ನಮ್ಮಿಬ್ಬರ ನಡುವೆ ಮಕ್ಕಳೂ ಮಲಗಲ್ಲ, ನೆನಪಿರಲಿ ಪ್ರೇಮ್ ಕಣ್ಣೀರ ಕಥೆ
Sep 17, 2024, 12:11 IST
|
ನೆನಪಿರಲಿ ಪ್ರೇಮ್ ಅವರು ಚಿತ್ರರಂಗಕ್ಕೆ ಕಾಲಿಟ್ಟು ಸುಮಾರು 20 ವರ್ಷ ಕಳೆದಿದೆ. ಅನೇಕ ಯಶಸ್ವಿ ಸಿನಿಮಾಗಳನ್ನು ಅವರು ನೀಡಿದ್ದಾರೆ. ಈಗ ಅವರು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ವೀಕೆಂಡ್ ವಿತ್ ರಮೇಶ್’ಗೆ ಅತಿಥಿಯಾಗಿ ಆಗಮಿಸಿದ್ದರು. ಸಾಧಕರ ಸೀಟ್ನಲ್ಲಿ ಕುಳಿತು ಅವರು ತಮ್ಮ ಹಳೆಯ ದಿನಗಳ ಬಗ್ಗೆ ಮಾತನಾಡಿದ್ದಾರೆ. ಪತಿಯ ಕನಸು ನನಸು ಮಾಡಲು ಅವರ ಪತ್ನಿ ಜ್ಯೋತಿ ತಾಳಿಯನ್ನು ಅಡ ಇಟ್ಟಿದ್ದರು.
ಈ ವಿಚಾರವನ್ನು ಅವರು ವೇದಿಕೆ ಮೇಲೆ ಹೇಳಿಕೊಂಡು ಕಣ್ಣೀರು ಹಾಕಿದ್ದಾರೆ.ನೆನಪಿರಲಿ ಪ್ರೇಮ್ ಹಾಗೂ ಜ್ಯೋತಿ ಅವರದ್ದು ಲವ್ ಮ್ಯಾರೇಜ್. ಮೂರು ವರ್ಷ ಪ್ರೀತಿಸಿ ಮದುವೆ ಆದರು. ಇವರ ದಾಂಪತ್ಯ ಜೀವನ ಎರಡು ದಶಕಗಳನ್ನು ಪೂರೈಸಿದೆ. ಇವರ ಮಧ್ಯೆ ಇರುವ ಪ್ರೀತಿ ಎಂದಿಗೂ ಕಡಿಮೆ ಆಗಿಲ್ಲ. ಈ ವಿಚಾರದ ಬಗ್ಗೆ ನೆನಪಿರಲಿ ಪ್ರೇಮ್ ಅವರು ಮಾತನಾಡಿದ್ದಾರೆ.
2005ರಲ್ಲಿ ರಿಲೀಸ್ ಆದ ‘ನೆನಪಿರಲಿ’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರದಿಂದ ದೊಡ್ಡ ಯಶಸ್ಸು ಕಂಡರು. ರಾತ್ರೋರಾತ್ರಿ ಫೇಮಸ್ ಆದರು. ಇದರ ಜೊತೆಗೆ ಅವರು ಕಷ್ಟಗಳನ್ನು ನೋಡಿದ್ದಾರೆ. 21 ವರ್ಷದ ಹಿಂದೆ ಬೆಳಕು ಹರಿಯುವುದರೊಳಗೆ ನಾನು ದೊಡ್ಡ ಹೀರೋ ಆದೆ. ಅಲ್ಲಿಂದ ಆರಂಭವಾದ ಜರ್ನಿ ನನ್ನ ಲೈಫ್ ಏನು ಎಂದು ತೋರಿಸಿತು ಎಂದು ಪ್ರೇಮ್ ಹೇಳಿದ್ದಾರೆ. ನೆನಪಿರಲಿ ಪ್ರೇಮ್ ಅವರ ಕನಸು ನನಸಾಗಬೇಕು ಎನ್ನುವ ಕಾರಣಕ್ಕೆ ಜ್ಯೋತಿ ತಾಳಿಯನ್ನು ಅಡ ಇಟ್ಟರು. ಈ ತರಹ ಸ್ಥಿತಿ ಬರುತ್ತದೆ ಎಂದು ನಾನು ಕನಸಲ್ಲೂ ಅಂದುಕೊಂಡಿರಲಿಲ್ಲ ಎಂದಿದ್ದಾರೆ ಪ್ರೇಮ್.
ಇನ್ನು ಲವ್ಲಿ ಸ್ಟಾರ್ ಪ್ರೇಮ್ ಮತ್ತು ಜ್ಯೋತಿ ಅವರದ್ದು ಲವ್ ಮ್ಯಾರೇಜ್ ಅನ್ನೋದು ಎಲ್ಲರಿಗೂ ಗೊತ್ತು. ಲವ್ ಮಾಡುವಾಗ ಆಗಿನ ಕಾಲದಲ್ಲಿ ಫೋನ್, ಮೆಸೇಜ್ ಇರಲಿಲ್ಲ. ಇದ್ದರೂ ಇವತ್ತಿನ ಲೆವೆಲ್‌ಗೆ ಇದ್ದಷ್ಟು ದೊಡ್ಡಮಟ್ಟಕ್ಕೆ ಇರಲಿಲ್ಲ. ಪ್ರೇಮ ಪತ್ರ ಕೊಡುವ ರೂಢಿ ಇತ್ತು. ಪ್ರೇಮ ಪತ್ರದಲ್ಲಿಯೇ ಹುಡುಗಿಯನ್ನು ಇಂಪ್ರೆಸ್ ಮಾಡಬೇಕು. ನಟ ಪ್ರೇಮ್ ಕೂಡ ಜ್ಯೋತಿಯವರನ್ನು ಇಂಪ್ರೆಸ್ ಮಾಡಲೆಂದೇ ಲವ್ ಲೆಟರ್‌ನ ಇಂಗ್ಲಿಷ್‌ನಲ್ಲಿ ಬರೆದಿದ್ದರಂತೆ. ಅದರಲ್ಲಿ ಹೆಚ್ಚು ಕಡಿಮೆ ಜಾಸ್ತಿಯೇ ತಪ್ಪುಗಳಿತ್ತಂತೆ. ಅದನ್ನು ಜ್ಯೋತಿಯವರು ರಿವೀಲ್ ಮಾಡಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.