ಸುಬ್ರಹ್ಮಣ್ಯದಲ್ಲಿದೆ ಬೃ ಹತ್ ವಾಸುಕಿ ಸರ್ಪದ ಗುಹೆ; ಒಳಗೆ ಹೋದವರು ಮತ್ತೆ ಬರ ಲ್ಲ

 | 
Uu

ಕರ್ನಾಟಕದ ಪ್ರಮುಖ ಮತ್ತು ಭೇಟಿ ನೀಡಲೇಬೇಕಾದ ದೇವಾಲಯಗಳಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಾಲಯವು ತನ್ನ ಆಧ್ಯಾತ್ಮಿಕ ಪ್ರಾಮುಖ್ಯತೆಯಿಂದಾಗಿ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ. ಕುಕ್ಕೆ ಸುಬ್ರಹ್ಮಣ್ಯವು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ಗ್ರಾಮದಲ್ಲಿರುವ ಹಿಂದೂ ದೇವಾಲಯವಾಗಿದೆ.

 ಈ ದೇವಾಲಯವು ನಾಗದೋಷಕ್ಕೆ ಸಂಬಂಧಿಸಿದ ಆಚರಣೆಗಳಿಗೆ ಹೆಸರುವಾಸಿಯಾಗಿದೆ ಮತ್ತು ಈ ದೇವಾಲಯಕ್ಕೆ ಸಂಬಂಧಿಸಿದ ಪುರಾಣಗಳು ತರ್ಕವನ್ನೇ ಮೀರಿಸುವಂತಹುದ್ದಾಗಿದೆ. ಬನ್ನಿ, ಇಂದಿನ ಓದಿನಲ್ಲಿ 5,000 ವರ್ಷಕ್ಕೂ ಅಧಿಕ ಹಿನ್ನೆಲೆಯನ್ನು ಹೊಂದಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿರುವ ಬಿಲದ್ವಾರದ ಬಗ್ಗೆ ಕೇಳಿದ್ರೆ ಅಚ್ಚರಿ ಪಡ್ತೀರಿ.

ಈ ದೇವಾಲಯವು ಶಿವ ಪಾರ್ವತಿಯ ಪುತ್ರ ಕಾರ್ತಿಕೇಯನಿಗೆ ಸಮರ್ಪಿತವಾಗಿದ್ದು ಇಲ್ಲಿ ಕಾರ್ತಿಕೇಯನನ್ನು ಸುಬ್ರಹ್ಮಣ್ಯ ಎಂದು ಪೂಜಿಸಲಾಗುತ್ತದೆ. ದೈವಿಕ ಸರ್ಪ ವಾಸುಕಿ ಮತ್ತು ಇತರೆ ಸರ್ಪಗಳು ಗರುಡನಿಂದ ಬೆದರಿಕೆಗೆ ಒಳಗಾದಾಗ ಸುಬ್ರಹ್ಮಣ್ಯನ ಆಶೀರ್ವಾದದೊಂದಿಗೆ ಆಶ್ರಯ ಪಡೆದಿರುವ ಕಥೆಯನ್ನು ಇದು ಹೇಳುತ್ತದೆ.

ಸರ್ಪದೋಷ ಎಂದಾಗ ಪ್ರತಿಯೊಬ್ಬರಲ್ಲೂ ಕುಕ್ಕೆ ಸುಬ್ರಹ್ಮಣ್ಯ ನೆನಪಾಗುತ್ತದೆ.ಇಲ್ಲಿ ಇರುವ ನಿಗೂಢವಾದ ಬಿಲದ್ವಾರವು ಎಲ್ಲರ ಕಣ್ಣು ಸೆಳೆಯುವಂತಿದೆ.ಕಷ್ಯಪ ಮಹಾ ಮುನಿ ಎನ್ನುವವರಿಗೆ ವಿನತ ಹಾಗೂ ಕದ್ರು ಸೇರಿ ಇಬ್ಬರೂ ಹೆಂಡತಿಯರು.ವಿನತನ  ಮಗು ಗರುಡ, ಕದ್ರುವಿನ ಮಕ್ಕಳು ಸರ್ಪಗಳು. ಒಂದು ದಿನ ಇದ್ದಕ್ಕಿದ್ದಂತೆ ಗರುಡ ಹಾಗೂ ಸರ್ಪಗಳಿಗೆ ಕದನ ಪ್ರಾರಂಭವಾಗುತ್ತದೆ. 

