ಮನೆ ಮಗಳಿಗೆ ಲಕ್ಷ ಖರ್ಚು ಮಾಡಿ ಮದುವೆ ಮಾಡಿದರು ಕೂಡ ಆಸ್ತಿಯಲ್ಲಿ ಸಮಪಾಲು ನೀಡಬೇಕು ಎಂದ ಕೋರ್ಟ್
Oct 13, 2024, 17:48 IST
|

ಮೊದಲೆಲ್ಲಾ ಮನೆ ತುಂಬಾ ಮಕ್ಕಳಿರುತ್ತಿದ್ದರು. ಆದರೆ ಹೆಣ್ಣು ಮಕ್ಕಳು ಮದುವೆ ಆದಮೇಲೆ ಮುಗಿಯಿತು. ಮತ್ತೆ ಆಸ್ತಿ ಸುದ್ದಿಗೆ ಬರುತ್ತಿರಲಿಲ್ಲ. ಆಸ್ತಿ ಕೇವಲ ಗಂಡು ಮಕ್ಕಳ ಪಾಲಾಗಿತ್ತು. ಇದೀಗ ಕಾಲ ಬದಲಾಗಿದೆ. ಅದ್ದೂರಿಯಾಗಿ ಹೆಣ್ಣು ಮಕ್ಕಳ ಮದುವೆ ಮಾಡಿಕೊಟ್ಟರೂ ಆಸ್ತಿಯಲ್ಲಿ ಭಾಗ ನೀಡಬೇಕಿದೆ. ಇದರಿಂದಾಗಿ ಗಂಡು ಮಕ್ಕಳಿಗೆ ಬೇಸರ ಉಂಟಾಗುತ್ತಿದೆ.
ಭಾರತೀಯ ಹಿಂದೂ ಅವಿಭಕ್ತ ಕುಟುಂಬದಲ್ಲಿ ಜನಿಸಿದ ಹೆಣ್ಣು ಮಕ್ಕಳು 2005ಕ್ಕೆ ಮುನ್ನ ತಮ್ಮ ತಂದೆ ತೀರಿಹೋಗಿದ್ದರೂ ಪಿತ್ರಾರ್ಜಿತ ಆಸ್ತಿಯಲ್ಲಿ ಸಿಗಬೇಕಿರುವ ಸಮಪಾಲು ಪಡೆಯಲುಅರ್ಹರು ಎಂಬ ಮಹತ್ವದ ತೀರ್ಪನ್ನು ಸುಪ್ರೀಂ ಕೋರ್ಟ್ ಮಂಗಳವಾರ ಪ್ರಕಟಿಸಿದೆ. ಅಲ್ಲದೆ ತನ್ನಿಂದ ಈ ಸ್ಪಷ್ಟನೆಗಾಗಿ ಕಾಯುತ್ತ, ಇತ್ಯರ್ಥಪಡಿಸದೆ ಇರುವ ಆಸ್ತಿ ಹಕ್ಕು ಪ್ರಕರಣಗಳನ್ನು 6 ತಿಂಗಳೊಳಗೆ ಇತ್ಯರ್ಥಗೊಳಿಸುವಂತೆ ಎಲ್ಲ ಕೆಳ ನ್ಯಾಯಾಲಯಗಳಿಗೆ ಸೂಚಿಸಿದೆ.
https://www.facebook.com/share/r/3HuZMg1p8brYjuXo/?mibextid=D5vuiz
ಹಿಂದೂ ಅವಿಭಕ್ತ ಕುಟುಂಬಗಳ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳು ಸಮಪಾಲು ಪಡೆಯುವ ಹಕ್ಕುಳ್ಳವರು ಎಂದು 2005ರ ಸೆ. 9ರಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಆ ತೀರ್ಪಿನ ಅನ್ವಯ ಹಿಂದೂ ಉತ್ತರಾಧಿಕಾರ ಕಾಯ್ದೆ ರೂಪಿಸಲಾಗಿದೆ. ಆದರೆ 2005ಕ್ಕೂ ಮುನ್ನ ತಂದೆ ತೀರಿದ್ದಲ್ಲಿ ಈ ಕಾಯ್ದೆ ಅನ್ವಯವಾಗುತ್ತದೆಯೇ ಎಂಬ ಪ್ರಶ್ನೆ ಇತ್ತು. ಈಗ ಈ ಕುರಿತಾಗಿ ಸುಪ್ರೀಂ ಕೋರ್ಟ್ ತೀರ್ಪಿನಿಂದ ಸ್ಪಷ್ಟತೆ ಲಭಿಸಿದೆ. ಅಲ್ಲದೆ 2005ರ ತೀರ್ಪಿನ ಅನಂತರ ತಂದೆ ಅಥವಾ ಪುತ್ರಿ ಬದುಕಿದ್ದರೆ ಮಾತ್ರ ಆಸ್ತಿಯಲ್ಲಿ ಸಮಾನ ಹಕ್ಕು ಕೇಳಬಹುದಾಗಿದೆ.
ಈ ತೀರ್ಪಿನಿಂದಾಗಿ 2005ರಲ್ಲಿ ಎಚ್‌ಎಸ್‌ಎ ಕಾಯ್ದೆ ತಿದ್ದುಪಡಿ ಆಗುವುದಕ್ಕೂ ಮುನ್ನ ಅಥವಾ ತಿದ್ದುಪಡಿಯ ಅನಂತರ ಪುತ್ರಿ ಜೀವಂತ ಇರಲಿ, ಇಲ್ಲದಿರಲಿ; ಪಿತ್ರಾರ್ಜಿತ ಆಸ್ತಿಯಲ್ಲಿ ಸಮಾನ ಪಾಲು ಪಡೆಯಲು ಅರ್ಹಳಾಗಿರುತ್ತಾಳೆ. ಪುತ್ರಿ ಜೀವಂತವಾಗಿಲ್ಲದಿದ್ದರೂ ಆಕೆಯ ಮಕ್ಕಳು ತಮ್ಮ ತಾಯಿಗೆ ಸಿಗಬೇಕಾದ ಹಕ್ಕುಗಳನ್ನು ಕೇಳಬಹುದಾಗಿದೆ. ಅದರಿಂದಾಗಿ ಹೆಣ್ಣಿಗೆ, ಹೆಣ್ಣು ಮಕ್ಕಳಿಗೆ ನ್ಯಾಯ ಸಿಕ್ಕಿದೆ . ಆದರೆ ತವರುಮನೆ ಯಲ್ಲಿರುವ ಅಣ್ಣ ತಮ್ಮಂದಿರಿಗೆ ತಲೆನೋವಾಗಿ ಪರಿಣಮಿಸಿದೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.