಿಲಾಂಗು, ಪೊಂಗಲೋ ಪೊಂಗಲ್, ಸುಂದರ ಟ್ರಾವೆಲ್ಸ್, ಮರುದಮಲೈ, ವಿನ್ನರ್, ವೇಲಾಯುಧಂ, ಜಿಲ್ಲಾ, ವಸೀಕರ ಸೇರಿದಂತೆ 270 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಹಾಸ್ಯ ನಟ ವಡಿವೇಲು ಅವರೊಂದಿಗೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.