ಯಜಮಾನನ ಕಷ್ಟಕಂಡು ದಿನಲೂ ಸಾವಿ ರೂಪಾಯಿ ತಂದು ಕೊಡುತ್ತಿದ್ದ ಬೆಕ್ಕು

 | 
ರ್

ಇತ್ತೀಚಿನ ದಿನಗಳಲ್ಲಿ ಮನೆಯಲ್ಲಿ ಬೆಕ್ಕು, ನಾಯಿಗಳನ್ನು ಸಾಕುವುದು ಸಾಮಾನ್ಯ. ಅವು  ಬಹು ಬೇಗ ಮನೆ ಮಂದಿಯಂತೆ ಮನೆಯ ಜನರಿಗೆ ಹೊಂದಿಕೊಂಡು ಬಿಡುತ್ತದೆ.ಇಲ್ಲೊಂದು ಬೆಕ್ಕು ಪ್ರತಿದಿನ ತನ್ನ ಯಜಮಾನನಿಗೆ ಸಾಕಷ್ಟು ಹಣ ತಂದು ಕೊಡುತ್ತಲೇ ಇತ್ತು,ಆದರೆ ಸತ್ಯ ಗೊತ್ತಾಗಿ ಎಲ್ಲರೂ ಶಾಕ್ ಆದ್ರು.ಹೌದು ಇದು ಅಚ್ಚರಿ ಆದ್ರೂ ಸತ್ಯ.

ಅಮೆರಿಕಾದ ಡೌನ್ ಟೌನ್ ಪ್ರದೇಶದಲ್ಲಿ ಮ್ಯಾಗ್ಡೊನಾರ್ ಸ್ಟುವರ್ಡ್ ಎಂಬ ವ್ಯಕ್ತಿ ಒಂದು ದೊಡ್ಡ ಮಾರ್ಕೆಟಿಂಗ್ ಕಂಪನಿಯ ಒಡೆಯನಾಗಿರುತ್ತಾನೆ. ಒಂದು ದಿನ ಆತ ಆಫಿಸ್ ಗೆ ಹೋಗುವಾಗ ರಸ್ತೆಯ ಪಕ್ಕದಲ್ಲಿ ಒಂದು ಬೆಕ್ಕು ಕಾಣಿಸುತ್ತದೆ ಅದು ನೋಡುವುದಕ್ಕೆ ಸಾಮಾನ್ಯವಾಗಿ ಸಾಧಾರಣ ಬೆಕ್ಕಿನಂತೆ ಸುಂದರವಾಗಿ ಮುದ್ದಾಗಿ ನೋಡಿದೊಡನೆ ಸೆಳೆಯುವಂತಿರುತ್ತದೆ. 

ಆದರೆ ಅದು ಇದು ಎಲ್ಲಾ ಬೆಕ್ಕಿನಂತೆ ಸಾಧಾರಣವಾಗಿ ರಸ್ತೆಯ ಮೇಲು ಓಡಾಡುವಂತಹ ಸಾಧಾರಣ ಬೆಕ್ಕಾಗಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದ ಈ ಬಿಸಿನೆಸ್ ಮ್ಯಾನ್ ಕಾಲನ್ನು ಈ ಬೆಕ್ಕು ಸುತ್ತ ತೊಡಗುತ್ತದೆ. ಆಗ ಆ ಬೆಕ್ಕನ್ನು ನೋಡಿ ಅದರ ಮೇಲೆ ಕರುಣೆ ಬಂದು ಅದಕ್ಕೆ ಸ್ವಲ್ಪ ಆಹಾರ ವನ್ನು ಇಟ್ಟು ತನ್ನ ಪಾಡಿಗೆ ತಾನು ಆಫೀಸ್ ಗೆ ಹೋಗು ತ್ತಾನೆ. ಹೀಗೆ ಎರಡು ದಿನಗಳ ಕಾಲ ಸ್ಟುವರ್ಡ್ ಗೆ ಈ ಬೇಕು ಅವನು ಆಫೀಸ್ ಗೆ ಹೋಗುವಂತಹ ಸಮಯ ದಲ್ಲಿ ಕಾಣಿಸಿ ಕೊಳ್ಳುತ್ತಿತ್ತು. 