ಈ ಸಂದರ್ಭದಲ್ಲಿ ಗರುಡ ಸಹಸ್ರಾರು ಹಾವುಗಳನ್ನು ತಿನ್ನಲು ಪ್ರಾರಂಭಿಸುತ್ತಾನೆ.ಸರ್ಪಗಳು  ತಪ್ಪಿಸಿಕೊಳ್ಳಲು ಹಲವಾರು ಕಡೆಗಳಲ್ಲಿ ಅಡಗಿಕೊಳ್ಳುತ್ತಾರೆ. ಸರ್ಪಗಳ ರಾಜನಾದ ವಾಸುಕಿಯು ಸಹ್ಯಾದ್ರಿ ಮಡಿಲಿನ ಧಾರಾ ನದಿಯ ಪಕ್ಕದಲ್ಲಿರುವ ಗುಹೆಯೊಂದರಲ್ಲಿ ಅಡಗಿಕೊಳ್ಳುತ್ತಾನೆ ಆ ಗುಹೆ ಬಿಲದ್ವಾರ ಗುಹೆಯಾಗಿದೆ .

ಅದೇ ರೀತಿ ಬಿಲದ್ವಾರ ಗುಹೆಯ ವಿಷಯ ಹೇಳುವುದಾದರೆ ಗುಹೆಯು ಬಹಳ ಕತ್ತಲಿನಿಂದ ಕೂಡಿದ್ದು ಎರಡು ದಾರಿಯನ್ನು ಹೊಂದಿದೆ. ಒಂದು ಉತ್ತರಕಾದರೇ ಇನ್ನೊಂದು ದಕ್ಷಿಣಕ್ಕೆ. ಉತ್ತರಕ್ಕೆ ಹೋಗುವ ದಾರಿಯಲ್ಲಿ ಸಾಗಿದರೆ ಕಾಶಿಗೆ ಹೋಗುತ್ತದೆ ಎಂಬುದು ಸ್ಥಳ ಪುರಾಣವಾಗಿದೆ. ನೂರಾರು ವರ್ಷಗಳ ಹಿಂದೆ ಜನರು ಇಲ್ಲಿಂದಾಗಿಯೇ ಕಾಶಿಗೆ ತೆರಳುತ್ತಿದ್ದರಂತೆ. ಹೀಗೇನೆ ದಕ್ಷಿಣದ ದಾರಿಯಲ್ಲಿ ಸುಮಾರು ನೂರು ಮೀಟರ್ ನಷ್ಟು ದೂರ ಸಾಗಬಹುದು. 

ಗುಹೆಯ ಹಿಂಭಾಗದಲ್ಲಿ ವಾಸುಕಿ ಪುಷ್ಪೋದ್ಯಾನ ಎಂಬ ಉದ್ಯಾನವನವು ಇದೆ. ಇಲ್ಲಿ ವಾಸುಕಿ ಮತ್ತು ಗರುಡ ಕಾದಾಡುವ ಸಂದರ್ಭದ ಕೆತ್ತನೆಯನ್ನು ಕಾಣಬಹುದು. ಬಿಲದ್ವಾರ ಗುಹೆಯು ನೈಸರ್ಗಿಕವಾಗಿ ನಿರ್ಮಾಣವಾಗಿದ್ದು ಪ್ರವೇಶದ್ವಾರ ಹಾಗೂ ನಿರ್ಗಮದ ದ್ವಾರವನ್ನು ಹೊಂದಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.