2024ಕ್ಕೆ ಮುಳುಗಲಿದೆ ದೇಶ; ಬಬಲಾದಿ ಭವಿಷ್ಯ ವಾಣಿ
ಮುಂದಿನ ದಿನಗಳಲ್ಲಿ ಏನಾಗುತ್ತದೆ ಎಂದು ಯಾರೂ ಕೂಡ ತಿಳಿದವರಿಲ್ಲ ಹಾಗಾಗಿ ಸಾಮಾನ್ಯವಾಗಿ ಭವಿಷ್ಯ ಕೇಳುವ ರೂಡಿಯಿದೆ. ಇತ್ತೀಚಿಗಷ್ಟೆ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಬಬಲಾದಿ ಸದಾಶಿವ ಮುತ್ಯಾನ ಮಠದ ಸ್ವಾಮೀಜಿ 2024ರ ಕಾಲಜ್ಞಾನ ಭವಿಷ್ಯ ನುಡಿದಿದ್ದಾರೆ. ಹೊಳೆಬಬಲಾದಿ ಮಠಾಧೀಶರು ಮತ್ತು ಕಾರ್ಣಿಕರಾದ ಸಿದ್ಧರಾಮಯ್ಯ ಹೊಳಿಮಠ ಗುರುಗಳು ಭವಿಷ್ಯ ನುಡಿದಿದ್ದು, ಈ ವರ್ಷದ ಫಲಾಫಲಗಳನ್ನು ತೆರೆದಿಟ್ಟಿದ್ದಾರೆ.
ಅಷ್ಟೇನು ಚೆನ್ನಾಗಿಲ್ಲದ ಪೂರ್ತಿಯಾಗಿ ಚೆನ್ನಾಗಿಲ್ಲ ಎನ್ನಲು ಸಾಧ್ಯವಾಗದ ಉತ್ತರಕ್ಕೆ ಬರ ಹಾಗೂ ಕೆಡುಕಿದೆ. ದೊಡ್ಡ ದೊಡ್ಡ ಮಹಾಜನರ ಯೋಗ ಅಳಿಯುವುದು. ಕುಲ, ಜಾತಿಗಳಲ್ಲಿ ಕಲಹ ಜಾಸ್ತಿ ಆಗುತ್ತದೆ. ಮಳೆ, ಬೆಳೆ, ಫಲ ಕೆಂಡಮಂಡಲ ಆಗುತ್ತದೆ. ವ್ಯಾಪಾರಸ್ಥರಿಗೆ ಮಧ್ಯಮ ಫಲ ಇದೆ.
ಬಿಸಿಲು ತಾಂಡವಾಡುತ್ತದೆ. ನೀರು ಮಾಯವಾಗುತ್ತದೆ. ಧರೆ ಹೊತ್ತಿ ಉರಿಯುತ್ತದೆ. ರಾಜಕೀಯದಲ್ಲಿ ಉತ್ತಮ ವ್ಯಕ್ತಿಗೆ ಗೆಲುವು ಆಗುತ್ತದೆ. ಆದರೆ ಗಡಿ ಕಾಯುವ ಯೋಧರಿಗೆ ನೋವು ಇದೆ. ಕಣ್ಣಿನ ಕಾಯಿಲೆಗಳು ಜಾಸ್ತಿ ಆಗುತ್ತದೆ. ಜ್ಯೇಷ್ಠ ಮಾಸದಲ್ಲಿ ಲಿಂಗ, ಸಮಾನತೆ ಎಲ್ಲರೂ ಒಂದೇ ಎನ್ನುವ ಕಾಲ ಬರುತ್ತದೆ ಎಂದು ಭವಿಷ್ಯ ನುಡಿಯಲಾಗಿದೆ.
ಅಲ್ಲಲ್ಲಿ ರಾಜಕೀಯ ಗೊಂದಲಗಳು ಉಂಟಾಗುತ್ತವೆ. ಧರ್ಮ ಧರ್ಮದ ನಡುವೆ ಕಿತ್ತಾಟ ಜಾಸ್ತಿ ಆಗುತ್ತದೆ. ಉತ್ತಮ ಅರ್ಹ ವ್ಯಕ್ತಿಯ ಮರ್ಧನ ಆಗುತ್ತೆ. ಕರ್ಮದ ಅನುಸಾರ ಫಲವನ್ನು ಕೊಡುತ್ತದೆ. ಅಧರ್ಮಿಗಳಿಗೆ ಒಳ್ಳೆಯದೇ ಆಗುತ್ತದೆ. ಆದರೆ ಮುಂದೊಂದು ದಿನ ಹಲವಾರು ಜನ ಪಶ್ಚಾತ್ತಾಪ ಪಡುವ ಸಂದರ್ಭ ಎದುರಾಗುತ್ತದೆ ಎಂದು ನುಡಿದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