ಆಗ ಸ್ಟುವರ್ಡ್ ಅದಕ್ಕೆ ಆಹಾರವನ್ನುಕೊಟ್ಟು ಹೋಗುತ್ತಿದ್ದ ಆದರೆ ಒಂದು ದಿನ ಸ್ಟುವರ್ಡ್ ಆಫೀಸ್ ಗೆ ಹೋಗಲು ತಡವಾಗಿರುತ್ತದೆ ಅದೇ ದಿನ ಆ ಬೆಕ್ಕು ಕೂಡ ರಸ್ತೆಯ ಮೇಲೆ ಕಾಣಿಸುತ್ತದೆ ಆಗ ಬೆಕ್ಕು ತನಗಾಗಿಯೇ ಕಾಯುತ್ತಿರಬಹುದು ಎಂದು ಸ್ಟುವರ್ಡ್ ಗೆ ಅರ್ಥವಾಗುತ್ತದೆ. ಇದರಿಂದ ಸ್ಟುವರ್ಡ್ ಗೆ ಆ ಬೆಕ್ಕು ಇಷ್ಟವಾಗಿ ಅದನ್ನು ತನ್ನ ಆಫೀಸ್ ಗೆ ಕರೆದುಕೊಂಡು ಹೋಗುತ್ತಾನೆ ಆಫೀಸ್ ಗೆ ಕರೆದುಕೊಂಡು ಹೋದ ಮೇಲೆ ಆ ಬೆಕ್ಕಿಗೆ ಪ್ರತಿದಿನ ಆಹಾರವನ್ನು ನೀಡುವಂತೆ ತನ್ನ ಸ್ಟಾಫ್ ಮೆಂಬರ್ಸ್ ಗೆ ಹೇಳುತ್ತಾನೆ. 

ಆಗಿನಿಂದ ಆ ಬೆಕ್ಕು ಆಫೀಸ್ ನಲ್ಲಿ ಎಲ್ಲಾ ಕಡೆ ಸುತ್ತಾಡುತ್ತಾ ಆರಾಮಾಗಿ ಇರುತ್ತಿತ್ತು ಆ ಬೆಕ್ಕು ಮಾಡುವ ಚೇಷ್ಟಗಳನ್ನು ನೋಡಿ ಆಫೀಸ್ ನ ಸ್ಟಾಫ್ ಮೆಂಬರ್ಸ್ ಗೂ ಕೂಡ ಆ ಬೆಕ್ಕು ಇಷ್ಟವಾಗುತ್ತದೆ. ಸ್ಟುವರ್ಡ್ ಆಫೀಸ್ ಮುಗಿಸಿ ಸಂಜೆ ಮನೆಗೆ ಹೋಗುವಾಗ ಬೆಕ್ಕನ್ನು ಆಫೀಸ್ ಅಲ್ಲಿಯೇ ಬಿಟ್ಟು ಕೀಲಿ ಹಾಕಿಕೊಂಡು ಹೋಗುತ್ತಿದ್ದ. ಆ ಬೆಕ್ಕು ಆಫೀಸ್ ಮುಬಾಗಿಲಿನ ಗಾಜಿನ ಬಾಗಿಲ ಬಳಿ ಕುಳಿತು ಎಲ್ಲರನ್ನು ನೋಡುತ್ತಾ ಕಾಲ ಕಳೆಯುತ್ತಿತ್ತು.

ಅದೊಂದು ದಿನ ಸ್ಟುವರ್ಡ್ ಬೆಳಿಗ್ಗೆ ಬಂದು ಆಫೀಸ್ ಬಾಗಿಲು ತೆಗೆಯುವಾಗ ಬೆಕ್ಕಿನ ಬಳಿ ಒಂದಿಷ್ಟು ಹಣ ಬಿದ್ದಿತ್ತು. ಆಗ ಸ್ಟುವರ್ಡ್ ತನ್ನ ಸಿಬ್ಬಂದಿಗಳೆಲ್ಲ ರನ್ನು ಕರೆದು ಯಾರಾದರೂ ಹಣ ಕಳೆದುಕೊಂಡಿರೇನು ಕೇಳುತ್ತಾನೆ ಇಲ್ಲ ಎನ್ನುತ್ತಾರೆ. ಮರುದಿನ ಬೆಳಿಗ್ಗೆ ಕೂಡ ಬೆಕ್ಕಿನ ಬಳಿ ಹಣ ಕಾಣುತ್ತದೆ. ಇದರಿಂದ ಆಶ್ಚರ್ಯ ಗೊಂಡ ಸ್ಟುವರ್ಡ್ ಬೆಕ್ಕು ಕುಳಿತುಕೊಳ್ಳುವ ಬಾಗಿಲ ಬಳಿ ಸಿ ಸಿ ಕ್ಯಾಮರಾ ಒಂದನ್ನು ಅಳವಡಿಸಿ ಮರುದಿನ ಬಂದು ನೋಡಿ ಉದ್ಗಾರ ಎಳೆಯುತ್ತಾನೆ. 

ಬಾಗಿಲ ಬಳಿ ಕುಳಿತುಕೊಳ್ಳುತ್ತಿದ್ದ ಬೆಕ್ಕು ದಾರಿ ಹೋಕರನ್ನು ತನ್ನ ಆಟಗಳ ಮೂಲಕ ಬಾಗಿಲ ಬಳಿ ಕರೆದು ಚೇಷ್ಟೆ ಮಾಡಿ ನಗಿಸುತ್ತಿತ್ತು ಇದರಿಂದ ಸಂತೋಷ ಹೊಂದಿದ ಜನ  ಬಾಗಿಲ ಸಂದಿಯ ಮೂಲಕ ಬೆಕ್ಕಿಗೆ ಹಣ ನೀಡಿ ಹೋಗುತ್ತಿದ್ದರು. ನೆಗೆದು ಹಾರಿ ಕೋಪ ಗೊಂಡಂತೆ ನಟಿಸಿ ಜನರಿಂದ ಸಾಕಷ್ಟು ಹಣವನ್ನು ಪ್ರತಿದಿನ ಸಂಪಾದಿಸುತ್ತಿತ್ತು. ಈ ಬೆಕ್ಕಿನ ಮುದ್ದು ಚೇಷ್ಟೆಗಳನ್ನು ನೋಡಲು ಜನ ಸರದಿಯಲ್ಲಿ ನಿಂತು ಕಾಯುತ್ತಿದ್ದರು.

ಇದನ್ನೆಲ್ಲ ಕಂಡ ಸ್ಟುವರ್ಡ್ ಬೆಕ್ಕಿನ ಜಾಣ್ಮೆಗೆ ಮೆಚ್ಚಿ ಆ ಹಣವನ್ನು ಪ್ರಾಣಿಗಳ ಹಾಗೂ ಬಡವರ ಆಹಾರಕ್ಕಾಗಿ ಬಳಸಲು ಯೋಚಿಸುತ್ತಾನೆ. ಹಾಗೂ ಪ್ರತಿದಿನ ಬೆಕ್ಕಿನ ಜೊತೆ ಆಟವಾಡಿ ಆನಂದ ಹೊಂದಿರಿ ಎಂದು ಕಂಪನಿಯ ಮುಂದೆ ಬಾಗಿಲ ಬಳಿ ಬೋರ್ಡ್ ಒಂದು ಹಾಕುತ್ತಾನೆ. ಈ ಬೆಕ್ಕಿಗೆ ಕ್ಯಾಶ್ ನೀಫ್ ಕಿಟ್ಟಿ ಎಂದು ನಾಮಕರಣ ಮಾಡಿ ಸೋಷಿಯಲ್ ಮೀಡಿಯಾ ಗಳಲ್ಲಿ ಪರಿಚಯಿಸುತ್ತಾನೆ. ಹಾಗಾಗಿ ಈಗ ಕ್ಯಾಶ್ ನೀಫ್ ಕಿಟ್ಟಿಗೆ ಹಲವಾರು ಅಭಿಮಾನಿಗಳು ಇದ್ದಾರೆ. ಅಲ್ಲದೇ ಕ್ಯಾಶ್ ನೀಫ್ ಕಿಟ್ಟಿ ಈಗ ಸ್ಟುವರ್ಡ್ ಆಫೀಸಿನ ಖಾಯಂ ಉದ್ಯೋಗಿಗಳಲ್ಲಿ ಒಂದಾಗಿದೆ. ಹಗಲು ಸಮಯದಲ್ಲಿ ಆಫೀಸ್ ಸುತ್ತ ಮುತ್ತ ಇರುವ ಇಲಿಗಳನ್ನು ತಿಂದರೆ ರಾತ್ರಿ ಮಾತ್ರ ಜನರನ್ನು ರಂಜಿಸಿ ಹಣ ಗಳಿಸುತ್ತಿದೆ.